IND vs ENG: ಇಂಗ್ಲೆಂಡ್‌ನಲ್ಲಿ ರಿಷಬ್ ಪಂತ್-ರವೀಂದ್ರ ಜಡೇಜಾ ಜೊತೆಯಾಟಕ್ಕೆ ದಾಖಲೆಗಳೆಲ್ಲ ಪುಡಿ ಪುಡಿ!
IND vs ENG: ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ. 89 ಎಸೆತಗಳಲ್ಲಿ ಶತಕ ಪೂರೈಸಿದರು.
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ (Rishabh Pant-Ravindra) ಅದ್ಭುತ ಪ್ರದರ್ಶನ ನೀಡಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿದ್ದ ಟೀಂ ಇಂಡಿಯಾ 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಪಂತ್ ಹಾಗೂ ಜಡೇಜಾ ತಮ್ಮ ಬ್ಯಾಟಿಂಗ್ ಮ್ಯಾಜಿಕ್ ಪ್ರದರ್ಶಿಸಿ ತಂಡವನ್ನು ಮುಜುಗರದ ಸ್ಥಿತಿಗೆ ತಲುಪದಂತೆ ಕಾಪಾಡಿದ್ದಲ್ಲದೆ, ರನ್ ಮಳೆಗರೆದು ಸದೃಢ ಸ್ಥಿತಿಗೆ ತಂದರು. ಪಂತ್ ಮತ್ತು ಜಡೇಜಾ ನಡುವೆ 222 ರನ್‌ಗಳ ಜೊತೆಯಾಟವಿತ್ತು. ಪಂತ್ 146 ರನ್‌ಗಳ ಪ್ರಬಲ ಇನ್ನಿಂಗ್ಸ್ ಆಡಿದರೆ, ಜಡೇಜಾ 83 ರನ್‌ಗಳಿಂದ ಮೊದಲ ದಿನದಾಟದ ಅಂತ್ಯದವರೆಗೂ ಕ್ರೀಸ್‌ನಲ್ಲಿದ್ದರು. ಭಾರತ ಮೊದಲ ದಿನ 7 ವಿಕೆಟ್‌ಗೆ 338 ರನ್ ಗಳಿಸಿದೆ. ಪಂತ್ ಮತ್ತು ಜಡೇಜಾ ಜೋಡಿ ಮೊದಲ ದಿನವೇ ಹಲವು ದಾಖಲೆಗಳನ್ನು ಮುರಿದಿದೆ.
- ಇವರಿಬ್ಬರ 222 ರನ್‌ಗಳ ಜೊತೆಯಾಟವು ತವರಿನ ಹೊರಗಿನ ಟೆಸ್ಟ್ ಕ್ರಿಕೆಟ್‌ನಲ್ಲಿ ಆರನೇ ಅಥವಾ ಕೆಳಗಿನ ವಿಕೆಟ್‌ಗೆ ಭಾರತದ ಅತಿ ಹೆಚ್ಚು ಜೊತೆಯಾಟವಾಗಿದೆ. ಮೊಹಮ್ಮದ್ ಅಜರುದ್ದೀನ್ ಮತ್ತು ಸಚಿನ್ ತೆಂಡೂಲ್ಕರ್ ಜೋಡಿಯು ಕೇಪ್ ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 222 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ತಂಡ 58 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಾಗ ಅಜರುದ್ದೀನ್ ಮತ್ತು ತೆಂಡೂಲ್ಕರ್ ಕೂಡ ಈ ಜೊತೆಯಾಟವನ್ನು ಆಡಿದ್ದರು.
- ಪಂತ್ ಬಾರಿಸಿರುವ 5 ಟೆಸ್ಟ್ ಶತಕಗಳಲ್ಲಿ 4 ಶತಕಗಳನ್ನು ಏಷ್ಯಾದ ಹೊರಗೆ ಗಳಿಸಿದ್ದಾರೆ. ಅವರಿಗಿಂತ ಮೊದಲು, ಕೇವಲ 2 ಭಾರತೀಯ ಬ್ಯಾಟ್ಸ್‌ಮನ್‌ಗಳು 25 ವರ್ಷ ತುಂಬುವ ಮೊದಲು ಏಷ್ಯಾದ ಹೊರಗೆ ಅತಿ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ತೆಂಡೂಲ್ಕರ್ ಇದನ್ನು 7 ಬಾರಿ ಮತ್ತು ಸುನಿಲ್ ಗವಾಸ್ಕರ್ 5 ಬಾರಿ ಮಾಡಿದ್ದಾರೆ.
- ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ. 89 ಎಸೆತಗಳಲ್ಲಿ ಶತಕ ಪೂರೈಸಿದರು. 1990 ರಲ್ಲಿ ಲಾರ್ಡ್ಸ್‌ನಲ್ಲಿ 87 ಎಸೆತಗಳಲ್ಲಿ ಅದ್ಭುತಗಳನ್ನು ಮಾಡಿದ ಮೊಹಮ್ಮದ್ ಅಜರುದ್ದೀನ್ ಇಂಗ್ಲೆಂಡ್‌ನಲ್ಲಿ ವೇಗವಾಗಿ ಶತಕ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ.
- ಪಂತ್ ಮತ್ತು ಜಡೇಜಾ ಅವರ 222 ರನ್ ಜೊತೆಯಾಟವು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಜಂಟಿ ನಾಲ್ಕನೇ ಅತ್ಯುನ್ನತ ಜೊತೆಯಾಟವಾಗಿದೆ. ವಾಂಖೆಡೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ 298 ರನ್‌ಗಳ ಮುರಿಯದ ಜೊತೆಯಾಟವನ್ನು ಮಾಡಿದ ದಿಲೀಪ್ ವೆಂಗ್‌ಸರ್ಕರ್ ಮತ್ತು ರವಿಶಾಸ್ತ್ರಿ ಅವರು ಭಾರತದ ಪರ ಗರಿಷ್ಠ ಜೊತೆಯಾಟದ ದಾಖಲೆಯನ್ನು ಹೊಂದಿದ್ದಾರೆ.
- ಇದು ಇಂಗ್ಲೆಂಡ್ ನೆಲದಲ್ಲಿ ಆರನೇ ವಿಕೆಟ್‌ಗೆ ದಾಖಲಾದ ಎರಡನೇ ಗರಿಷ್ಠ ಜೊತೆಯಾಟವಾಗಿದೆ. ಪಂತ್ ಮತ್ತು ಜಡೇಜಾ ಜೋಡಿಯು ಗ್ಯಾರಿ ಸೋಬರ್ಸ್ ಮತ್ತು ಡೇವಿಡ್ ಹಾಲ್ಫೋರ್ಡ್ ಅವರ ದಾಖಲೆಯನ್ನು ಕಡಿಮೆ ಅಂತರದಿಂದ ಮುರಿಯುವ ಅವಕಾಶವನ್ನು ಕಳೆದುಕೊಂಡಿತು. ಸೋಬರ್ಸ್ ಮತ್ತು ಹಾಲ್ಫೋರ್ಡ್ 1996 ರಲ್ಲಿ 274 ರನ್ ಜೊತೆಯಾಟವನ್ನು ಹಂಚಿಕೊಂಡರು.
- ಪಂತ್ ಮತ್ತು ಜಡೇಜಾ ಅವರ ಜೊತೆಯಾಟವು ಇಂಗ್ಲೆಂಡ್‌ನಲ್ಲಿ ಯಾವುದೇ ಭಾರತೀಯ ಜೋಡಿಯ ನಾಲ್ಕನೇ ಅತ್ಯಧಿಕ ಜೊತೆಯಾಟವಾಗಿದೆ.
ಇದನ್ನೂ ಓದಿ
Published On - 2:39 pm, Sat, 2 July 22