Wimbledon 2022: 10 ನೇ ಬಾರಿಗೆ ನಾಲ್ಕನೇ ಸುತ್ತಿಗೆ ಎಂಟ್ರಿಕೊಟ್ಟ ರಾಫೆಲ್ ನಡಾಲ್..!
Wimbledon 2022: ವಿಂಬಲ್ಡನ್ 2022 ಪಂದ್ಯಾವಳಿಯ ನಾಲ್ಕನೇ ಸುತ್ತಿನಲ್ಲಿ, ಟೆನಿಸ್ ತಾರೆ ರಾಫೆಲ್ ನಡಾಲ್ 21 ನೇ ಶ್ರೇಯಾಂಕದ ಡಚ್‌ನ ಬೊಟಿಕ್ ವ್ಯಾನ್ ಡಿ ಗೆಂಡ್‌ಸ್ಚುಲ್ಪ್ ಅವರನ್ನು ಎದುರಿಸಲಿದ್ದಾರೆ.
ವರ್ಷದ ಮೂರನೇ ಗ್ರ್ಯಾಂಡ್ ಸ್ಲಾಮ್ ವಿಂಬಲ್ಡನ್ ಓಪನ್ 2022 (Wimbledon 2022) ತನ್ನ ಅಂತಿಮ ಹಂತದತ್ತ ಸಾಗುತ್ತಿದೆ. ಪಂದ್ಯಾವಳಿಯು ಇದುವರೆಗೆ ಪುರುಷ ಮತ್ತು ಮಹಿಳೆಯರ ವಿಭಾಗಗಳಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದೆ. ಏತನ್ಮಧ್ಯೆ, ಟೆನಿಸ್ ಸ್ಟಾರ್ ರಾಫೆಲ್ ನಡಾಲ್ (Rafael Nadal) ಮತ್ತೊಮ್ಮೆ ಅದ್ಭುತ ಪ್ರದರ್ಶನದೊಂದಿಗೆ ವಿಂಬಲ್ಡನ್ 2022 ರ ಕೊನೆಯ-16 ಘಟ್ಟವನ್ನು ತಲುಪಿದ್ದಾರೆ. ವಿಂಬಲ್ಡನ್ 2022 ರ ಮೂರನೇ ಸುತ್ತಿನಲ್ಲಿ, ರಾಫೆಲ್ ನಡಾಲ್ ಇಟಲಿಯ ಲೊರೆಂಜೊ ಸೊನೆಗೊ (Lorenzo Sonego) ಅವರನ್ನು ನೇರ ಸೆಟ್‌ನಲ್ಲಿ ಸೋಲಿಸಿ ಪಂದ್ಯಾವಳಿಯ ನಾಲ್ಕನೇ ಸುತ್ತಿಗೆ ಮುನ್ನಡೆದರು.
ವಿಂಬಲ್ಡನ್‌ನ ಕೊನೆಯ-16 ರ ಘಟ್ಟಕ್ಕೆ ತಲುಪಿದ್ದು ಇದು 10ನೇ ಬಾರಿ. ಗಮನಾರ್ಹವೆಂದರೆ ರಾಫೆಲ್ ನಡಾಲ್ ಕೂಡ ಎರಡು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದಾರೆ. 2008 ಮತ್ತು 2010ರಲ್ಲಿ ವಿಂಬಲ್ಡನ್ ಚಾಂಪಿಯನ್ ಆದರು. ಈ ಬಾರಿಯೂ ಇಲ್ಲಿ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ.
Make that 308 Grand Slam match wins for @RafaelNadal ?
He beats Lorenzo Sonego 6-1, 6-2, 6-4#Wimbledon | #CentreCourt100 pic.twitter.com/GanBJUhoYq
— Wimbledon (@Wimbledon) July 2, 2022
ಎರಡನೇ ಶ್ರೇಯಾಂಕದ ರಾಫೆಲ್ ನಡಾಲ್ ಮೂರನೇ ಸುತ್ತಿನಲ್ಲಿ ಲೊರೆಂಜೊ ಸೊನೆಗೊ ಅವರನ್ನು 6-2, 6-1, 6-4 ಸೆಟ್‌ಗಳಿಂದ ಸೋಲಿಸಿದರು. ಈ ಮೂರನೇ ಸುತ್ತಿನ ಪಂದ್ಯದಲ್ಲಿ ಲೊರೆಂಜೊ ಸೊನೆಗೊ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಮೂರನೇ ಸೆಟ್‌ನಲ್ಲಿ ರಾಫೆಲ್ ನಡಾಲ್ ತಕ್ಷಣವೇ ಬ್ಯಾಕ್-ಟು-ಬ್ಯಾಕ್ ಪಾಯಿಂಟ್‌ನೊಂದಿಗೆ ಪಂದ್ಯವನ್ನು ಗೆದ್ದರು. ಲೊರೆಂಜೊ ಕೊನೆಯ ಬಾರಿ ವಿಂಬಲ್ಡನ್‌ನ ನಾಲ್ಕನೇ ಸುತ್ತನ್ನು ತಲುಪಿದ್ದರು.
Oh Rafa…@HSBC_Sport Play of the Day is a cheeky @RafaelNadal no-look volley ?#Wimbledon pic.twitter.com/e3nzELQ99D
— Wimbledon (@Wimbledon) July 2, 2022
ನಾಲ್ಕನೇ ಸುತ್ತಿನಲ್ಲಿ ಡಚ್ ಆಟಗಾರ ಎದುರಾಳಿ
ವಿಂಬಲ್ಡನ್ 2022 ಪಂದ್ಯಾವಳಿಯ ನಾಲ್ಕನೇ ಸುತ್ತಿನಲ್ಲಿ, ಟೆನಿಸ್ ತಾರೆ ರಾಫೆಲ್ ನಡಾಲ್ 21 ನೇ ಶ್ರೇಯಾಂಕದ ಡಚ್‌ನ ಬೊಟಿಕ್ ವ್ಯಾನ್ ಡಿ ಗೆಂಡ್‌ಸ್ಚುಲ್ಪ್ ಅವರನ್ನು ಎದುರಿಸಲಿದ್ದಾರೆ. 26ರ ಹರೆಯದ ಬೊಟಿಕ್ ಮೊದಲ ಬಾರಿಗೆ ವಿಂಬಲ್ಡನ್‌ನ ಫೈನಲ್-16 ರ ಘಟ್ಟ ತಲುಪಿದ್ದಾರೆ. ಅವರು ಮೂರನೇ ಸುತ್ತಿನಲ್ಲಿ ಅನುಭವಿ ಫ್ರೆಂಚ್ ಆಟಗಾರ ರಿಚರ್ಡ್ ಗ್ಯಾಸ್ಕೆಟ್ ಅವರನ್ನು 7-5, 2-6, 7-6 (9/7), 6-1 ಸೆಟ್‌ಗಳಿಂದ ಸೋಲಿಸಿದರು. ಕಳೆದ ತಿಂಗಳು ಫ್ರೆಂಚ್ ಓಪನ್‌ನಲ್ಲಿ ಟೆನಿಸ್ ತಾರೆ ರಾಫೆಲ್ ನಡಾಲ್ ಮತ್ತು ಬೊಟಿಕ್ ಕೂಡ ಮುಖಾಮುಖಿಯಾಗಿದ್ದರು. ಇಲ್ಲಿ ರಾಫೆಲ್ ನಡಾಲ್ ಸುಲಭವಾಗಿ ಬಾಟಿಕ್ರನ್ನು ಸೋಲಿಸಿದರು.