IND vs SA T20 Match Live Streaming: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲುತ್ತಾ ಭಾರತ? ಪಂದ್ಯದ ಬಗ್ಗೆ ಮಾಹಿತಿ ಹೀಗಿದೆ

IND vs SA T20 Match Live Streaming: ನಿರೀಕ್ಷಿತ ಆಟಗಾರರು ವಿಫಲವಾಗಿರುವುದರಿಂದ ಈ ಸರಣಿ ಭಾರತಕ್ಕೆ ಆತಂಕ ತಂದಿದೆ. ಮೊದಲ ಪಂದ್ಯದಲ್ಲಿ ಬೌಲರ್‌ಗಳು ಮತ್ತು ಎರಡನೇ ಪಂದ್ಯದಲ್ಲಿ ಬ್ಯಾಟ್ಸ್‌ಮನ್ ನಿರಾಸೆ ಮೂಡಿಸಿದರು.

IND vs SA T20 Match Live Streaming: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲುತ್ತಾ ಭಾರತ? ಪಂದ್ಯದ ಬಗ್ಗೆ ಮಾಹಿತಿ ಹೀಗಿದೆ
India vs South Africa
Follow us
TV9 Web
| Updated By: ಪೃಥ್ವಿಶಂಕರ

Updated on:Jun 13, 2022 | 6:03 PM

ಇದು ಭಾರತ ಕ್ರಿಕೆಟ್ ತಂಡಕ್ಕೆ ಸಂಕಷ್ಟದ ಸಮಯ. ತವರಿನಲ್ಲೇ ಟೀಂ ಇಂಡಿಯಾ ಹರಿಣಗಳ ವಿರುದ್ಧ ಸತತ ಎರಡು ಸೋಲು ಕಂಡಿದೆ. ಐದು ಪಂದ್ಯಗಳ T20I ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು (South Africa Cricket Team) ಆರಂಭಿಕ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ 2-0 ಮುನ್ನಡೆ ಸಾಧಿಸಿದೆ. ಇನ್ನೊಂದು ಪಂದ್ಯವು ಭಾರತದಿಂದ ಸರಣಿಯನ್ನು ಕಸಿದುಕೊಳ್ಳಲ್ಲಿದು, ಇದು ಟೀಮ್ ಇಂಡಿಯಾದ ಪ್ರತಿಷ್ಠೆಯ ಮೇಲೆ ಪಣತೊಡಲಿದೆ. ಏಕೆಂದರೆ ಈ ಸರಣಿಯು ಭಾರತದಲ್ಲಿ ನಡೆಯುತ್ತಿದ್ದು, ತವರಿನಲ್ಲಿ ಸರಣಿಯನ್ನು ಕಳೆದುಕೊಂಡರೆ ಭಾರತದ ಪ್ರತಿಷ್ಠೆಗೆ ಕಳಂಕ ಬರುತ್ತದೆ. ಇದಕ್ಕಾಗಿ ಮಂಗಳವಾರ ನಡೆಯಲಿರುವ ಮೂರನೇ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು (IND vs SA) ಸೋಲಿಸುವುದು ಅಗತ್ಯವಾಗಿದೆ. ಈ ಪಂದ್ಯದಲ್ಲಿ ಭಾರತಕ್ಕೆ ಜಯ ಸಿಗದೇ ಇದ್ದರೆ ಮತ್ತು ದಕ್ಷಿಣ ಆಫ್ರಿಕಾ ಹ್ಯಾಟ್ರಿಕ್ ಗೆಲುವು ಸಾಧಿಸಿದರೆ, ಸರಣಿಗೆ ಪ್ರವಾಸಿ ತಂಡದ ಹೆಸರಿಡಲಾಗುತ್ತದೆ. ಈ ಪಂದ್ಯವನ್ನು ಗೆದ್ದರೆ ಭಾರತ ಸರಣಿಯಲ್ಲಿ ಉಳಿಯುತ್ತದೆ, ಆದರೆ ಸರಣಿ ಗೆಲ್ಲಲು ಆತಿಥೇಯ ತಂಡವು ಉಳಿದ ಮೂರು ಪಂದ್ಯಗಳನ್ನು ಗೆಲ್ಲಬೇಕು.

ನಿರೀಕ್ಷಿತ ಆಟಗಾರರು ವಿಫಲವಾಗಿರುವುದರಿಂದ ಈ ಸರಣಿ ಭಾರತಕ್ಕೆ ಆತಂಕ ತಂದಿದೆ. ಮೊದಲ ಪಂದ್ಯದಲ್ಲಿ ಬೌಲರ್‌ಗಳು ಮತ್ತು ಎರಡನೇ ಪಂದ್ಯದಲ್ಲಿ ಬ್ಯಾಟ್ಸ್‌ಮನ್ ನಿರಾಸೆ ಮೂಡಿಸಿದರು. ಟೀಂ ಇಂಡಿಯಾ ಗೆಲುವಿನ ಹಾದಿಗೆ ಮರಳಬೇಕಾದರೆ, ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಮತ್ತು ತಂಡ ಎಲ್ಲಾ ಆಟಗಾರರು ತಂಡವಾಗಿ ಪ್ರದರ್ಶನ ನೀಡುವುದು ಅವಶ್ಯಕ.

ಇದನ್ನೂ ಓದಿ:IND vs SA: ನಾಲ್ವರು ಶೂನ್ಯಕ್ಕೆ ಔಟ್, ಮಿಕ್ಕವರಿಗೆ 10 ರನ್ ಬಾರಿಸಲಾಗಲಿಲ್ಲ! ಕಟಕ್​ನಲ್ಲಿ ಟೀಂ ಇಂಡಿಯಾದ ಪ್ರದರ್ಶನವಿದು

ಇದನ್ನೂ ಓದಿ
Image
IND vs SA: ದಿನೇಶ್ ಕಾರ್ತಿಕ್​ಗೂ ಮೊದಲ ಅಕ್ಷರ್ ಬ್ಯಾಟಿಂಗ್; ಪಂತ್ ನಾಯಕತ್ವದ ಮೇಲೆ ಪ್ರಶ್ನೆ ಎತ್ತಿದ ಫ್ಯಾನ್ಸ್
Image
IND vs SA: ಐಪಿಎಲ್​ನ ಹೀರೋಗಳು ಟೀಮ್ ಇಂಡಿಯಾ ಪರ ಝೀರೋ..!
Image
Dasun Shanaka: ಕೊನೆಯ 3 ಓವರ್​ನಲ್ಲಿ 59 ರನ್ ಚೇಸ್: ಮೈ ಜುಮ್ ಎನಿಸಿದ ಶನಕ ಸ್ಫೋಟಕ ಆಟ

ಉತ್ತಮ ಲಯದಲ್ಲಿ ಆಫ್ರಿಕಾ

ಅದೇ ಸಮಯದಲ್ಲಿ, ತವರಿನಲ್ಲಿ ಸತತ ಎರಡು ಪಂದ್ಯಗಳಲ್ಲಿ ಭಾರತವನ್ನು ಸೋಲಿಸಿದ ನಂತರ ದಕ್ಷಿಣ ಆಫ್ರಿಕಾ ತಂಡದ ಆತ್ಮವಿಶ್ವಾಸವು ತುಂಬಾ ಹೆಚ್ಚಾಗಿರುತ್ತದೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಅವರು ಹೆಚ್ಚು ಅಪಾಯಕಾರಿಯಾಗಬಹುದಾಗಿದೆ. ಇಲ್ಲಿಯವರೆಗೆ ಸರಣಿಯಲ್ಲಿ, ದಕ್ಷಿಣ ಆಫ್ರಿಕಾವು ಪ್ರತಿಯೊಂದು ವಿಷಯದಲ್ಲೂ ಭಾರತಕ್ಕಿಂತ ಉತ್ತಮವಾಗಿ ಕಾಣುತ್ತಿದೆ. ಮೂರನೇ ಪಂದ್ಯದಲ್ಲೂ ತನ್ನ ಫಾರ್ಮ್ ಅನ್ನು ಮುಂದುವರೆಸಿದರೆ, ನಂತರ ಸರಣಿಯನ್ನು ಗೆಲ್ಲುವುದು ಅವರಿಗೆ ಸುಲಭವಾಗುತ್ತದೆ.

ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯ ಎಲ್ಲಿ ನಡೆಯಲಿದೆ? ವಿಶಾಖಪಟ್ಟಣಂನ ರಾಜಶೇಖರ ರೆಡ್ಡಿ ವಿಸಿಎ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯ ನಡೆಯಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯ ಯಾವಾಗ? ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯ ಜೂನ್ 14 ರಂದು ಸಂಜೆ 7 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯದ ಟಾಸ್ ಸಂಜೆ 6:30ಕ್ಕೆ ನಡೆಯಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ನೇ T20 ಎಲ್ಲಿ ನೇರ ಪ್ರಸಾರವಾಗಲಿದೆ? ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ನೇ T20I ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬಹುದು? ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ T20 ನ ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಇದಲ್ಲದೇ tv9kannada.com ನ ಲೈವ್ ಬ್ಲಾಗ್‌ನಿಂದಲೂ ಪಂದ್ಯದ ಮಾಹಿತಿಯನ್ನು ಪಡೆಯಬಹುದು.

Published On - 4:56 pm, Mon, 13 June 22