AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಟೀಂ ಇಂಡಿಯಾದ ಮ್ಯಾಚ್ ಪ್ರಾಕ್ಟೀಸ್​​ ನೋಡಲು ಬಂದ ಫ್ಯಾನ್ಸ್; ಭರ್ತಿಯಾಯ್ತು ಇಡೀ ಸ್ಟೇಡಿಯಂ

IND vs SA: ಜೂನ್ 12 ರ ಭಾನುವಾರ ಕಟಕ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ 20 ಸರಣಿಯ ಎರಡನೇ ಪಂದ್ಯ ನಡೆಯಲಿದ್ದು, ಟೀಮ್ ಇಂಡಿಯಾ ಸರಣಿಯನ್ನು ಸಮಬಲಗೊಳಿಸಲು ಪ್ರಯತ್ನಿಸಲಿದೆ.

ಪೃಥ್ವಿಶಂಕರ
|

Updated on:Jun 11, 2022 | 8:55 PM

Share
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವು ಒಡಿಶಾದ ಕಟಕ್‌ನಲ್ಲಿ ಭಾನುವಾರ ಜೂನ್ 12 ರಂದು ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಈಗಾಗಲೇ ಕಟಕ್ ತಲುಪಿದ್ದು, ತಮ್ಮ ಸಿದ್ಧತೆಯಲ್ಲಿ ನಿರತವಾಗಿವೆ. ಕಟಕ್‌ನಲ್ಲಿ ಈ ಪಂದ್ಯದ ಬಗ್ಗೆ ರೋಮಾಂಚನವಿದೆ ಮತ್ತು ಇದು ಟಿಕೆಟ್ ಮಾರಾಟದಿಂದ ಟೀಮ್ ಇಂಡಿಯಾದ ಅಭ್ಯಾಸದವರೆಗೆ ಗೋಚರಿಸಿತು, ಅದು ಎಷ್ಟರಮಟ್ಟಿಗೆ ಎಂದರೆ ಕೇವಲ ಮ್ಯಾಚ್​ ಪ್ರಾಕ್ಟೀಸ್​ಗೇನೆ ಇಡೀ ಕ್ರೀಡಾಂಗಣ ಫುಲ್ ಭರ್ತಿಯಾಗಿತ್ತು.

1 / 5
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಜೂನ್ 11 ರ ಶನಿವಾರದಂದು ಪಂದ್ಯಕ್ಕೆ ಒಂದು ದಿನ ಮೊದಲು ಟೀಮ್ ಇಂಡಿಯಾದ ಅಭ್ಯಾಸದ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ, ಇದರಲ್ಲಿ ಸಾವಿರಾರು ಪ್ರೇಕ್ಷಕರು ಕ್ರೀಡಾಂಗಣದ ಆಸನಗಳಲ್ಲಿ ಕುಳಿತಿರುವುದು ಕಂಡುಬಂದಿದೆ.

2 / 5
IND vs SA: ಟೀಂ ಇಂಡಿಯಾದ ಮ್ಯಾಚ್ ಪ್ರಾಕ್ಟೀಸ್​​ ನೋಡಲು ಬಂದ ಫ್ಯಾನ್ಸ್; ಭರ್ತಿಯಾಯ್ತು ಇಡೀ ಸ್ಟೇಡಿಯಂ

ಈ ಸಮಯದಲ್ಲಿ, ಪ್ರೇಕ್ಷಕರು ಟೀಂ ಇಂಡಿಯಾ ನಾಯಕ ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್ ಮತ್ತು ಉಮ್ರಾನ್ ಮಲಿಕ್ ಅವರಂತಹ ಸ್ಟಾರ್‌ಗಳನ್ನು ತುಂಬಾ ಹತ್ತಿರದಿಂದ ನೋಡಿದರು ಮತ್ತು ಅವರನ್ನು ಪ್ರೋತ್ಸಾಹಿಸಿದರು. ಬಾರಾಬತಿ ಕ್ರೀಡಾಂಗಣದಲ್ಲಿ ಭಾನುವಾರದಂದು ಹಬ್ಬದ ವಾತಾವರಣ ಕಡಿಮೆಯೇನಿಲ್ಲ ಎಂಬುದನ್ನು ಈ ಜನಸಂದಣಿಯಿಂದ ಊಹಿಸಬಹುದು.

3 / 5
IND vs SA: ಟೀಂ ಇಂಡಿಯಾದ ಮ್ಯಾಚ್ ಪ್ರಾಕ್ಟೀಸ್​​ ನೋಡಲು ಬಂದ ಫ್ಯಾನ್ಸ್; ಭರ್ತಿಯಾಯ್ತು ಇಡೀ ಸ್ಟೇಡಿಯಂ

ಸುಮಾರು ಎರಡೂವರೆ ವರ್ಷಗಳ ನಂತರ ಕಟಕ್‌ನಲ್ಲಿ ಅಂತರಾಷ್ಟ್ರೀಯ ಪಂದ್ಯ ನಡೆಯಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಪ್ರೇಕ್ಷಕರಲ್ಲಿ ಭಾರೀ ಉತ್ಸಾಹ ಮೂಡಿದೆ. ಈ ಉತ್ಸಾಹವು ಕೆಲವು ದಿನಗಳ ಹಿಂದೆ ಟಿಕೆಟ್ ಮಾರಾಟದ ಸಮಯದಲ್ಲಿ ಗೊಂದಲಕ್ಕೆ ತಿರುಗಿತ್ತು, ಇದರಿಂದಾಗಿ ಪೊಲೀಸರು ಲಾಠಿ ಬಲವನ್ನು ಬಳಸಬೇಕಾಯಿತು.

4 / 5
IND vs SA: ಟೀಂ ಇಂಡಿಯಾದ ಮ್ಯಾಚ್ ಪ್ರಾಕ್ಟೀಸ್​​ ನೋಡಲು ಬಂದ ಫ್ಯಾನ್ಸ್; ಭರ್ತಿಯಾಯ್ತು ಇಡೀ ಸ್ಟೇಡಿಯಂ

ಟೀಂ ಇಂಡಿಯಾ ಮಾತ್ರವಲ್ಲ, ದಕ್ಷಿಣ ಆಫ್ರಿಕಾ ತಂಡವೂ ಈ ಮೊದಲು ಬಾರಾಬತಿ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸಿ ಪರಿಸ್ಥಿತಿಗಳನ್ನು ಅವಲೋಕಿಸಿತು. ದೆಹಲಿಯಲ್ಲಿ ನಡೆದ ಮೊದಲ ಪಂದ್ಯವನ್ನು ಆಫ್ರಿಕಾ ತಂಡ 7 ವಿಕೆಟ್​ಗಳಿಂದ ಗೆದ್ದುಕೊಂಡಿದ್ದು, ಇದೀಗ ಆಫ್ರಿಕಾ ತಂಡ ಇಲ್ಲಿಯೂ ಗೆದ್ದು ಬಲಿಷ್ಠ ಹೆಜ್ಜೆ ಇಡಲು ಬಯಸಿದ್ದು, ಟೀಂ ಇಂಡಿಯಾ ಸಮಬಲ ಸಾಧಿಸಲು ಪ್ರಯತ್ನಿಸಲಿದೆ.

5 / 5

Published On - 8:42 pm, Sat, 11 June 22

Follow Us
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್