IND vs SA: ಚೊಚ್ಚಲ ಪಂದ್ಯದಲ್ಲಿ ಪಂತ್ ನಾಯಕತ್ವವನ್ನು ಬೌಲಿಂಗ್ ವಿಭಾಗವೇ ಮುಳುಗಿಸಿದ್ದು; ಭುವನೇಶ್ವರ್ ಕುಮಾರ್

IND vs SA: ನಮ್ಮ ಬೌಲಿಂಗ್ ಉತ್ತಮವಾಗಿರಲಿಲ್ಲ, ಹೀಗಾಗಿ ನಾವು ನಾಯಕನನ್ನು ಮುಳುಗಿಸಿದೇವು. ನಾವು ಉತ್ತಮವಾಗಿ ಬೌಲಿಂಗ್ ಮಾಡಿದ್ದರೆ, ಬಹುಶಃ ಅವರ ನಿರ್ಧಾರಗಳಿಗೆ ಮನ್ನಣೆ ನೀಡಬಹುದಿತ್ತು.

IND vs SA: ಚೊಚ್ಚಲ ಪಂದ್ಯದಲ್ಲಿ ಪಂತ್ ನಾಯಕತ್ವವನ್ನು ಬೌಲಿಂಗ್ ವಿಭಾಗವೇ ಮುಳುಗಿಸಿದ್ದು; ಭುವನೇಶ್ವರ್ ಕುಮಾರ್
ರಿಷಬ್ ಪಂತ್
Follow us
| Updated By: ಪೃಥ್ವಿಶಂಕರ

Updated on: Jun 12, 2022 | 7:05 AM

ದಕ್ಷಿಣ ಆಫ್ರಿಕಾ ವಿರುದ್ಧದ T20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋತಿದೆ (INDvsSA). ಈ ಮೂಲಕ ಸತತ 13 ಪಂದ್ಯಗಳನ್ನು ಗೆದ್ದು ವಿಶ್ವ ದಾಖಲೆ ಮಾಡುವ ಭಾರತದ ಕನಸಿಗೆ ಬ್ರೇಕ್ ಕೂಡ ಬಿದ್ದಿದೆ. ದೆಹಲಿಯ ಫಿರೋಜ್‌ಶಾ ಕೋಟ್ಲಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್‌ಗಳ ಜಯ ಸಾಧಿಸಿತ್ತು. ಭಾರತದ ಬ್ಯಾಟಿಂಗ್ ವಿಭಾಗದ ಪ್ರದರ್ಶನವನ್ನು ಪ್ರಶ್ನಿಸಲು ಯಾರಿಗೂ ಅವಕಾಶವಿಲ್ಲ. ಆದರೆ ಬೌಲರ್‌ಗಳು ಭಾರತವನ್ನು ಸ್ವಲ್ಪ ಸಮಯದವರೆಗೆ ಪಂದ್ಯದಲ್ಲಿ ಉಳಿಸಿಕೊಂಡರು. ಆದರೆ ಡೇವಿಡ್ ಮಿಲ್ಲರ್ ಮತ್ತು ರೊಸ್ಸಿ ವ್ಯಾನ್ ಡೆರ್ ದುಸೇನ್ (David Miller and Rossi van der Dussen) ಪಂದ್ಯವನ್ನು ತಮ್ಮತ್ತ ತಿರುಗಿಸಿಕೊಂಡರು. ಈಗ ಭಾರತ ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ (Bhubaneswar Kumar) ಅವರು ತಮ್ಮ ಚೊಚ್ಚಲ ಪಂದ್ಯದಲ್ಲಿ ರಿಷಬ್ ಪಂತ್ (Rishabh Pant) ಅವರನ್ನು ಬೌಲಿಂಗ್ ವಿಭಾಗವೇ ಮುಳುಗಿಸಿದ್ದು ಎಂದು ಒಪ್ಪಿಕೊಂಡಿದ್ದಾರೆ. ಎರಡನೇ ಟಿ20 ನಾಳೆ ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯದ ಹಿಂದಿನ ದಿನ ಸುದ್ದಿಗೋಷ್ಠಿಯಲ್ಲಿ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಉಪಸ್ಥಿತರಿದ್ದು, ಮೊದಲ ಪಂದ್ಯದ ಸೋಲಿಗೆ ಕಾರಣ ತಿಳಿಸಿದರು.

ನಾಯಕನನ್ನು ಮುಳುಗಿಸಿದೇವು

ಇದನ್ನೂ ಓದಿ
Image
IND vs SA: ಟೀಂ ಇಂಡಿಯಾದ ಮ್ಯಾಚ್ ಪ್ರಾಕ್ಟೀಸ್​​ ನೋಡಲು ಬಂದ ಫ್ಯಾನ್ಸ್; ಭರ್ತಿಯಾಯ್ತು ಇಡೀ ಸ್ಟೇಡಿಯಂ
Image
IND vs SA: ಮಿಲ್ಲರ್ ಔಟ್ ಮಾಡುವುದು ಹೇಗೆ? ಟೀಂ ಇಂಡಿಯಾ ಬೌಲರ್​ಗಳಿಗೆ ವಿಡಿಯೋ ಸಲಹೆ ನೀಡಿದ ಟರ್ಬನೇಟರ್
Image
ENG vs NZ: ಆಂಗ್ಲರೆದುರು ಕಿವೀಸ್ ಬ್ಯಾಟರ್​ಗಳ ಶತಕದಬ್ಬರ! 22 ವರ್ಷಗಳ ಹಳೆಯ ದಾಖಲೆ ಉಡೀಸ್

ನಾಯಕ ರಿಷಬ್ ಪಂಥ್ ಪಕ್ಕದಲ್ಲಿ ನಿಂತ ಮಾತನಾಡಿದ ಭುಬಿ, ‘ರಿಷಭ್ ಯುವ ನಾಯಕ. ನಾಯಕನಾಗಿ ಇದು ಅವರ ಮೊದಲ ಪಂದ್ಯವಾಗಿತ್ತು. ಮುಂದಿನ ದಿನಗಳಲ್ಲಿ ಅವರ ನಾಯಕತ್ವ ಉತ್ತಮವಾಗಲಿದೆ ಎಂದು ನನಗೆ ಖಾತ್ರಿಯಿದೆ. ಸಾಮಾನ್ಯವಾಗಿ ನಾವು ಹೇಳುವುದೇನೆಂದರೆ, ತಂಡವು ಉತ್ತಮ ಪ್ರದರ್ಶನ ನೀಡಿದರೆ, ನಾಯಕನನ್ನು ಉತ್ತಮ ಎಂದು ಕರೆಯಲಾಗುತ್ತದೆ. ಇದು ತಂಡದ ಪ್ರದರ್ಶನವನ್ನು ಅವಲಂಬಿಸಿರುತ್ತದೆ ಎಂದಿದ್ದಾರೆ. ಜೊತೆಗೆ ಮುಂದುವರೆದು ಮಾತನಾಡಿದ ಭುವಿ, ನಮ್ಮ ಬೌಲಿಂಗ್ ಉತ್ತಮವಾಗಿರಲಿಲ್ಲ, ಹೀಗಾಗಿ ನಾವು ನಾಯಕನನ್ನು ಮುಳುಗಿಸಿದೇವು. ನಾವು ಉತ್ತಮವಾಗಿ ಬೌಲಿಂಗ್ ಮಾಡಿದ್ದರೆ, ಬಹುಶಃ ಅವರ ನಿರ್ಧಾರಗಳಿಗೆ ಮನ್ನಣೆ ನೀಡಬಹುದಿತ್ತು. ಅವರು ನಾಯಕನಾಗಿ ಸುಧಾರಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:IND vs SA: ಮಿಲ್ಲರ್ ಔಟ್ ಮಾಡುವುದು ಹೇಗೆ? ಟೀಂ ಇಂಡಿಯಾ ಬೌಲರ್​ಗಳಿಗೆ ವಿಡಿಯೋ ಸಲಹೆ ನೀಡಿದ ಟರ್ಬನೇಟರ್

ನಿಯಮಿತ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಜೊತೆಗೆ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಮಿ ಅವರಂತಹ ವೇಗಿಗಳಿಗೆ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಬೌಲಿಂಗ್ ದಾಳಿಯಲ್ಲಿ ಭುವನೇಶ್ವರ್ ಕುಮಾರ್ ಅತ್ಯಂತ ಅನುಭವಿ. 211 ರನ್​ಗಳ ಬಂಡವಾಳವಿದ್ದರೂ ಪಂದ್ಯ ಗೆಲ್ಲಲಾಗದ ಹತಾಶೆಯಲ್ಲಿ ಮುಳುಗಲು ಭುಬಿ ಹಿಂದೇಟು ಹಾಕುತ್ತಿದ್ದಾರೆ. ಬದಲಿಗೆ ಭುವಿ ತಮ್ಮ ದೃಷ್ಟಿಯನ್ನು ಉಳಿದ ಪಂದ್ಯಗಳ ಮೇಲೆ ಇರಿಸಿದ್ದಾರೆ. ಕಳೆದ ಪಂದ್ಯದ ಬಗ್ಗೆ ನಾವು ಹೆಚ್ಚು ಮಾತನಾಡುವುದಿಲ್ಲ. ಅಂದು ನಮ್ಮ ಬೌಲಿಂಗ್ ವಿಭಾಗ ಕೆಟ್ಟ ದಿನವನ್ನು ಹೊಂದಿತ್ತು. ಆದರೆ ಮುಂದಿನ ಪಂದ್ಯದಲ್ಲಿ ತಿರುಗೇಟು ನೀಡಲು ಬಯಸುತ್ತೇನೆ ಎಂದು ಭುವಿ ಹೇಳಿದ್ದಾರೆ. ಐಪಿಎಲ್‌ನ ಮೊದಲ ಪಂದ್ಯದಲ್ಲಿ ಎಲ್ಲರೂ ಆಡಿದ್ದರು. ಐಪಿಎಲ್‌ನಲ್ಲಿ ಬಹುತೇಕ ಎಲ್ಲರೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಎಲ್ಲರಿಗೂ ಮತ್ತೆ ನಾವು ಗೆಲುವಿನ ಟ್ರ್ಯಾಕ್​ಗೆ ಮರಳಲು ಏನು ಮಾಡಬೇಕೆಂದು ತಿಳಿದಿದೆ ಎಂದು ಹೇಳುತ್ತಾ ತಮ್ಮ ಮುಂದಿನ ಪಂದ್ಯದ ಗೇಮ್ ಪ್ಲಾನ್​ ಬಗ್ಗೆ ವಿವರಿಸಿದ್ದಾರೆ.

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ