IND vs ENG: ಆಂಗ್ಲರ ವಿರುದ್ಧ ಅಬ್ಬರದ ಶತಕ ಸಿಡಿಸಿದ ಪಂತ್​ಗೆ ಕ್ರಿಕೆಟ್​ ದಂತೆಕಥೆಗಳ ಶಹಬ್ಬಾಸ್​ಗಿರಿ..!

Rishabh Pant: ಸಚಿನ್ ತೆಂಡೂಲ್ಕರ್ ಟ್ವಿಟರ್‌ನಲ್ಲಿ, ಒಂದೇ ಪದದಲ್ಲಿ ಹೇಳಬೇಕೆಂದರೆ ಪಂತ್ ಒಬ್ಬ ಅದ್ಭುತ ಆಟಗಾರ. ಕಷ್ಟದ ಸಮಯದಲ್ಲಿ ರವೀಂದ್ರ ಜಡೇಜಾ ಕೂಡ ಉತ್ತಮ ಇನ್ನಿಂಗ್ಸ್ ಆಡಿದರು. ಜೊತೆಗೆ ಈ ಇಬ್ಬರ ಎಲ್ಲಾ ಹೊಡೆತಗಳು ಉತ್ತಮವಾಗಿದ್ದವು ಎಂದಿದ್ದಾರೆ.

IND vs ENG: ಆಂಗ್ಲರ ವಿರುದ್ಧ ಅಬ್ಬರದ ಶತಕ ಸಿಡಿಸಿದ ಪಂತ್​ಗೆ ಕ್ರಿಕೆಟ್​ ದಂತೆಕಥೆಗಳ ಶಹಬ್ಬಾಸ್​ಗಿರಿ..!
ಟೆಸ್ಟ್ ಕ್ರಿಕೆಟ್ ಆಗಿರಲಿ ಅಥವಾ ಏಕದಿನ, ಟಿ20 ಕ್ರಿಕೆಟ್ಟೇ ಆಗಿರಲಿ ರಿಷಬ್ ಪಂತ್ ಕ್ರೀಸ್‌ನಲ್ಲಿದ್ದರೂ ಎಂದರೆ ಅಲ್ಲೊಂದು ದಾಖಲೆ ಆಗುವುದಂತ್ತೂ ಖಚಿತ. ಇದಕ್ಕೆ ಪೂರಕವೆಂಬಂತೆ ಎಡ್ಜ್‌ಬಾಸ್ಟನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ ರಿಷಬ್ ಪಂತ್, ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಅರ್ಧಶತಕವನ್ನು ಗಳಿಸಿದರು. ಇದರೊಂದಿಗೆ ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಸಂಭವಿಸದ ದಾಖಲೆಯೊಂದನ್ನು ಪಂತ್ ನಿರ್ಮಿಸಿದರು.
TV9kannada Web Team

| Edited By: pruthvi Shankar

Jul 02, 2022 | 5:55 PM

ಭಾರತದ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಸದ್ಯ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿದೆ. ಟೀಂ ಇಂಡಿಯಾದ ರಿಷಬ್ ಪಂತ್ (Rishabh Pant) ಮತ್ತು ಭಾರತದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ (Rabindra Jadeja) ಮೊದಲ ದಿನ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದರು. ಇಂಗ್ಲೆಂಡ್​ ವಿರುದ್ಧದ ಐದನೇ ಟೆಸ್ಟ್‌ನ ಮೊದಲ ದಿನದಂದು, ಪಂತ್ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 111 ಎಸೆತಗಳಲ್ಲಿ 147 ರನ್ ಗಳಿಸಿದರು. ಇದರ ನಂತರ, ಭಾರತದ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ವಿಶ್ವ ಕ್ರಿಕೆಟ್ ದಂತಕಥೆಗಳಿಂದ ಪ್ರಶಂಸೆ ಪಡೆಯುತ್ತಿದ್ದಾರೆ. ಪಂಥ್-ಜಡೇಜಾ ಫೈಟಿಂಗ್ ಜೊತೆಯಾಟ ಟೀಂ ಇಂಡಿಯಾಗೆ ಒತ್ತಡದ ನಡುವೆಯೂ ಸಮಾಧಾನದ ಸ್ಥಾನ ನೀಡಿತು. ಇದರಿಂದಾಗಿ ಸೌರವ್, ಸಚಿನ್,ಹರ್ಭಜನ್ (Sourav-Sachin-Harbhajan) ಟ್ವಿಟ್ಟರ್​ನಲ್ಲಿ ಪಂತ್-ಜಡೇಜಾರನ್ನು ಹೊಗಳಿದ್ದಾರೆ. ಅದಲ್ಲದೆ ಇಂದು ಎರಡನೇ ದಿನದ ಟೆಸ್ಟ್ ಪಂದ್ಯಕ್ಕೂ ಮಹಾರಾಜ್ ಟೀಂ ಇಂಡಿಯಾಗೆ ಟಾರ್ಗೆಟ್ ನೀಡಿದ್ದಾರೆ.

ಕ್ರಿಕೆಟ್ ದಂತಕಥೆಗಳ ಶಹಬ್ಬಾಸ್​ಗಿರಿ

ಪಂಥ್-ಜಡೇಜಾ ಆರನೇ ವಿಕೆಟ್‌ಗೆ 222 ರನ್‌ಗಳ ಜೊತೆಯಾಟ ನೀಡಿದರು. ಇದನ್ನು ಮೆಚ್ಚಿದ ಸಚಿನ್ ತೆಂಡೂಲ್ಕರ್ ಟ್ವಿಟರ್‌ನಲ್ಲಿ, ಒಂದೇ ಪದದಲ್ಲಿ ಹೇಳಬೇಕೆಂದರೆ ಪಂತ್ ಒಬ್ಬ ಅದ್ಭುತ ಆಟಗಾರ. ಕಷ್ಟದ ಸಮಯದಲ್ಲಿ ರವೀಂದ್ರ ಜಡೇಜಾ ಕೂಡ ಉತ್ತಮ ಇನ್ನಿಂಗ್ಸ್ ಆಡಿದರು. ಜೊತೆಗೆ ಈ ಇಬ್ಬರ ಎಲ್ಲಾ ಹೊಡೆತಗಳು ಉತ್ತಮವಾಗಿದ್ದವು ಎಂದಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಎಡ್ಜ್‌ಬಾಸ್ಟನ್ ಟೆಸ್ಟ್‌ನ ಎರಡನೇ ದಿನಕ್ಕೆ ಟೀಂ ಇಂಡಿಯಾಗೆ ಟಾರ್ಗೆಟ್ ನೀಡಿದ್ದಾರೆ. ಮತ್ತು ಟ್ವಿಟರ್‌ನಲ್ಲಿ, ಪಂತ್ ಮತ್ತು ಜಡೇಜಾ ಅವರು ಒತ್ತಡದಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟಿಂಗ್‌ನ ವಿಶೇಷ ಪ್ರದರ್ಶನವನ್ನು ನೀಡಿದ್ದಾರೆ. ಇದಕ್ಕಿಂತ ಉತ್ತಮವಾದದ್ದು ಯಾವುದೂ ಇರಲಾರದು. ಎರಡನೇ ದಿನ 365 ರನ್ ತಲುಪಬೇಕಿದೆ ಎಂದಿದ್ದಾರೆ.

ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ವಿಟ್ಟರ್‌ನಲ್ಲಿ, ರಿಷಬ್ ಪಂತ್ ತಂಡಕ್ಕೆ ಅಗತ್ಯವಿದ್ದಾಗ 100 ರನ್ ಬಾರಿಸಿದರು. ಇದನ್ನು ಹೀಗೆ ಮುಂದುವರೆಸಿ ಎಂದು ಬರೆದುಕೊಂಡಿದ್ದಾರೆ.

ಸೌರವ್ ಮತ್ತು ಸಚಿನ್ ಜೊತೆಗೆ, ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಟ್ವೀಟ್ ಮಾಡಿ, “ರಿಷಬ್ ಪಂತ್ ಮತ್ತು ಅವರ ಪಂಚ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೀಗೆ ಮುಂದುವರಿಯಲಿ. ಆದ್ದರಿಂದಲೇ ಅವರನ್ನು ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಕೆರಿಬಿಯನ್ ದಂತಕಥೆ ಇಯಾನ್ ಬಿಷಪ್ ಕೂಡ ಪಂತ್ ಅವರನ್ನು ಹೊಗಳಿದ್ದಾರೆ. ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅವರು, ರಿಷಬ್ ಪಂತ್ ಉತ್ತಮ ಇನ್ನಿಂಗ್ಸ್ ಆಡಿದರು. ಒಂದು ಪದದಲ್ಲಿ ಹೇಳಬೇಕೆಂದರೆ ಇದು ಅತ್ಯುತ್ತಮ ಇನ್ನಿಂಗ್ಸ್ ಆಗಿದೆ. ಟೀಂ ಇಂಡಿಯಾ 96 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಜಡೇಜಾ ಜೊತೆ ಉತ್ತಮ ಜೊತೆಯಾಟ ಆಡಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada