AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಭಾರತದ ದಾಳಿಗೆ ಇಂಗ್ಲೆಂಡ್ ತತ್ತರ; 284 ರನ್​​ಗಳಿಗೆ ಸರ್ವಪತನ.. ಬುಮ್ರಾ ಪಡೆಗೆ 132 ರನ್ ಮುನ್ನಡೆ

IND vs ENG: ಅಂತಿಮವಾಗಿ ಆಂಗ್ಲ ತಂಡವನ್ನು ಹೆಡೆಮುರಿ ಕಟ್ಟುವಲ್ಲಿ ಟೀಂ ಇಂಡಿಯಾ ಬೌಲರ್​ಗಳು ಸಫಲರಾಗಿದ್ದಾರೆ. ಜಾನಿ ಬೈರ್​ಸ್ಟೋವ್ ಶಕತದ ನೆರವಿನಿಂದ ಇಂಗ್ಲೆಂಡ್ ತಂಡ 284 ರನ್​ ಗಳಿಸಿ ತನ್ನೇಲ್ಲ ವಿಕೆಟ್ ಕಳೆದುಕೊಂಡಿತು.

IND vs ENG: ಭಾರತದ ದಾಳಿಗೆ ಇಂಗ್ಲೆಂಡ್ ತತ್ತರ; 284 ರನ್​​ಗಳಿಗೆ ಸರ್ವಪತನ.. ಬುಮ್ರಾ ಪಡೆಗೆ 132 ರನ್ ಮುನ್ನಡೆ
ಟೀಂ ಇಂಡಿಯಾ
TV9 Web
| Updated By: ಪೃಥ್ವಿಶಂಕರ|

Updated on:Jul 03, 2022 | 8:08 PM

Share

ಅಂತಿಮವಾಗಿ ಆಂಗ್ಲ ತಂಡವನ್ನು ಹೆಡೆಮುರಿ ಕಟ್ಟುವಲ್ಲಿ ಟೀಂ ಇಂಡಿಯಾ ಬೌಲರ್​ಗಳು ಸಫಲರಾಗಿದ್ದಾರೆ. ಜಾನಿ ಬೈರ್​ಸ್ಟೋವ್ (Jonny Bairstow) ಶಕತದ ನೆರವಿನಿಂದ ಇಂಗ್ಲೆಂಡ್ ತಂಡ 284 ರನ್​ ಗಳಿಸಿ ತನ್ನೇಲ್ಲ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಭಾರತಕ್ಕೆ 132 ರನ್ ಮುನ್ನಡೆ ದೊರೆತಿದೆ. ಭಾರತದ ಪರ ಸಿರಾಜ್ (Mohammed Siraj) 4 ವಿಕೆಟ್, ನಾಯಕ ಬುಮ್ರಾ 3 ವಿಕೆಟ್, ಶಮಿ 2 ವಿಕೆಟ್ ಹಾಗೂ ಶಾರ್ದೂಲ್ 1 ವಿಕೆಟ್ ಪಡೆದು ಮಿಂಚಿದರು. ಎಡ್ಜ್‌ಬಾಸ್ಟನ್ ಟೆಸ್ಟ್‌ನ ಮೂರನೇ ದಿನದಂದು ನಾಯಕ ಬೆನ್ ಸ್ಟೋಕ್ಸ್ ಮತ್ತು ಜಾನಿ ಬೈರ್‌ಸ್ಟೋವ್ ಇನಿಂಗ್ಸ್ ಆರಂಭಿಸಿದ್ದು, ಐದು ಓವರ್‌ಗಳಲ್ಲಿ 84 ರನ್‌ಗಳಿಗೆ 100 ರನ್ ಗಳಿಸಲು ತಂಡವನ್ನು ಮುನ್ನಡೆಸಿದರು. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಸ್ಟೋಕ್ಸ್ ಮತ್ತು ಬೈರ್‌ಸ್ಟೋ ಅದೇ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು. ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಪಂದ್ಯದಲ್ಲಿ ಸ್ಟೋಕ್ಸ್-ಬೇರ್‌ಸ್ಟೋವ್ ಜೋಡಿ 121 ಎಸೆತಗಳಲ್ಲಿ 179 ರನ್‌ಗಳ ಜೊತೆಯಾಟ ನಡೆಸಿತು.

ಇಂಗ್ಲೆಂಡ್ ತಂಡದ ಆರಂಭ ಟೀಂ ಇಂಡಿಯಾದಂತೆ ಉತ್ತಮವಾಗಿರಲ್ಲಿ ತಂಡದ ಸ್ಕೋರ್ ಶತಕ ದಾಟುವುದಕ್ಕೂ ಮುನ್ನವೇ ತಂಡದ ಪ್ರಮುಖ 5 ಬ್ಯಾಟರ್​ಗಳು ಪೆವಿಲಿಯನ್ ಸೇರಿಬಿಟ್ಟಿದ್ದರು. ನಂತರ ಜೊತೆಯಾದ ನಾಯಕ ಸ್ಟೋಕ್ಸ್ ಹಾಗೂ ಬೈರ್​ಸ್ಟೋವ್ ಉತ್ತಮ ಜೊತೆಯಾಟ ನಡೆಸಿದರು. ಇದರಿಂದ ಇಂಗ್ಲೆಂಡ್​ನ ಇನ್ನಿಂಗ್ಸ್ ಕೊಂಚ ಚೇತರಿಕೆ ಕಂಡಿತು. ಉತ್ತಮ ಆಟ ಆಡುತ್ತಿದ್ದ ಸ್ಟೋಕ್ಸ್​ರನ್ನು ಶಾರ್ದೂಲ್ ಬಲಿ ತೆಗೆದುಕೊಂಡರೆ, ಶತಕ ಸಿಡಿಸಿದ್ದ ಬೈರ್​ಸ್ಟೋವ್​ರನ್ನು ಶಮಿ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು. ಬಿಲ್ಲಿಂಗ್ಸ್ ಹೊರತುಪಡಿಸಿ ಉಳಿದಂತೆ ಬಂದ ಬಾಲಂಗೋಚಿಗಳು ಹೆಚ್ಚು ಅಬ್ಬರಿಸಲು ಸಾಧ್ಯವಾಗಲಿಲ್ಲ

ಕೊಹ್ಲಿ ಕಿರಿಕ್ ಬೈರ್‌ಸ್ಟೋವ್ ಶತಕ

ಇದನ್ನೂ ಓದಿ
Image
IND vs ENG: ಕೆರಳಿಸಿದ ಕೊಹ್ಲಿ; ಅಮೋಘ ಶತಕ ಬಾರಿಸಿ ಉತ್ತರ ಕೊಟ್ಟ ಜಾನಿ ಬೈರ್‌ಸ್ಟೋವ್
Image
India vs Northamptonshire: ಎರಡನೇ T20 ಪಂದ್ಯಕ್ಕೆ ವರುಣನ ಅಡ್ಡಿ? ಪಂದ್ಯದ ನೇರ ಪ್ರಸಾರ ಯಾವ ಚಾನೆಲ್​ನಲ್ಲಿ?

ಪಂದ್ಯದ ಮೂರನೇ ದಿನದಂದು, ಬೈರ್‌ಸ್ಟೋವ್ 13 ರನ್‌ಗಳಿಂದ ತನ್ನ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದರು. ಎರಡನೇ ದಿನದ ಕೊನೆಯ ಸೆಷನ್‌ನಲ್ಲಿರುವ ಅದೇ ಪರಿಸ್ಥಿತಿಯನ್ನು ಮೊದಲ ಅರ್ಧ ಗಂಟೆಯಲ್ಲಿ ಎದುರಿಸಿದರು. ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬುಮ್ರಾ ಜೋಡಿಯು ಅವರನ್ನು ನಿರಂತರವಾಗಿ ತೊಂದರೆಗೊಳಿಸುತ್ತಿತ್ತು. ನಂತರ ಅವರು ವಿರಾಟ್ ಕೊಹ್ಲಿಯೊಂದಿಗೆ ಮಾತಿನ ಚಕಮಕಿ ನಡೆಸಿದರು. ಆ ಸಮಯದಲ್ಲಿ ಬೈರ್‌ಸ್ಟೋವ್ ಅವರ ಸ್ಕೋರ್ 61 ಎಸೆತಗಳಲ್ಲಿ 13 ರನ್ ಆಗಿತ್ತು.

ಇಲ್ಲಿಂದ ಬೈರ್‌ಸ್ಟೋ ತನ್ನ ಗೇರ್ ಬದಲಾಯಿಸಲು ಪ್ರಾರಂಭಿಸಿ ಭಾರತೀಯ ಬೌಲರ್‌ಗಳನ್ನು ಗುರಿಯಾಗಿಸಿದರು. ಅವರು ಶಮಿ, ಬುಮ್ರಾ ಮತ್ತು ಸಿರಾಜ್ ವಿರುದ್ಧ ಲಾಂಗ್ ಆನ್, ಲಾಂಗ್ ಆಫ್ ಮತ್ತು ಸ್ಕ್ವೇರ್ ಲೆಗ್‌ನಲ್ಲಿ ಹೆಚ್ಚಿನ ಹೊಡೆತಗಳನ್ನು ಆಡಿದರು ಮತ್ತು ಬೌಂಡರಿಗಳನ್ನು ಪಡೆದರು. ಶೀಘ್ರದಲ್ಲೇ ಅವರು ಮುಂದಿನ 20 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು. ಮಳೆಯಿಂದಾಗಿ ಸೆಷನ್​ನನ್ನು ರದ್ದುಗೊಳಿಸಲಾಯಿತು. ಆ ಸಮಯದಲ್ಲಿ ಬೈರ್‌ಸ್ಟೋವ್ ಅವರ ಸ್ಕೋರ್ 110 ಎಸೆತಗಳಲ್ಲಿ 91 ರನ್ ಆಗಿತ್ತು.

ಊಟದ ನಂತರದ ಎರಡನೇ ಸೆಷನ್‌ನಲ್ಲಿ ಬೈರ್‌ಸ್ಟೋ ಹೆಚ್ಚು ತಡಮಾಡದೆ ಶತಕ ಪೂರೈಸಿದರು. ಶಾರ್ದೂಲ್ ಠಾಕೂರ್ ಅವರ ಚೆಂಡನ್ನು ನಾಲ್ಕು ರನ್‌ಗಳಿಗೆ ಕಳುಹಿಸುವ ಮೂಲಕ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 11 ನೇ ಶತಕವನ್ನು ಪೂರ್ಣಗೊಳಿಸಿದರು. ಈ ವೇಳೆ ಅವರು 14 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಬಾರಿಸಿದರು.

Published On - 7:39 pm, Sun, 3 July 22