AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಪಂತ್- ಜಡೇಜಾ ಶತಕ; ಕೊನೆಯಲ್ಲಿ ಬುಮ್ರಾ ಆರ್ಭಟ! 416 ರನ್​ಗಳಿಗೆ ಭಾರತ ಆಲ್​ ಔಟ್

IND vs ENG: ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್‌ಗಳಿಗೆ ಆಲೌಟ್ ಆಗಿದೆ.

IND vs ENG: ಪಂತ್- ಜಡೇಜಾ ಶತಕ; ಕೊನೆಯಲ್ಲಿ ಬುಮ್ರಾ ಆರ್ಭಟ! 416 ರನ್​ಗಳಿಗೆ ಭಾರತ ಆಲ್​ ಔಟ್
ಎಡ್ಜ್‌ಬಾಸ್ಟನ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ರಿಷಬ್ ಪಂತ್ ಅರ್ಧಶತಕ ಬಾರಿಸಿದ ತಕ್ಷಣ, ಅವರು ವಿದೇಶಿ ನೆಲದಲ್ಲಿ ಶತಕದ ನಂತರ ಅರ್ಧಶತಕ ಗಳಿಸಿದ ಮೊದಲ ಭಾರತೀಯ ವಿಕೆಟ್-ಕೀಪರ್ ಎನಿಸಿಕೊಂಡರು. ಧೋನಿಯಿಂದ ಹಿಡಿದು ಫಾರೂಕ್​ವರೆಗೆ ಯಾರೂ ಈ ಸಾಧನೆ ಮಾಡಲು ಸಾಧ್ಯವಾಗಲಿಲ್ಲ, ಆದರೆ ಪಂತ್ ಅದನ್ನು ಮಾಡಿದರು.
TV9 Web
| Updated By: ಪೃಥ್ವಿಶಂಕರ|

Updated on:Jul 02, 2022 | 5:01 PM

Share

ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್‌ಗಳಿಗೆ ಆಲೌಟ್ ಆಗಿದೆ. ಪಂತ್ ಹಾಗೂ ಜಡೇಜಾರ ಅದ್ಭುತ ಶತಕದ ಜೊತೆಗೆ ಕೊನೆಯಲ್ಲಿ ನಾಯಕ ಬುಮ್ರಾ ಅವರ ಸಿಡಿಲಬ್ಬರದ ಬ್ಯಾಟಿಂಗ್​ನಿಂದ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 416 ರನ್​ಗಳಿಸಲು ಸಾಧ್ಯವಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. 98 ರನ್​ಗೆ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿದ್ದ ಭಾರತಕ್ಕೆ ರಿಷಭ್ ಪಂತ್ (Rishabh Pant) ಹಾಗೂ ರವೀಂದ್ರ ಜಡೇಜಾ (Ravindra Jadeja) ಆಸರೆಯಾಗಿ ನಿಂತರು. ಸಂತಸದ ಅಲೆಯಲ್ಲಿ ತೇಲುತ್ತಿದ್ದ ಇಂಗ್ಲೆಂಡ್ ಬೌಲರ್​ಗಳ ಬೆವರಿಳಿಸಿದ ಇವರಿಬ್ಬರು ಬರೋಬ್ಬರಿ 222 ರನ್​​ಗಳ ಜೊತೆಯಾಟ ಆಡಿದರು. ಪಂತ್ ದಾಖಲೆಯ ಶತಕ ಸಿಡಿಸಿ ಔಟ್ ಆದರೆ, ಜಡೇಜಾ ಸೆಂಚುರಿಯ ಹೊಸ್ತಿಲಲ್ಲಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 73 ಓವರ್​​ನಲ್ಲಿ 7 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿತ್ತು.

ಭಾರತ ಪರ ಮೊದಲ ಇನ್ನಿಂಗ್ಸ್​ ಆರಂಭಿಸಿದ ಶುಭ್ಮನ್ ಗಿಲ್ (17) ಹಾಗೂ ಚೇತೇಶ್ವರ್ ಪೂಜಾರ (13) ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. ಈ ಎರಡು ವಿಕೆಟ್‌ಗಳು ಜೇಮ್ಸ್ ಆ್ಯಂಡರ್ಸನ್ ಪಾಲಾಯಿತು. ಹನುಮ ವಿಹಾರಿ ಆಟ ಕೂಡ 20 ರನ್​ಗೆ ಅಂತ್ಯವಾಯಿತು. ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭರವಸೆ ಮೂಡಿಸಿದ್ದ ವಿರಾಟ್ ಕೊಹ್ಲಿ 11 ರನ್​ಗೆ ಕ್ಲಿನ್ ಬೌಲ್ಡ್ ಆಗುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಶ್ರೇಯಸ್ ಅಯ್ಯರ್ (15) ಕೂಡ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಈ ಸಂದರ್ಭ ಜೊತೆಯಾದ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಎದುರಾಳಿಯ ಮಾರಕ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿದರು. ಅದರಲ್ಲೂ ಪಂತ್ ಸಾಲು ಸಾಲು ಟೀಕೆಗಳಿಗೆ ದಿಟ್ಟ ಬ್ಯಾಟಿಂಗ್ ಮೂಲಕ ಉತ್ತರ ನೀಡಿ ದಾಖಲೆಯ ಶತಕ ಸಿಡಿಸಿದರು.

ಪಂತ್ ದಾಖಲೆಯ ಶತಕ

ಇದನ್ನೂ ಓದಿ
Image
IND vs ENG: ಸೂಪರ್​​ ಸ್ಟಾರ್ ಜಡೇಜಾ; ಆಂಗ್ಲರ ಎದುರು ಅದ್ಭುತ ಶತಕ ಸಿಡಿಸಿ ಮಿಂಚಿದ ಆಲ್​ರೌಂಡರ್..!
Image
IND vs ENG: ಇಂಗ್ಲೆಂಡ್​ನಲ್ಲಿ ರಿಷಬ್ ಪಂತ್-ರವೀಂದ್ರ ಜಡೇಜಾ ಜೊತೆಯಾಟಕ್ಕೆ ದಾಖಲೆಗಳೆಲ್ಲ ಪುಡಿ ಪುಡಿ!

111 ಎಸೆಗಳಲ್ಲಿ 20 ಫೋರ್‌ ಮತ್ತು 4 ಸಿಕ್ಸರ್‌ಗಳೊಂದಿಗೆ 146 ರನ್‌ ಚಚ್ಚುವ ಮೂಲಕ ಪಂತ್ ತಮ್ಮ ಸ್ಪೋಟಕ ಇನಿಂಗ್ಸ್‌ ಅಂತ್ಯಗೊಳಿಸಿದರು. ಈ ವಿಶೇಷ ಶತಕದೊಂದಿಗೆ ಪಂತ್‌ ಹಲವು ದಾಖಲೆಗಳನ್ನು ನುಚ್ಚು ನೂರು ಮಾಡಿದ್ದಾರೆ ಕೂಡ. 6ನೇ ವಿಕೆಟ್‌ಗೆ 222 ರನ್‌ಗಳ ದಾಖಲೆಯ ಜೊತೆಯಾಟವನ್ನು ರಿಷಭ್ ಪಂತ್‌ ಹಾಗೂ ರವೀಂದ್ರ ಜಡೇಜಾ ಆಡಿದರು. ಇದು ವಿದೇಶದ ನೆಲದಲ್ಲಿ 6ನೇ ವಿಕೆಟ್‌ಗೆ ಭಾರತದ ಜಂಟಿ ಗರಿಷ್ಠ ರನ್‌ ಜೊತೆಯಾಟವಾಗಿದೆ. ಅದಲ್ಲದೆ, ಇಂಗ್ಲೆಂಡ್‌ ನೆಲದಲ್ಲಿ 6ನೇ ವಿಕೆಟ್‌ಗೆ ಭಾರತದ ಗರಿಷ್ಠ ರನ್‌ ಜೊತೆಯಾಟ ಎನಿಸಿದೆ.

ಜಡೇಜಾ ಶತಕ

ಶನಿವಾರ, ಜುಲೈ 2, ಟೆಸ್ಟ್‌ನ ಎರಡನೇ ದಿನ, ಜಡೇಜಾ 83 ರನ್‌ಗಳಿಂದ ಇನ್ನಿಂಗ್ಸ್ ಪ್ರಾರಂಭಿಸಿದರು. ಅವರ ಜೊತೆಯಲ್ಲಿ ಮೊಹಮ್ಮದ್ ಶಮಿ ಉತ್ತಮ ಬೆಂಬಲ ನೀಡಿ, ಕ್ರೀಸ್‌ನಲ್ಲಿ ತಮ್ಮ ವಿಕೆಟ್ ಕಾಯ್ದುಕೊಂಡರು. ನಂತರ 79ನೇ ಓವರ್​ನಲ್ಲಿ ಬ್ರಾಡ್ ಎಸೆತಗಳಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಜಡೇಜಾ ಮೂರನೇ ಟೆಸ್ಟ್ ಶತಕ ಪೂರೈಸಿದರು. ಜಡೇಜಾ 183 ಎಸೆತಗಳನ್ನು ಎದುರಿಸಿ, 13 ಬೌಂಡರಿಗಳ ಸಹಾಯದಿಂದ ಶತಕ ಪೂರ್ಣಗೊಳಿಸಿದರು.

ಕೊನೆಯಲ್ಲಿ ಬುಮ್ರಾ ಆರ್ಭಟ

ಶಮಿ, ಜಡೇಜಾ ಬಳಿಕ ಅಬ್ಬರಿಸಿದ ಬುಮ್ರಾ ಅನುಭವಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ 35 ರನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದರು. ಈ ಮೂಲಕ ಲಾರಾ 18 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ಲಾರಾ 2004 ರಲ್ಲಿ ಒಂದು ಓವರ್‌ನಲ್ಲಿ 28 ರನ್ ಗಳಿಸಿ ವಿಶ್ವದಾಖಲೆಯನ್ನು ನಿರ್ಮಿಸಿದ್ದರು. ಈಗ ಈ ದಾಖಲೆ ಎರಡನೇ ಬಾರಿ ಪುನರಾವರ್ತನೆಯಾಯಿತು.

ಇನಿಂಗ್ಸ್​ನ 84ನೇ ಓವರ್ ಬೌಲ್ ಮಾಡಿದ ಬ್ರಾಡ್ 35 ರನ್ ನೀಡಿದರು. ಇದು ವಿಶ್ವ ದಾಖಲೆಯಾಯಿತು. ಇದುವರೆಗಿನ ಟೆಸ್ಟ್ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಇಷ್ಟು ರನ್ ನೀಡಿಲ್ಲ ಎಂಬುದು ಗಮನಾರ್ಹ. ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿದ್ದು, ತಮ್ಮ ಹೆಸರಿಗೆ 60 ರನ್ ನೀಡಿ 5 ವಿಕೆಟ್ ಪಡೆದರು.

Published On - 4:13 pm, Sat, 2 July 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?