IND vs ENG: ಸ್ಟುವರ್ಟ್ ಬ್ರಾಡ್ ಎಸೆದ ಒಂದೇ ಓವರ್‌ನಲ್ಲಿ 46 ವರ್ಷಗಳ ಹಿಂದಿನ ದಾಖಲೆ ಮುರಿದ ಬುಮ್ರಾ..!
IND vs ENG: 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಜಸ್ಪ್ರೀತ್ ಬುಮ್ರಾ 16 ಎಸೆತಗಳಲ್ಲಿ 31 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಹೊಡೆದರು.
ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ (Jasprit Bumrah) ಬೌಲಿಂಗ್ ಜೊತೆಗೆ ಅವರ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದ್ದಾರೆ. ಎಡ್ಜ್‌ಬಾಸ್ಟನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 10 ನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಬಂದ ಬುಮ್ರಾ, ತಮ್ಮ ಬಿರುಗಾಳಿ ಬ್ಯಾಟಿಂಗ್ನಿಂದ ಅನೇಕ ದಾಖಲೆಗಳನ್ನು ಮುರಿದರು. ಬುಮ್ರಾ ಯಾವಾಗಲೂ ತಮ್ಮ ಅತ್ಯುತ್ತಮ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ, ಅದರ ಆಧಾರದ ಮೇಲೆ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನಗಾಗಿ ಒಂದು ಸ್ಥಾನವನ್ನು ಕೆತ್ತಿಕೊಂಡಿದ್ದಾರೆ. ಬುಮ್ರಾ ಬ್ಯಾಟ್‌ನಲ್ಲೂ ದಾಖಲೆಯ ಇನ್ನಿಂಗ್ಸ್‌ಗಳನ್ನು ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಅದನ್ನು ಇಂದು ಬುಮ್ರಾ ನಿಜ ಮಾಡಿದ್ದಾರೆ.
46 ವರ್ಷಗಳ ಹಳೆಯ ದಾಖಲೆ ಮುರಿದ ಜಸ್ಪ್ರೀತ್ ಬುಮ್ರಾ
10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಜಸ್ಪ್ರೀತ್ ಬುಮ್ರಾ 16 ಎಸೆತಗಳಲ್ಲಿ 31 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಹೊಡೆದರು. ಬುಮ್ರಾ ಸ್ಟುವರ್ಟ್ ಬ್ರಾಡ್ ಅವರನ್ನು ಬಲಿಪಶು ಮಾಡಿ, ಅವರ ಓವರ್‌ನಲ್ಲಿ 29 ರನ್ ಗಳಿಸಿದರು. ಈ ಓವರ್‌ನಲ್ಲಿ ಬ್ರಾಡ್ 34 ರನ್ ನೀಡಿದರು, ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಓವರ್ ಆಗಿದೆ. ನಾಯಕನಾಗಿ ತನ್ನ ಮೊದಲ ಪಂದ್ಯದಲ್ಲಿ ಅಬ್ಬರಿಸಿ, ಬಿಶನ್ ಬೇಡಿ ನಂತರ ಅತಿ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದಾರೆ.
ಬಿಶನ್ ಬೇಡಿ 30 ರನ್ ಗಳಿಸಿದರು
ಬುಮ್ರಾಗೂ ಮೊದಲು, ಬಿಶನ್ ಬೇಡಿ ನಾಯಕನಾಗಿ ತಮ್ಮ ಚೊಚ್ಚಲ ಪಂದ್ಯದಲ್ಲಿ 10 ನೇ ಸ್ಥಾನದಲ್ಲಿ ಬ್ಯಾಟಿಂಗ್‌ನಲ್ಲಿ ಅತಿದೊಡ್ಡ ಇನ್ನಿಂಗ್ಸ್ ಆಡಿದರು. 1976 ರಲ್ಲಿ, ಅವರು ಕ್ರೈಸ್ಟ್‌ಚರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಾಯಕರಾಗಿ ಕಣಕ್ಕಿಳಿದು, 30 ರನ್‌ಗಳ ಇನ್ನಿಂಗ್ಸ್ ಆಡಿದರು. 46 ವರ್ಷಗಳ ನಂತರ, ಬುಮ್ರಾ ಅವರ ದಾಖಲೆಯನ್ನು ಮುರಿದು, 31 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಕಳೆದ 35 ವರ್ಷಗಳಲ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವ ವಹಿಸಿದ ಮೊದಲ ವೇಗದ ಬೌಲರ್ ಬುಮ್ರಾ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.
ಭಾರತ ಮೊದಲ ಇನಿಂಗ್ಸ್‌ನಲ್ಲಿ 416 ರನ್
ಐದನೇ ಟೆಸ್ಟ್‌ನ ಎರಡನೇ ದಿನವಾದ ಶನಿವಾರ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 416 ರನ್‌ಗಳಿಗೆ ಕುಸಿಯಿತು. ಭಾರತ ಮೊದಲ ದಿನದಲ್ಲಿ ತಂಡ ಏಳು ವಿಕೆಟ್‌ಗೆ 338 ರನ್‌ಗಳಿಸಿತ್ತು. 2ನೇ ದಿನದಲ್ಲಿ ರವೀಂದ್ರ ಜಡೇಜಾ 194 ಎಸೆತಗಳಲ್ಲಿ 104 ರನ್ ಗಳಿಸಿ ಶತಕ ಪೂರೈಸಿದರು. ನಿನ್ನೆ ಕ್ರೀಸ್‌ನಲ್ಲಿ ಜಡೇಜಾ ಮತ್ತು ಮೊಹಮ್ಮದ್ ಶಮಿ (16) 40 ಎಸೆತಗಳಲ್ಲಿ 33 ರನ್ ಸೇರಿಸಿದರು, ನಂತರ ನಾಯಕ ಜಸ್ಪ್ರೀತ್ ಬುಮ್ರಾ 16 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ ಭಾರತವನ್ನು 400 ರನ್‌ಗಳ ಗಡಿ ದಾಟಿಸಿದರು.
ಬುಮ್ರಾ ಅವರು ಸ್ಟುವರ್ಟ್ ಬ್ರಾಡ್ ಅವರ ಓವರ್‌ನಲ್ಲಿ ಎರಡು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳೊಂದಿಗೆ 35 ರನ್ ಸೇರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಮಾಡಿದರು. ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್ ಪರ ಅತ್ಯಂತ ಯಶಸ್ವಿ ಬೌಲರ್ ಆಗಿದ್ದು, ಜಡೇಜಾ ಅವರ ವಿಕೆಟ್ ಸೇರಿದಂತೆ 60 ರನ್‌ಗಳಿಗೆ ಐದು ವಿಕೆಟ್ ಪಡೆದರು. ಬ್ರಾಡ್ ಏಕೈಕ ವಿಕೆಟ್ ಪಡೆದರೆ, ಮ್ಯಾಟಿ ಪಾಟ್ಸ್, ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ಕೂಡ ವಿಕೆಟ್ ಪಡೆದರು.