India vs Northamptonshire: ಎರಡನೇ T20 ಪಂದ್ಯಕ್ಕೆ ವರುಣನ ಅಡ್ಡಿ? ಪಂದ್ಯದ ನೇರ ಪ್ರಸಾರ ಯಾವ ಚಾನೆಲ್​ನಲ್ಲಿ?

India vs Northamptonshire: ಭಾರತದ ಆಟಗಾರರು ತಮ್ಮ ಎರಡನೇ ಅಭ್ಯಾಸ ಪಂದ್ಯವನ್ನು ನಾರ್ಥಾಂಪ್ಟನ್‌ಶೈರ್ ವಿರುದ್ಧ ಆಡಲಿದ್ದಾರೆ. ಇಂದು ಸಂಜೆ 7 ಗಂಟೆಗೆ ಭಾರತ ಮತ್ತು ನಾರ್ಥಾಂಪ್ಟನ್ ಶೈರ್ ನಡುವೆ ಅಭ್ಯಾಸ ಪಂದ್ಯ ನಡೆಯಲಿದೆ.

India vs Northamptonshire: ಎರಡನೇ T20 ಪಂದ್ಯಕ್ಕೆ ವರುಣನ ಅಡ್ಡಿ? ಪಂದ್ಯದ ನೇರ ಪ್ರಸಾರ ಯಾವ ಚಾನೆಲ್​ನಲ್ಲಿ?
ಅಜಯ್ ಜಡೇಜಾ, ನೀವು ಆಕ್ರಮಣಕಾರಿ ಕ್ರಿಕೆಟ್ ಆಡಲು ಬಯಸಿದರೆ ನಿಮ್ಮ ಆಲೋಚನೆಯೂ ವಿಭಿನ್ನವಾಗಿರಬೇಕು. ಆದರೆ ನಾನು ದಿನೇಶ್ ಕಾರ್ತಿಕ್ ಅವರನ್ನು ತಂಡದಲ್ಲಿ ನೋಡಲು ಬಯಸುವುದಿಲ್ಲ. ಬದಲಿಗೆ ಅವರು ನನ್ನ ಪಕ್ಕದ ಕಾಮೆಂಟರಿ ಸೀಟಿನಲ್ಲಿ ಕುಳಿತು ಕಾಮೆಂಟರಿ ಮಾಡುವುದೇ ಸೂಕ್ತ. ಏಕೆಂದರೆ ದಿನೇಶ್ ಉತ್ತಮ ಕಾಮೆಂಟೇಟರ್ ಎಂದು ಹೇಳಿಕೊಂಡಿದ್ದಾರೆ.
Follow us
TV9 Web
| Updated By: ಪೃಥ್ವಿಶಂಕರ

Updated on:Jul 03, 2022 | 5:13 PM

ಭಾರತ ಮತ್ತು ಇಂಗ್ಲೆಂಡ್ (India and England) ನಡುವಿನ 5 ನೇ ಮತ್ತು ಕೊನೆಯ ಟೆಸ್ಟ್ ಪಂದ್ಯದ ನಂತರ 3 T20 ಪಂದ್ಯಗಳ ಸರಣಿಯನ್ನು ಆಡಲಾಗುತ್ತದೆ. ಇದಕ್ಕಾಗಿ ಟೀಂ ಇಂಡಿಯಾ ಕೂಡ ಸಜ್ಜಾಗಿದೆ. ಈ ಸರಣಿಗೂ ಮುನ್ನ ಭಾರತದ ಆಟಗಾರರು ತಮ್ಮ ಎರಡನೇ ಅಭ್ಯಾಸ ಪಂದ್ಯವನ್ನು ನಾರ್ಥಾಂಪ್ಟನ್‌ಶೈರ್ ವಿರುದ್ಧ ಆಡಲಿದ್ದಾರೆ. ಇಂದು ಸಂಜೆ 7 ಗಂಟೆಗೆ ಭಾರತ ಮತ್ತು ನಾರ್ಥಾಂಪ್ಟನ್ ಶೈರ್ ನಡುವೆ ಅಭ್ಯಾಸ ಪಂದ್ಯ ನಡೆಯಲಿದೆ. ಇದಕ್ಕೂ ಮೊದಲು ದಿನೇಶ್ ಕಾರ್ತಿಕ್ (Dinesh Karthik) ನೇತೃತ್ವದ ಭಾರತ ತಂಡ ಮೊದಲ ಅಭ್ಯಾಸ ಪಂದ್ಯದಲ್ಲಿ ಡರ್ಬಿಶೈರ್ ವಿರುದ್ಧ 7 ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಮೊದಲ ಅಭ್ಯಾಸ ಪಂದ್ಯದಲ್ಲಿ ದೀಪಕ್ ಹೂಡಾ (Deepak Hooda) ಅರ್ಧಶತಕ ಗಳಿಸಿದ್ದರು. ಅದೇ ಸಮಯದಲ್ಲಿ ಉಮ್ರಾನ್ ಮಲಿಕ್ ಮತ್ತು ಅರ್ಷದೀಪ್ ಸಿಂಗ್ ಕೂಡ ತಮ್ಮ ಬೌಲಿಂಗ್​ನಲ್ಲಿ ಅಬ್ಬರಿಸಿದ್ದರು.

XI ಆಡುವ ಅವಕಾಶ ಯಾರಿಗೆ?

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಇಲೆವೆನ್‌ಗೆ ಪ್ರಬಲ ಹಕ್ಕು ಸಾಧಿಸಲು ಭಾರತೀಯ ಆಟಗಾರರಿಗೆ ಇಂದು ಕೊನೆಯ ಅವಕಾಶವಾಗಿದೆ. ದೀಪಕ್ ಹೂಡಾ ಅತ್ಯುತ್ತಮ ಫಾರ್ಮ್‌ನಲ್ಲಿ ಆಡುತ್ತಿದ್ದಾರೆ. ಇತ್ತೀಚೆಗೆ ಐರ್ಲೆಂಡ್ ವಿರುದ್ಧ ಶತಕ ಬಾರಿಸಿದ್ದರು. ಅದೇ ಸಮಯದಲ್ಲಿ, ಮೊದಲ ಅಭ್ಯಾಸ ಪಂದ್ಯದಲ್ಲಿ, ಅವರು 37 ಎಸೆತಗಳಲ್ಲಿ 59 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ ಕೂಡ ಅಜೇಯ 36 ರನ್ ಗಳಿಸಿದರು. ಹೀಗಾಗಿ 20 ಎಸೆತಗಳಲ್ಲಿ 151 ರನ್‌ಗಳ ಗುರಿಯನ್ನು ಸಾಧಿಸಿತ್ತು. ದಿನೇಶ್ ಕಾರ್ತಿಕ್ ನಾಯಕತ್ವ, ದೀಪಕ್ ಹೂಡಾ ಅವರ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಮತ್ತೊಮ್ಮೆ ಉತ್ಸುಕರಾಗಿದ್ದಾರೆ. ಆದರೆ ಇಂದು ಹವಾಮಾನವು ಭಾರತದ ಗೆಲುವಿಗೆ ಅಡ್ಡಿಯಾಗಬಹುದು. ವಾಸ್ತವವಾಗಿ, ನಾರ್ಥಾಂಪ್ಟನ್‌ನಲ್ಲಿ ಆಕಾಶದಲ್ಲಿ ಮೋಡ ಕವಿದವಾತಾವರಣವಿದ್ದು, ಪಂದ್ಯದ ಆರಂಭದಲ್ಲಿ ಶೇ.30 ರಷ್ಟು ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ
Image
IND vs ENG: ಕೊರೊನಾದಿಂದ ಚೇತರಿಸಿಕೊಂಡ ಹಿಟ್‌ಮ್ಯಾನ್ ರೋಹಿತ್; ಸೀಮಿತ ಓವರ್‌ಗಳ ಸರಣಿಗೆ ಸಿದ್ಧತೆ
Image
IND vs ENG: 6 ಎಸೆತಗಳಲ್ಲಿ ವಿಶ್ವದಾಖಲೆ ಬರೆದ ಬಮ್ರಾ; ಕೊಹ್ಲಿ- ದ್ರಾವಿಡ್ ಸೆಲೆಬ್ರೇಷನ್ ಹೇಗಿತ್ತು ಗೊತ್ತಾ?

ಇದನ್ನೂ ಓದಿ: IND vs ENG: ಕೊರೊನಾದಿಂದ ಚೇತರಿಸಿಕೊಂಡ ಹಿಟ್‌ಮ್ಯಾನ್ ರೋಹಿತ್; ಸೀಮಿತ ಓವರ್‌ಗಳ ಸರಣಿಗೆ ಸಿದ್ಧತೆ

ಭಾರತ vs ನಾರ್ಥಾಂಪ್ಟನ್‌ಶೈರ್ ನಡುವಿನ T20 ಅಭ್ಯಾಸ ಯಾವಾಗ ಮತ್ತು ಎಲ್ಲಿ ನಡೆಯಲಿದೆ?

ಭಾರತ ಮತ್ತು ನಾರ್ಥಾಂಪ್ಟನ್‌ಶೈರ್ ಅಭ್ಯಾಸ ಪಂದ್ಯವು ಜುಲೈ 3 ಭಾನುವಾರದಂದು ನಾರ್ಥಾಂಪ್ಟನ್‌ನ ಕೌಂಟಿ ಮೈದಾನದಲ್ಲಿ ನಡೆಯಲಿದೆ.

ಭಾರತ vs ನಾರ್ಥಾಂಪ್ಟನ್‌ಶೈರ್ ಅಭ್ಯಾಸ ಯಾವಾಗ ಪ್ರಾರಂಭವಾಗುತ್ತದೆ?

ಭಾರತ vs ನಾರ್ಥಾಂಪ್ಟನ್‌ಶೈರ್ ನಡುವಿನ ಅಭ್ಯಾಸವು ಸ್ಥಳೀಯ ಕಾಲಮಾನ ಮಧ್ಯಾಹ್ನ 2.30 ಕ್ಕೆ (7 pm IST) ಪ್ರಾರಂಭವಾಗುತ್ತದೆ.

ಭಾರತ vs ನಾರ್ಥಾಂಪ್ಟನ್‌ಶೈರ್ ಅಭ್ಯಾಸ ಪಂದ್ಯವನ್ನು ನಾನು ಎಲ್ಲಿ ವೀಕ್ಷಿಸಬಹುದು?

ಭಾರತ ಮತ್ತು ನಾರ್ಥಾಂಪ್ಟನ್‌ಶೈರ್ ನಡುವಿನ ಅಭ್ಯಾಸ ಪಂದ್ಯವನ್ನು ಟಿವಿಯಲ್ಲಿ ಪ್ರಸಾರ ಮಾಡುತ್ತಿಲ್ಲ. ಆದಾಗ್ಯೂ, ಇದು ನಾರ್ಥಾಂಪ್ಟನ್‌ಶೈರ್ ಕ್ರಿಕೆಟ್ ಕ್ಲಬ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ಟೀಲ್‌ಬ್ಯಾಕ್ಸ್ ಟಿವಿಯಲ್ಲಿ ಲೈವ್ ಸ್ಟ್ರೀಮಿಂಗ್ ಆಗಿರುತ್ತದೆ.

ಭಾರತ ತಂಡ: ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್

Published On - 5:13 pm, Sun, 3 July 22