IND vs ENG: ಕೊರೊನಾದಿಂದ ಚೇತರಿಸಿಕೊಂಡ ಹಿಟ್‌ಮ್ಯಾನ್ ರೋಹಿತ್; ಸೀಮಿತ ಓವರ್‌ಗಳ ಸರಣಿಗೆ ಸಿದ್ಧತೆ

IND vs ENG: ರೋಹಿತ್ ಶರ್ಮಾ ಬಹುತೇಕ ಫಿಟ್ ಆಗಿದ್ದು, ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಆಪ್ತ ಮೂಲಗಳು ತಿಳಿಸಿವೆ. ಇದರೊಂದಿಗೆ ರೋಹಿತ್ ಶರ್ಮಾ ಮುಂಬರುವ ಟಿ20 ಹಾಗೂ ಏಕದಿನ ಸರಣಿಗೆ ಸಂಪೂರ್ಣ ಸಜ್ಜಾಗಿರುವಂತಿದೆ.

IND vs ENG: ಕೊರೊನಾದಿಂದ ಚೇತರಿಸಿಕೊಂಡ ಹಿಟ್‌ಮ್ಯಾನ್ ರೋಹಿತ್; ಸೀಮಿತ ಓವರ್‌ಗಳ ಸರಣಿಗೆ ಸಿದ್ಧತೆ
Rohit Sharma
TV9kannada Web Team

| Edited By: pruthvi Shankar

Jul 03, 2022 | 2:44 PM

ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್ 2022 (T20 World Cup 2022) ಗಾಗಿ ಪ್ರಪಂಚದಾದ್ಯಂತದ ಪ್ರತಿಯೊಂದು ಕ್ರಿಕೆಟ್ ತಂಡವು ತಯಾರಿ ನಡೆಸುತ್ತಿದೆ. ಈ ಕ್ರಮದಲ್ಲಿ ಭಾರತ ತಂಡವೂ ನಿರಂತರವಾಗಿ ಟಿ20 ಸರಣಿ ಆಡುವುದರಲ್ಲಿ ನಿರತವಾಗಿದೆ. ಇತ್ತೀಚೆಗಷ್ಟೇ ರಿಷಬ್ ಪಂತ್ (Rishabh Pant) ನಾಯಕತ್ವದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ತನ್ನ ಶಕ್ತಿ ಪ್ರದರ್ಶಿಸಿತ್ತು. ಆ ಬಳಿಕ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟೀಂ ಇಂಡಿಯಾ ಸರಣಿ ಗೆದ್ದುಕೊಂಡಿತ್ತು. ರೋಹಿತ್ ಶರ್ಮಾ (Rohit Sharma) ನಾಯಕತ್ವದ ಟೀಂ ಇಂಡಿಯಾ ಇಂಗ್ಲೆಂಡ್‌ನಲ್ಲಿ ಮೂರು ಟಿ20 ಪಂದ್ಯಗಳನ್ನು ಆಡಬೇಕಿದೆ. ಕೊರೊನಾದಿಂದಾಗಿ ಬರ್ಮಿಂಗ್ಹ್ಯಾಮ್ ಟೆಸ್ಟ್‌ನಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಅವರು ಫಿಟ್ ಆಗಿದ್ದು, ತಂಡವನ್ನು ಸೇರಿಕೊಂಡಿದ್ದಾರೆ ಎಂಬ ವರದಿಗಳಿವೆ.

ರೋಹಿತ್ ಶರ್ಮಾ ಬಹುತೇಕ ಫಿಟ್ ಆಗಿದ್ದು, ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಆಪ್ತ ಮೂಲಗಳು ತಿಳಿಸಿವೆ. ಇದರೊಂದಿಗೆ ರೋಹಿತ್ ಶರ್ಮಾ ಮುಂಬರುವ ಟಿ20 ಹಾಗೂ ಏಕದಿನ ಸರಣಿಗೆ ಸಂಪೂರ್ಣ ಸಜ್ಜಾಗಿರುವಂತಿದೆ. ಭಾರತ ತಂಡ ಇಲ್ಲಿ ಜುಲೈ 7, 9 ಮತ್ತು 10 ರಂದು ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ 20 ಸರಣಿಯನ್ನು ಆಡಲಿದೆ. ಇದಾದ ನಂತರ, ODI ಸರಣಿ ಇದೆ, ನಂತರ ವೆಸ್ಟ್ ಇಂಡೀಸ್ ವಿರುದ್ಧ ಮೂರು ODI ಮತ್ತು ಐದು T20I ಸರಣಿ ಆಡಲಿದೆ ಭಾರತ.

ಇದನ್ನೂ ಓದಿ: IND vs ENG: ಹಾರ್ದಿಕ್​ ಪಾಂಡ್ಯಗೆ ವಿಶ್ರಾಂತಿ; ದಿನೇಶ್ ಕಾರ್ತಿಕ್​ಗೆ ಟಿ20 ನಾಯಕತ್ವ! ದ್ರಾವಿಡ್ ಅಚ್ಚರಿ ಆಯ್ಕೆ

ಕೊರೊನಾ ಸೋಂಕಿನಿಂದ ರೋಹಿತ್ ಶರ್ಮಾ ಎಡ್ಜ್‌ಬಾಸ್ಟನ್ ಟೆಸ್ಟ್‌ನಿಂದ ಹೊರಗುಳಿದಿದ್ದರು. ಅವರ ಸ್ಥಾನಕ್ಕೆ ಜಸ್ಪ್ರೀತ್ ಬುಮ್ರಾ ಅವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಇದಕ್ಕೂ ಮುನ್ನ ಬಿಸಿಸಿಐ ಟಿ20 ಮತ್ತು ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಿದ್ದು, ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಅಂದರೆ T20 ಮತ್ತು ODI ಸರಣಿಗಳನ್ನು ಆಡಲು ರೋಹಿತ್ ಶರ್ಮಾ ಸಂಪೂರ್ಣ ಸಿದ್ಧರಾಗುತ್ತಾರೆ ಎಂದು ಮಂಡಳಿಯು ಸಂಪೂರ್ಣ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದೆ.

ವೈಟ್ ಬಾಲ್ ಸರಣಿಗಾಗಿ ಭಾರತ ತಂಡ

ಮೊದಲ T20I ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್.

2ನೇ ಮತ್ತು 3ನೇ ಟಿ20ಐಗಳಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ (ಕೀಪರ್), ರಿಷಬ್ ಪಂತ್ (ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್ ಪಟೇಲ್, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್.

ಇದನ್ನೂ ಓದಿ

3 ಏಕದಿನ ಪಂದ್ಯಗಳಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada