IPL Media Rights: 23 ಸಾವಿರ ಕೋಟಿಗೆ ಮಾರಾಟವಾದ ಐಪಿಎಲ್ ಟಿವಿ ರೈಟ್ಸ್
IPL Media Rights: ಭಾನುವಾರ ನಡೆದ ಹರಾಜಿನಲ್ಲಿ ಟಿವಿ ಪ್ರಸಾರ ಹಕ್ಕುಗಳಿಗಾಗಿ ಸೋನಿ ನೆಟ್‌ವರ್ಕ್, ರಿಲಯನ್ಸ್ ವಯಾಕಾಮ್ 18 ಮತ್ತು ಸ್ಟಾರ್ ನೆಟ್‌ವರ್ಕ್ ನಡುವೆ ತೀವ್ರ ಪೈಪೋಟಿ ಕಂಡು ಬಂದಿತ್ತು.
IPL Media Rights: 2023 ರಿಂದ 2027 ರವರೆಗಿನ ಮುಂದಿನ ಐದು ವರ್ಷಗಳ ಅವಧಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನೇರ ಪ್ರಸಾರದ ಟಿವಿ ಹಕ್ಕುಗಳನ್ನು ಬರೋಬ್ಬರಿ 23,370 ಕೋಟಿಗೆ ಡಿಸ್ನಿ (ಸ್ಟಾರ್ ನೆಟ್‌ವರ್ಕ್) ಪಡೆದುಕೊಂಡಿದೆ ಎಂದು ವರದಿಯಾಗಿದೆ. ಅದರಂತೆ ಮುಂಬರುವ ಸೀಸನ್ ಐಪಿಎಲ್ ಸ್ಟಾರ್ ಚಾನೆಲ್ನಲ್ಲಿ ಪ್ರಸಾರವಾಗಲಿದೆ. 2017 ರಿಂದ 16 ಸಾವಿರ ಕೋಟಿಗೂ ಅಧಿಕ ಮೊತ್ತಕ್ಕೆ ಪ್ರಸಾರ ಹಕ್ಕನ್ನು ಪಡೆಯಲು ಸ್ಟಾರ್ ನೆಟ್‌ವರ್ಕ್ ಈ ಬಾರಿ ಮತ್ತೆ 23 ಸಾವಿರಕ್ಕೂ ಅಧಿಕ ಮೊತ್ತ ನೀಡಿ ಐದು ವರ್ಷಗಳ ಐಪಿಎಲ್ ಪ್ರಸಾರ ಹಕ್ಕನ್ನು ಪಡೆದುಕೊಂಡಿದೆ.
ಅಂದರೆ ಐಪಿಎಲ್ನ ಪ್ರತಿ ಪಂದ್ಯಗಳಿಗೆ ಸ್ಟಾರ್ ನೆಟ್‌ವರ್ಕ್ ಸಂಸ್ಥೆಯು 57 ಕೋಟಿ ರೂ. ನೀಡಲಿದೆ. ಇದರೊಂದಿಗೆ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎಂಬ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾದಂತಾಗಿದೆ. ಇದಾಗ್ಯೂ ಡಿಜಿಟಲ್ ಪ್ರಸಾರ ಹಕ್ಕುಗಳಿಗಾಗಿ ಪೈಪೋಟಿ ಮುಂದುವರೆದಿದ್ದು, ಈಗಾಗಲೇ 19,700 ಕೋಟಿವರೆಗೂ ಬಿಡ್ಡಿಂಗ್ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಅಂದರೆ ಪ್ರತಿ ಪಂದ್ಯಕ್ಕೆ 48.04 ಕೋಟಿ ರೂ. ಗೆ ಬಂದು ನಿಂತಿದೆ. ಇದಾಗ್ಯೂ ಡಿಜಿಟಲ್ ರೈಟ್ಸ್ಗಾಗಿ ಪೈಪೋಟಿ ಮುಂದುವರೆದಿದ್ದು, ಹೀಗಾಗಿ ಅಂತಿಮವಾಗಿ ಯಾರಾ ಪಾಲಾಗಲಿದೆ ಕಾದು ನೋಡಬೇಕಿದೆ.
ಭಾನುವಾರ ನಡೆದ ಹರಾಜಿನಲ್ಲಿ ಟಿವಿ ಪ್ರಸಾರ ಹಕ್ಕುಗಳಿಗಾಗಿ ಸೋನಿ ನೆಟ್‌ವರ್ಕ್, ರಿಲಯನ್ಸ್ ವಯಾಕಾಮ್ 18 ಮತ್ತು ಸ್ಟಾರ್ ನೆಟ್‌ವರ್ಕ್ ನಡುವೆ ತೀವ್ರ ಪೈಪೋಟಿ ಕಂಡು ಬಂದಿತ್ತು. ಹಾಗೆಯೇ ಡಿಜಿಟಲ್ ಹಕ್ಕುಗಳಿಗಾಗಿ ಡಿಸ್ನಿ ಹಾಟ್‌ಸ್ಟಾರ್, ಝೀ ಮತ್ತು ರಿಲಯನ್ಸ್ ಜಿಯೋ (Viacom18) ಉತ್ತಮ ಬಿಡ್ಡಿಂಗ್ ನಡೆಸಿದೆ.
ಹೇಗೆ ನಡೆಯುತ್ತಿದೆ ಐಪಿಎಲ್ ನೇರ ಪ್ರಸಾರ ಹಕ್ಕಿನ ಬಿಡ್ಡಿಂಗ್? ಈ ಬಾರಿ ಬಿಸಿಸಿಐ ನಾಲ್ಕು ಹಕ್ಕುಗಳ ಟೆಂಡರ್ ಮೂಲಕ ಹರಾಜು ನಡೆಸುತ್ತಿರುವುದು ವಿಶೇಷ. ಅಂದರಂತೆ ಮೊದಲ ಎರಡು ಪ್ಯಾಕೇಜ್ನಲ್ಲೇ 43 ಸಾವಿರಕ್ಕೂ ಅಧಿಕ ಕೋಟಿ ಮೊತ್ತದ ಆದಾಯ ಬಿಸಿಸಿಐಗೆ ಲಭಿಸಿದೆ. ಅಂದರೆ ಇಲ್ಲಿ ಪ್ಯಾಕೇಜ್ ಅನ್ನು ನಾಲ್ಕು ಟೆಂಡರ್ಗಳಾಗಿ ವಿಂಗಡಿಸಲಾಗಿದೆ. ಈ ನಾಲ್ಕು ಟೆಂಡರ್ಗಳು ಈ ಕೆಳಗಿನಂತಿವೆ.
- ಪ್ಯಾಕೇಜ್ ಎ – ಭಾರತೀಯ ಉಪಖಂಡದಲ್ಲಿ ನೇರ ಪ್ರಸಾರ: ಈ ಹರಾಜು 49 ಕೋಟಿಯಿಂದ ಪ್ರಾರಂಭವಾಗುತ್ತದೆ.
- ಪ್ಯಾಕೇಜ್ ಬಿ – ಭಾರತೀಯ ಉಪಖಂಡದಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ನೇರ ಪ್ರಸಾರ: ಈ ಹರಾಜು 33 ಕೋಟಿಯಿಂದ ಪ್ರಾರಂಭವಾಗುತ್ತದೆ.
- ಪ್ಯಾಕೇಜ್ ಸಿ– ನಾನ್ ಎಕ್ಸ್‌ಕ್ಲೂಸಿವ್ : ಕೆಲ ಪ್ರಮುಖ ಪಂದ್ಯಗಳ ನೇರ ಪ್ರಸಾರವನ್ನು ಒಳಗೊಂಡಿರುತ್ತದೆ: ಈ ಹರಾಜು 18 ಕೋಟಿಯಿಂದ ಪ್ರಾರಂಭವಾಗುತ್ತದೆ.
- ಪ್ಯಾಕೇಜ್ ಡಿ – ರೆಸ್ಟ್ ಆಫ್ ವರ್ಲ್ಡ್: ವಿದೇಶಗಳಲ್ಲಿ ಐಪಿಎಲ್ ನೇರ ಪ್ರಸಾರದ ಹಕ್ಕು. ಈ ಬಿಡ್ಡಿಂಗ್ 3 ಕೋಟಿಯಿಂದ ಪ್ರಾರಂಭವಾಗುತ್ತದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:08 pm, Mon, 13 June 22