AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL Media Rights: ಪ್ರತಿ ಪಂದ್ಯಕ್ಕೆ 50 ಕೋಟಿ ರೂ: ಐಪಿಎಲ್​ ಡಿಜಿಟಲ್ ಹಕ್ಕು ಮಾರಾಟ..!

IPL Digital Rights: ಈ ವಿಭಾಗದಲ್ಲಿ ಪ್ಯಾಕೇಜ್ ಸಿ ಬಿಡ್ಡಿಂಗ್​ನಲ್ಲಿ ಕೆಲ ಪ್ರಮುಖ ಪಂದ್ಯಗಳ ನೇರ ಪ್ರಸಾರದ ಹಕ್ಕುಗಳಿಗಾಗಿ ಹರಾಜು ನಡೆಯಲಿದೆ. ಈ ಹರಾಜು 18 ಕೋಟಿಯಿಂದ ಪ್ರಾರಂಭವಾಗುತ್ತದೆ.

IPL Media Rights: ಪ್ರತಿ ಪಂದ್ಯಕ್ಕೆ 50 ಕೋಟಿ ರೂ: ಐಪಿಎಲ್​ ಡಿಜಿಟಲ್ ಹಕ್ಕು ಮಾರಾಟ..!
IPL Digital Rights
TV9 Web
| Edited By: |

Updated on:Jun 13, 2022 | 9:13 PM

Share

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL) 2023 ರಿಂದ 2027 ರವರೆಗಿನ ಐದು ವರ್ಷಗಳ ಡಿಜಿಟಲ್ ಪ್ರಸಾರ ಹಕ್ಕುಗಳು ಬರೋಬ್ಬರಿ 20,500 ಕೋಟಿಗೆ ಮಾರಾಟವಾಗಿದೆ. ಅಂದರೆ ಪ್ರತಿ ಪಂದ್ಯಕ್ಕೆ 50 ಕೋಟಿ ರೂ. ನೀಡಿ ಡಿಜಿಟಲ್​ ಹಕ್ಕುಗಳನ್ನು ರಿಲಯನ್ಸ್​-ವಯಕಾಮ್ 18 ಕಂಪೆನಿ​ ಖರೀದಿಸಿದೆ. ಐಪಿಎಲ್​ ಡಿಜಿಟಲ್​ ಹಕ್ಕುಗಳಿಗಾಗಿ ಸೋನಿ ನೆಟ್​ವರ್ಕ್​, ರಿಲಯನ್ಸ್ ಹಾಗೂ ಡಿಸ್ನಿ ಹಾಟ್​ ಸ್ಟಾರ್ ನಡುವೆ ಭರ್ಜರಿ ಪೈಪೋಟಿ ಏರ್ಪಟಿತ್ತು. ಆದರೆ ಅಂತಿಮವಾಗಿ 20 ಸಾವಿರಕ್ಕೂ ಅಧಿಕ ಮೊತ್ತಕ್ಕೆ ಬಿಡ್ಡಿಂಗ್ ಮಾಡುವ ಮೂಲಕ ಡಿಜಿಟಲ್​ ಹಕ್ಕುಗಳನ್ನು ಖರೀದಿಸುವಲ್ಲಿ ರಿಲಯನ್ಸ್ ಕಂಪೆನಿ ಯಶಸ್ವಿಯಾಗಿದೆ. ಅದರಂತೆ ವೂಟ್ ಆ್ಯಪ್ ಹಾಗೂ ಜಿಯೋ ಆ್ಯಪ್​ಗಳಲ್ಲಿ ಮುಂಬರುವ ಐಪಿಎಲ್​ ಪಂದ್ಯಗಳ​ ನೇರ ಪ್ರಸಾರವನ್ನು ವೀಕ್ಷಿಸಬಹುದು.

ಇನ್ನು ಟಿವಿ ನೇರ ಪ್ರಸಾರದ ಟಿವಿ ಹಕ್ಕುಗಳನ್ನು ಬರೋಬ್ಬರಿ 23,370 ಕೋಟಿಗೆ ಡಿಸ್ನಿ (ಸ್ಟಾರ್​ ನೆಟ್​ವರ್ಕ್​)​ ಪಡೆದುಕೊಂಡಿದೆ. ಈ ಹಿಂದೆ ಐಪಿಎಲ್​ ಟಿವಿ ರೈಟ್ಸ್ ಹೊಂದಿದ್ದ ಸ್ಟಾರ್ ನೆಟ್​ವರ್ಕ್​ ಈ ಬಾರಿ ಕೂಡ ಅಧಿಕ ಮೊತ್ತಕ್ಕೆ ಪ್ರಸಾರ ಹಕ್ಕನ್ನು ಪಡೆಯಲು  ಯಶಸ್ವಿಯಾಗಿದೆ. ಅದರಂತೆ ಮತ್ತೆ 23 ಸಾವಿರಕ್ಕೂ ಅಧಿಕ ಮೊತ್ತಕ್ಕೆ ಸ್ಟಾರ್​ ನೆಟ್​ವರ್ಕ್​ ಮತ್ತೆ ಐದು ವರ್ಷಗಳ ಐಪಿಎಲ್ ಪ್ರಸಾರ ಹಕ್ಕನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ.

ಈ ಬಾರಿ ಟಿವಿ ರೈಟ್ಸ್​ 23,370 ಕೋಟಿಗೆ ಮಾರಾಟವಾದರೆ, ಡಿಜಿಟಲ್ ಹಕ್ಕುಗಳು 20,500 ಕೋಟಿಗೆ ಹರಾಜಾಗಿದೆ. ಈ ಮೂಲಕ ಕೇವಲ ಎರಡು ಪ್ಯಾಕೇಜ್​ಗಳ ಮೂಲಕ ಬಿಸಿಸಿಐ ಬರೋಬ್ಬರಿ 44,075 ಕೋಟಿ ಆದಾಯಗಳಿಸಿದೆ. ಅಂದರೆ ಪ್ರತಿ ಪಂದ್ಯಕ್ಕೆ 107.5 ಕೋಟಿ ರೂ. ಪಡೆದುಕೊಂಡಿದೆ. ಇದರೊಂದಿಗೆ ವಿಶ್ವದ ಎರಡನೇ ಅತ್ಯಂತ ಶ್ರೀಮಂತ ಸ್ಪೋರ್ಟ್ಸ್​​ ಲೀಗ್ ಆಗಿ ಐಪಿಎಲ್​ ಗುರುತಿಸಿಕೊಂಡಿದೆ.

ಇದನ್ನೂ ಓದಿ
Image
KL Rahul: ಗಾಯ ಗಂಭೀರವಲ್ಲ..ಜಿಮ್​ನಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್..!
Image
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Image
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Image
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಸದ್ಯ ಅಗ್ರಸ್ಥಾನದಲ್ಲಿ ಅಮೆರಿಕದ ನ್ಯಾಷನಲ್ ಫುಟ್‌ಬಾಲ್ ಲೀಗ್ (NFL) ಇದ್ದು, ಇದರ ಪ್ರತಿ ಪಂದ್ಯದ ನೇರ ಪ್ರಸಾರದ ಹಕ್ಕು 133 ಕೋಟಿಗೆ ಮಾರಾಟವಾಗಿದೆ. ಇದೀಗ ಐಪಿಎಲ್​ ಪ್ರತಿ ಪಂದ್ಯಗಳ ಪ್ರಸಾರ ಹಕ್ಕುಗಳು 107.5 ಕೋಟಿಗೆ ತಲುಪಿದೆ. ಈ ಮೂಲಕ ವಿಶ್ವದ ಶ್ರೀಮಂತ ಕ್ರಿಕೆಟ್ ಆಗಿ ಐಪಿಎಲ್ ಗುರುತಿಸಿಕೊಂಡಿದೆ. ಅಷ್ಟೇ ಅಲ್ಲದೆ ವಿಶ್ವದ ಅತ್ಯಂತ ದುಬಾರಿ ಪ್ರಸಾರ ಹಕ್ಕನ್ನು ಹೊಂದಿರುವ 2ನೇ ಲೀಗ್​ ಆಗಿ ಹೊರಹೊಮ್ಮಿದೆ.

ಇದಾಗ್ಯೂ ಇನ್ನೆರಡು ಹರಾಜು ಪ್ರಕ್ರಿಯೆಗಳು ನಡೆಯಬೇಕಿದೆ. ಈ ವಿಭಾಗದಲ್ಲಿ ಪ್ಯಾಕೇಜ್ ಸಿ ಬಿಡ್ಡಿಂಗ್​ನಲ್ಲಿ ಕೆಲ ಪ್ರಮುಖ ಪಂದ್ಯಗಳ ನೇರ ಪ್ರಸಾರದ ಹಕ್ಕುಗಳಿಗಾಗಿ ಹರಾಜು ನಡೆಯಲಿದೆ. ಈ ಹರಾಜು 18 ಕೋಟಿಯಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಪ್ಯಾಕೇಜ್ ಪ್ಯಾಕೇಜ್ ಡಿ ಹರಾಜಿನಲ್ಲಿ ವಿದೇಶಗಳಲ್ಲಿ ಐಪಿಎಲ್​ ನೇರ ಪ್ರಸಾರದ ಹಕ್ಕಿಗಾಗಿ ಬಿಡ್ಡಿಂಗ್ ನಡೆಯಲಿದ್ದು, ಈ ಪ್ಯಾಕೇಜ್​ನ ಹರಾಜು 3 ಕೋಟಿಯಿಂದ ಪ್ರಾರಂಭವಾಗುತ್ತದೆ. ಹೀಗಾಗಿ ಅಂತಿಮವಾಗಿ ಒಟ್ಟಾರೆ ಹರಾಜಿನ ಬಳಿಕ ಬಿಸಿಸಿಐ 50 ಸಾವಿರ ಕೋಟಿಗೂ ಅಧಿಕ ಮೊತ್ತಗಳಿಸುವ ನಿರೀಕ್ಷೆಯಲ್ಲಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:29 pm, Mon, 13 June 22

ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್