IND vs SA: 2ನೇ ಟಿ20ಯಲ್ಲಿ ಹರಿಣಗಳಿಗೆ ಸೋಲುಣಿಸಬಲ್ಲ ಟೀಂ ಇಂಡಿಯಾದ ಐವರು ಕ್ರಿಕೆಟಿಗರಿವರು..!

IND vs SA: ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಮ್ಯಾನ್ ಇನ್ ಬ್ಲೂ ತಂಡವು ಹರಿಣಗಳ ವಿರುದ್ಧ 6 ವಿಕೆಟ್‌ಗಳಿಂದ ಸೋತಿತು. 1-0 ಅಂತರದಲ್ಲಿ ಹಿನ್ನಡೆ ಕಂಡರೂ ಟೀಂ ಇಂಡಿಯಾದಲ್ಲಿ ಆತ್ಮವಿಶ್ವಾಸಕ್ಕೆ ಕೊರತೆ ಇಲ್ಲ.

IND vs SA: 2ನೇ ಟಿ20ಯಲ್ಲಿ ಹರಿಣಗಳಿಗೆ ಸೋಲುಣಿಸಬಲ್ಲ ಟೀಂ ಇಂಡಿಯಾದ ಐವರು ಕ್ರಿಕೆಟಿಗರಿವರು..!
Follow us
TV9 Web
| Updated By: ಪೃಥ್ವಿಶಂಕರ

Updated on: Jun 12, 2022 | 5:12 PM

ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ರಿಷಬ್ ಪಂತ್ (Rishabh Pant) ನೇತೃತ್ವದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಟೆಂಬಾ ಬವುಮಾ (Temba Bavuma) ವಿರುದ್ಧ ಸೆಣಸಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯ (T20 series) ಮೊದಲ ಪಂದ್ಯದಲ್ಲಿ ಮ್ಯಾನ್ ಇನ್ ಬ್ಲೂ ತಂಡವು ಹರಿಣಗಳ ವಿರುದ್ಧ 6 ವಿಕೆಟ್‌ಗಳಿಂದ ಸೋತಿತು. 1-0 ಅಂತರದಲ್ಲಿ ಹಿನ್ನಡೆ ಕಂಡರೂ ಟೀಂ ಇಂಡಿಯಾದಲ್ಲಿ ಆತ್ಮವಿಶ್ವಾಸಕ್ಕೆ ಕೊರತೆ ಇಲ್ಲ. ಇಂದು ಆಫ್ರಿಕಾಗೆ ಸೋಲಿನ ರುಚಿ ತೋರುವ ಮೂಲಕ ಟೀಂ ಇಂಡಿಯಾ ಗೆಲುವಿನ ಟ್ರ್ಯಾಕ್​ಗೆ ಮರಳಲು ಹಂಬಲಿಸುತ್ತಿದೆ.

ಟೀಂ ಇಂಡಿಯಾಗೆ ವರವಾಗಬಲ್ಲ 5 ಭಾರತೀಯ ಕ್ರಿಕೆಟಿಗರಿವರು

1) ಇಶಾನ್ ಕಿಶನ್- ಇಶಾನ್ ಕಿಶನ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ T20 ಪಂದ್ಯದಲ್ಲು 48 ಎಸೆತಗಳಲ್ಲಿ 76 ರನ್ ಗಳಿಸಿದರು. ಇಶಾನ್ 11 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 7 ರನ್ ಗಳಿಸಿದರು. ಹೀಗಾಗಿ ಎರಡನೇ ಪಂದ್ಯದಲ್ಲೂ ಕಿಶನ್ ಲಯ ಕಾಯ್ದುಕೊಳ್ಳಬಹುದೇ ಎಂಬ ಮೇಲೆ ಕ್ರಿಕೆಟ್ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ
Image
Rishabh Pant: ದುಬಾರಿ ಕಾರು, ಐಷರಾಮಿ ಮನೆ, ಮನ ಮೆಚ್ಚಿದ ಹುಡುಗಿ; ಮಿಲೆನಿಯರ್ ಪಂತ್ ವೈಯಕ್ತಿಕ ಬದುಕಿದು
Image
Indian Captainship: ವರ್ಷಕ್ಕೆ ಆರು ನಾಯಕರು; ಟೀಂ ಇಂಡಿಯಾವನ್ನು ಮುನ್ನಡೆಸಿದ ಆಟಗಾರರಿವರು

2) ರಿಷಬ್ ಪಂತ್- ಮೊದಲ ಟಿ20 ಪಂದ್ಯದಲ್ಲಿ ರಿಷಬ್ ಪಂತ್ 16 ಎಸೆತಗಳಲ್ಲಿ 29 ರನ್ ಗಳಿಸಿದರು. ಆದಾಗ್ಯೂ, ಪಂತ್ ಯಾವುದೇ ಕ್ಷಣದಲ್ಲಿ ಬೌಲರ್​ಗಳ ಮೇಲೆ ಮುರಿದುಬೀಳುವ ಆಟಗಾರ. ಹೀಗಾಗಿ ಸರಣಿ ಆರಂಭಕ್ಕೂ ಮುನ್ನ ಕೆಎಲ್ ರಾಹುಲ್ ಹಠಾತ್ ಗಾಯಗೊಂಡಾಗ ಆಯ್ಕೆದಾರರು ಪಂತ್ ಮೇಲೆ ನಂಬಿಕೆ ಇಟ್ಟರು. ಆದ್ದರಿಂದ, ಭಾನುವಾರ ರಾತ್ರಿ ಕ್ಯಾಪ್ಟನ್ ಪಂತ್ ಮೇಲೆ ಎಲ್ಲರ ಗಮನ ಇರಲಿದೆ.

ಇದನ್ನೂ ಓದಿ:IND vs SA: ಚೊಚ್ಚಲ ಪಂದ್ಯದಲ್ಲಿ ಪಂತ್ ನಾಯಕತ್ವವನ್ನು ಬೌಲಿಂಗ್ ವಿಭಾಗವೇ ಮುಳುಗಿಸಿದ್ದು; ಭುವನೇಶ್ವರ್ ಕುಮಾರ್

3) ಹಾರ್ದಿಕ್ ಪಾಂಡ್ಯ- ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ದೀರ್ಘಕಾಲದ ಅನಾರೋಗ್ಯದ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಜೊತೆಗೆ ಈ ಸರಣಿಯಲ್ಲಿ ಪಾಂಡ್ಯ ತಂಡದ ಉಪನಾಯಕರಾಗಿದ್ದಾರೆ. ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಕೂಡ ಅವರಲ್ಲಿದೆ. ಬಾವುಮಾ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ಹಾರ್ದಿಕ್ 12 ಎಸೆತಗಳಲ್ಲಿ ಔಟಾಗದೆ 31 ರನ್ ಗಳಿಸಿದ್ದರು.

4) ಯುಜ್ಬೇಂದ್ರ ಚಹಾಲ್ – ಸರಣಿಯ ಮೊದಲ T20 ನಲ್ಲಿ ಭಾರತ 6 ಬೌಲರ್‌ಗಳನ್ನು ಆಡಿಸಿತ್ತು. ಭಾರತದ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ಬೇಂದ್ರ ಚಹಾಲ್ 2.1 ಓವರ್ ಬೌಲ್ ಮಾಡುವ ಅವಕಾಶ ಪಡೆದರು. ಅಂದು ಅವರು 26 ರನ್ ನೀಡಿ ಯಾವುದೇ ವಿಕೆಟ್ ಪಡೆಯಲಿಲ್ಲ. ಕಟಕ್ ಸ್ಟೇಡಿಯಂನಲ್ಲಿ ಅವರು ತಮ್ಮ ಅತ್ಯುತ್ತಮ ಅಸ್ತ್ರವನ್ನು ಬಳಸಿದರೆ, ಎದುರಾಳಿಯ ವೇಗದ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಪೆವಿಲಿಯನ್​ಗೆ ಅಟ್ಟಬಹುದು.

5) ಉಮ್ರಾನ್ ಮಲಿಕ್ – ಉಮ್ರಾನ್ ಮಲಿಕ್ ರಾಷ್ಟ್ರೀಯ ತಂಡದ ಜೆರ್ಸಿಯಲ್ಲಿ ಚೊಚ್ಚಲ ಪ್ರವೇಶಕ್ಕಾಗಿ ಎದುರು ನೋಡುತ್ತಿದ್ದಾರೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಜಮ್ಮು ಮತ್ತು ಕಾಶ್ಮೀರದ ಮಗ ಉಮ್ರಾನ್‌ನನ್ನು ನೀಲಿ ಜೆರ್ಸಿಯಲ್ಲಿ ನೋಡಲು ಬಯಸುತ್ತಿದ್ದಾರೆ. ಉಮ್ರಾನ್ ಇಂದು ಪಾದಾರ್ಪಣೆ ಮಾಡಿದರೆ, ಅವರತ್ತ ವಿಶೇಷ ಗಮನ ಇರಲಿದೆ.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ