IND vs SA: ನಾಲ್ವರು ಶೂನ್ಯಕ್ಕೆ ಔಟ್, ಮಿಕ್ಕವರಿಗೆ 10 ರನ್ ಬಾರಿಸಲಾಗಲಿಲ್ಲ! ಕಟಕ್​ನಲ್ಲಿ ಟೀಂ ಇಂಡಿಯಾದ ಪ್ರದರ್ಶನವಿದು

IND vs SA: ಇಡೀ ತಂಡದ 7 ಬ್ಯಾಟ್ಸ್‌ಮನ್‌ಗಳು ಎರಡಂಕಿಯನ್ನೂ ತಲುಪಲಿಲ್ಲ. ಅಂದರೆ, ಅವರಿಂದ 10 ರನ್ ಕೂಡ ದಾಖಲಾಗಿಲ್ಲ. ಆ 7 ಬ್ಯಾಟ್ಸ್‌ಮನ್‌ಗಳಲ್ಲಿ 4 ಮಂದಿ ಖಾತೆ ತೆರೆಯದೆ ಡಗೌಟ್‌ಗೆ ಮರಳಿದರು.

IND vs SA: ನಾಲ್ವರು ಶೂನ್ಯಕ್ಕೆ ಔಟ್, ಮಿಕ್ಕವರಿಗೆ 10 ರನ್ ಬಾರಿಸಲಾಗಲಿಲ್ಲ! ಕಟಕ್​ನಲ್ಲಿ ಟೀಂ ಇಂಡಿಯಾದ ಪ್ರದರ್ಶನವಿದು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on:Jun 12, 2022 | 6:18 PM

ಡೆಲ್ಲಿಯಲ್ಲಿ ಸೋಲು ಕಂಡಿರುವ ಟೀಂ ಇಂಡಿಯಾ (Team India) ಕಟಕ್‌ನಲ್ಲಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಆದರೆ, ಅದಕ್ಕೂ ಮುನ್ನ ಕಟಕ್‌ನಲ್ಲಿ ಟೀಂ ಇಂಡಿಯಾ ಅಂಕಿಅಂಶಗಳು ತಂಡದ ವಿರುದ್ಧ ಇವೆ. ವಿರುದ್ಧ ಮಾತ್ರವಲ್ಲದೆ ಅಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಡಿದ್ದ ಕೆಟ್ಟ ದಾಖಲೆ ಈಗ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಅದರಲ್ಲಿ 7 ಬ್ಯಾಟ್ಸ್‌ಮನ್‌ಗಳು 10 ರನ್ ಗಳಿಸಲು ಸಾಧ್ಯವಾಗಲಿಲ್ಲ, ಅದರಲ್ಲಿಯೂ 4 ಬ್ಯಾಟ್ಸ್‌ಮನ್‌ಗಳಿಗೆ ಖಾತೆ ತೆರೆಯಲು ಕಷ್ಟವಾಯಿತು. ಕಟಕ್‌ನಲ್ಲಿ ಗೆಲುವಿನ ನಿರೀಕ್ಷೆಯಲ್ಲಿರುವ ಭಾರತೀಯ ಅಭಿಮಾನಿಗಳು ಟೀಮ್ ಇಂಡಿಯಾದ ಈ ಭಯಾನಕ ದುರವಸ್ಥೆಯನ್ನು ನೋಡಬೇಕಾಗಿದೆ. ಇದು 7 ವರ್ಷಗಳ ಹಿಂದೆ ನಡೆದ ಘಟನೆಯಾಗಿದ್ದರೂ, ಆದರೆ ಅದೇ ಎದುರಾಳಿ ತಂಡದ ವಿರುದ್ಧ ಈ ಹೀನಾಯ ಪ್ರದರ್ಶನ ಕಂಡುಬಂದಿದ್ದು ಮತ್ತೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಕಟಕ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಕೊನೆಯದಾಗಿ ನಡೆದ ಪಂದ್ಯದ ಬಗ್ಗೆ ನಾವಿಲ್ಲಿ ನಿಮಗೆ ಹೇಳಲಿದ್ದೇವೆ. ವರ್ಷ 2015 ಮತ್ತು ದಿನಾಂಕ 5 ಅಕ್ಟೋಬರ್ ಆಗಿತ್ತು. ಅದೂ ಟಿ20 ಸರಣಿಯ ಎರಡನೇ ಪಂದ್ಯ ಆದರೆ ಅದು 5 ಪಂದ್ಯಗಳ ಟಿ20 ಸರಣಿಯಾಗಿರಲಿಲ್ಲ ಬದಲಿಗೆ 3 ಪಂದ್ಯಗಳ ಟಿ20 ಸರಣಿ ಆಗಿತ್ತು.

ಇದನ್ನೂ ಓದಿ:Indian Captainship: ವರ್ಷಕ್ಕೆ ಆರು ನಾಯಕರು; ಟೀಂ ಇಂಡಿಯಾವನ್ನು ಮುನ್ನಡೆಸಿದ ಆಟಗಾರರಿವರು

ಇದನ್ನೂ ಓದಿ
Image
IND vs SA: 2ನೇ ಟಿ20ಯಲ್ಲಿ ಹರಿಣಗಳಿಗೆ ಸೋಲುಣಿಸಬಲ್ಲ ಟೀಂ ಇಂಡಿಯಾದ ಐವರು ಕ್ರಿಕೆಟಿಗರಿವರು..!
Image
Rishabh Pant: ದುಬಾರಿ ಕಾರು, ಐಷರಾಮಿ ಮನೆ, ಮನ ಮೆಚ್ಚಿದ ಹುಡುಗಿ; ಮಿಲೆನಿಯರ್ ಪಂತ್ ವೈಯಕ್ತಿಕ ಬದುಕಿದು

4 ಬ್ಯಾಟರ್​ಗಳು ಶೂನ್ಯಕ್ಕೆ ಔಟ್

7 ವರ್ಷಗಳ ಹಿಂದೆ ಭಾರತವನ್ನು ದಕ್ಷಿಣ ಆಫ್ರಿಕಾ 17 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳಿಂದ ಸೋಲಿಸಿತ್ತು. ಆ ಪಂದ್ಯದಲ್ಲಿ ಭಾರತದ ಸೋಲಿಗೆ ದೊಡ್ಡ ಕಾರಣ ಅದರ ಕಳಪೆ ಬ್ಯಾಟಿಂಗ್. ಈ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು 100 ರನ್ ಕೂಡ ಗಳಿಸಲಿಲ್ಲ. ಜೊತೆಗೆ 20 ಓವರ್‌ಗಳನ್ನು ಆಡುವುದೂ ಅವರಿಗೆ ಕಷ್ಟಕರವಾಯಿತು.

ಇಡೀ ತಂಡದ 7 ಬ್ಯಾಟ್ಸ್‌ಮನ್‌ಗಳು ಎರಡಂಕಿಯನ್ನೂ ತಲುಪಲಿಲ್ಲ. ಅಂದರೆ, ಅವರಿಂದ 10 ರನ್ ಕೂಡ ದಾಖಲಾಗಿಲ್ಲ. ಆ 7 ಬ್ಯಾಟ್ಸ್‌ಮನ್‌ಗಳಲ್ಲಿ 4 ಮಂದಿ ಖಾತೆ ತೆರೆಯದೆ ಡಗೌಟ್‌ಗೆ ಮರಳಿದರು. ರೋಹಿತ್ ಶರ್ಮಾ ಮತ್ತು ಸುರೇಶ್ ರೈನಾ ಭಾರತದ ಪರ ಗರಿಷ್ಠ ತಲಾ 22 ರನ್ ಗಳಿಸಿದರು. ಅಶ್ವಿನ್ 11 ರನ್ ಗಳಿಸಿ ತಂಡದ ಎರಡನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಈ ಮಧ್ಯೆ, ಎಕ್ಸ್‌ಟ್ರಾಗಳಿಂದ 11 ರನ್ ಬಂದವು ಹೀಗಾಗಿ ಭಾರತ 17.2 ಓವರ್‌ಗಳಲ್ಲಿ 92 ರನ್ ಗಳಿಸಿತು.

6 ವಿಕೆಟ್‌ಗಳಿಂದ ಗೆದ್ದ ದಕ್ಷಿಣ ಆಫ್ರಿಕಾ

ಭಾರತ ನೀಡಿದ 93 ರನ್‌ಗಳ ಸುಲಭ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡ 17.1 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಸಾಧಿಸಿತು. ಇದರೊಂದಿಗೆ 3 ಟಿ20 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಅಜೇಯ ಮುನ್ನಡೆ ಸಾಧಿಸಿತು. ಆಫ್ರಿಕಾ ತಂಡದಿಂದ ಆ ಸುಲಭ ರನ್ ಚೇಸ್‌ನಲ್ಲಿ ಡುಮಿನಿ ಅಜೇಯ 30 ರನ್ ಗಳಿಸಿದರು. ಡೇವಿಡ್ ಮಿಲ್ಲರ್ ಕೂಡ 8 ಎಸೆತಗಳಲ್ಲಿ 10 ರನ್ ಗಳಿಸಿ ಅಜೇಯರಾಗುಳಿದರು.

Published On - 6:18 pm, Sun, 12 June 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ