Updated on:Jun 11, 2022 | 8:55 PM
ಈ ಸಮಯದಲ್ಲಿ, ಪ್ರೇಕ್ಷಕರು ಟೀಂ ಇಂಡಿಯಾ ನಾಯಕ ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್ ಮತ್ತು ಉಮ್ರಾನ್ ಮಲಿಕ್ ಅವರಂತಹ ಸ್ಟಾರ್‌ಗಳನ್ನು ತುಂಬಾ ಹತ್ತಿರದಿಂದ ನೋಡಿದರು ಮತ್ತು ಅವರನ್ನು ಪ್ರೋತ್ಸಾಹಿಸಿದರು. ಬಾರಾಬತಿ ಕ್ರೀಡಾಂಗಣದಲ್ಲಿ ಭಾನುವಾರದಂದು ಹಬ್ಬದ ವಾತಾವರಣ ಕಡಿಮೆಯೇನಿಲ್ಲ ಎಂಬುದನ್ನು ಈ ಜನಸಂದಣಿಯಿಂದ ಊಹಿಸಬಹುದು.
ಸುಮಾರು ಎರಡೂವರೆ ವರ್ಷಗಳ ನಂತರ ಕಟಕ್‌ನಲ್ಲಿ ಅಂತರಾಷ್ಟ್ರೀಯ ಪಂದ್ಯ ನಡೆಯಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಪ್ರೇಕ್ಷಕರಲ್ಲಿ ಭಾರೀ ಉತ್ಸಾಹ ಮೂಡಿದೆ. ಈ ಉತ್ಸಾಹವು ಕೆಲವು ದಿನಗಳ ಹಿಂದೆ ಟಿಕೆಟ್ ಮಾರಾಟದ ಸಮಯದಲ್ಲಿ ಗೊಂದಲಕ್ಕೆ ತಿರುಗಿತ್ತು, ಇದರಿಂದಾಗಿ ಪೊಲೀಸರು ಲಾಠಿ ಬಲವನ್ನು ಬಳಸಬೇಕಾಯಿತು.
ಟೀಂ ಇಂಡಿಯಾ ಮಾತ್ರವಲ್ಲ, ದಕ್ಷಿಣ ಆಫ್ರಿಕಾ ತಂಡವೂ ಈ ಮೊದಲು ಬಾರಾಬತಿ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸಿ ಪರಿಸ್ಥಿತಿಗಳನ್ನು ಅವಲೋಕಿಸಿತು. ದೆಹಲಿಯಲ್ಲಿ ನಡೆದ ಮೊದಲ ಪಂದ್ಯವನ್ನು ಆಫ್ರಿಕಾ ತಂಡ 7 ವಿಕೆಟ್ಗಳಿಂದ ಗೆದ್ದುಕೊಂಡಿದ್ದು, ಇದೀಗ ಆಫ್ರಿಕಾ ತಂಡ ಇಲ್ಲಿಯೂ ಗೆದ್ದು ಬಲಿಷ್ಠ ಹೆಜ್ಜೆ ಇಡಲು ಬಯಸಿದ್ದು, ಟೀಂ ಇಂಡಿಯಾ ಸಮಬಲ ಸಾಧಿಸಲು ಪ್ರಯತ್ನಿಸಲಿದೆ.
Published On - 8:42 pm, Sat, 11 June 22