IND vs ENG: ಸೂಪರ್​​ ಸ್ಟಾರ್ ಜಡೇಜಾ; ಆಂಗ್ಲರ ಎದುರು ಅದ್ಭುತ ಶತಕ ಸಿಡಿಸಿ ಮಿಂಚಿದ ಆಲ್​ರೌಂಡರ್..!

IND vs ENG: ಇಂಗ್ಲೆಂಡ್ ವಿರುದ್ಧದ ಬರ್ಮಿಂಗ್ ಹ್ಯಾಮ್ ಟೆಸ್ಟ್​ನಲ್ಲಿ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಭರ್ಜರಿ ಶತಕ ಸಿಡಿಸಿದ್ದಾರೆ.

IND vs ENG: ಸೂಪರ್​​ ಸ್ಟಾರ್ ಜಡೇಜಾ; ಆಂಗ್ಲರ ಎದುರು ಅದ್ಭುತ ಶತಕ ಸಿಡಿಸಿ ಮಿಂಚಿದ ಆಲ್​ರೌಂಡರ್..!
Ravindra Jadeja
Follow us
TV9 Web
| Updated By: ಪೃಥ್ವಿಶಂಕರ

Updated on:Jul 02, 2022 | 4:42 PM

ಇಂಗ್ಲೆಂಡ್ ವಿರುದ್ಧದ ಬರ್ಮಿಂಗ್ ಹ್ಯಾಮ್ ಟೆಸ್ಟ್​ನಲ್ಲಿ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ (Ravindra Jadeja) ಭರ್ಜರಿ ಶತಕ ಸಿಡಿಸಿದ್ದಾರೆ. ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಐದನೇ ಟೆಸ್ಟ್‌ನ ಎರಡನೇ ದಿನದಂದು, ಜಡೇಜಾ ಮೊದಲ ಸೆಷನ್‌ನಲ್ಲಿಯೇ ತಮ್ಮ ಶತಕವನ್ನು ಪೂರ್ಣಗೊಳಿಸಿ, ಭಾರತ ತಂಡದ ಪ್ರಬಲ ಸ್ಕೋರ್‌ಗೆ ಕಾರಣರಾದರು. ರವೀಂದ್ರ ಜಡೇಜಾ ತಮ್ಮ ಹೋರಾಟದ ಇನ್ನಿಂಗ್ಸ್‌ನಲ್ಲಿ 183 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು, ಇದು ಅವರ ವೃತ್ತಿಜೀವನದ ಮೂರನೇ ಶತಕವಾಗಿದೆ. ವಿಶೇಷವೆಂದರೆ ವಿದೇಶಿ ನೆಲದಲ್ಲಿ ಇದು ಅವರ ಮೊದಲ ಶತಕವಾಗಿದ್ದು, ಅದೂ ಕೂಡ ಭಾರತ ತಂಡ 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ನಂತರ ಬ್ಯಾಟಿಂಗ್‌ಗೆ ಬಂದು ಈ ಅದ್ಭುತ ಸೃಷ್ಟಿಸಿದ್ದಾರೆ.

ಶನಿವಾರ, ಜುಲೈ 2, ಟೆಸ್ಟ್‌ನ ಎರಡನೇ ದಿನ, ಜಡೇಜಾ 83 ರನ್‌ಗಳಿಂದ ಇನ್ನಿಂಗ್ಸ್ ಪ್ರಾರಂಭಿಸಿದರು. ಅವರ ಜೊತೆಯಲ್ಲಿ ಮೊಹಮ್ಮದ್ ಶಮಿ ಉತ್ತಮ ಬೆಂಬಲ ನೀಡಿ, ಕ್ರೀಸ್‌ನಲ್ಲಿ ತಮ್ಮ ವಿಕೆಟ್ ಕಾಯ್ದುಕೊಂಡರು. ನಂತರ 79ನೇ ಓವರ್​ನಲ್ಲಿ ಬ್ರಾಡ್ ಎಸೆತಗಳಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಜಡೇಜಾ ಮೂರನೇ ಟೆಸ್ಟ್ ಶತಕ ಪೂರೈಸಿದರು. ಜಡೇಜಾ 183 ಎಸೆತಗಳನ್ನು ಎದುರಿಸಿ, 13 ಬೌಂಡರಿಗಳ ಸಹಾಯದಿಂದ ಶತಕ ಪೂರ್ಣಗೊಳಿಸಿದರು.

ಭಾರತದ ಹೊರಗೆ ಮೊದಲ ಶತಕ

ಇದನ್ನೂ ಓದಿ
Image
IND vs ENG: ಒಂದೇ ಓವರ್​ನಲ್ಲಿ 35 ರನ್ ಚಚ್ಚಿದ ಬುಮ್ರಾ! ಲಾರಾ ದಾಖಲೆ ಮುರಿದ ಯಾರ್ಕರ್ ಕಿಂಗ್
Image
IND vs ENG: ಪಂತ್- ಜಡೇಜಾ ಶತಕ; ಕೊನೆಯಲ್ಲಿ ಬುಮ್ರಾ ಆರ್ಭಟ! 416 ರನ್​ಗಳಿಗೆ ಭಾರತ ಆಲ್​ ಔಟ್

ಇದು ಭಾರತದ ಹೊರಗೆ ಮತ್ತು ಇಂಗ್ಲೆಂಡ್ ವಿರುದ್ಧ ಜಡೇಜಾ ಅವರ ಮೊದಲ ಟೆಸ್ಟ್ ಶತಕವಾಗಿದೆ. ಈ ಹಿಂದೆ ಭಾರತದಲ್ಲಿಯೇ ಜಡೇಜಾ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿದ್ದರು. 189 ಎಸೆತಗಳಲ್ಲಿ 104 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದ ನಂತರ ಅವರು ಅಂತಿಮವಾಗಿ ಔಟಾದರು. ಜೇಮ್ಸ್ ಆಂಡರ್ಸನ್ ಅವರನ್ನು ಬೌಲ್ಡ್ ಮಾಡಿದರು. ಆದಾಗ್ಯೂ, ಜಡೇಜಾ ಔಟ್ ಆಗುವ ಮೊದಲು ತಂಡಕ್ಕಾಗಿ ತಮ್ಮ ಕೆಲಸವನ್ನು ಮಾಡಿದ್ದಾರೆ. ಜಡ್ಡು ಔಟಾಗುವ ಹೊತ್ತಿಗೆ ಭಾರತದ ಸ್ಕೋರ್ 8 ವಿಕೆಟ್‌ಗೆ 375 ರನ್ ಆಗಿತ್ತು. ಜಡೇಜಾ ಮೊದಲು ರಿಷಬ್ ಪಂತ್ ಜೊತೆಗೆ 222 ರನ್‌ಗಳ ಅದ್ಭುತ ಜೊತೆಯಾಟವನ್ನು ಆಡಿದರು. ನಂತರ ಇಂದು ಅವರು ಮೊಹಮ್ಮದ್ ಶಮಿ ಅವರೊಂದಿಗೆ 48 ರನ್‌ಗಳ ಪ್ರಮುಖ ಪಾಲುದಾರಿಕೆಯನ್ನು ಮಾಡಿದರು.

15 ವರ್ಷಗಳ ನಂತರ ಅದ್ಭುತ ಆಟ

ಪಂತ್ ನಂತರ ಜಡೇಜಾ ಶತಕ ಸಿಡಿಸಿದ ವಿಶೇಷತೆ ಏನೆಂದರೆ, ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಇಬ್ಬರು ಎಡಗೈ ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ್ದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದು ಮೂರನೇ ಬಾರಿ. ಇದಕ್ಕೂ ಮೊದಲು 1999ರಲ್ಲಿ ಅಹಮದಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸಡಗೋಪನ್ ರಮೇಶ್ (110) ಮತ್ತು ಸೌರವ್ ಗಂಗೂಲಿ (125) ಶತಕ ಸಿಡಿಸಿದ್ದರು. ನಂತರ 2007ರಲ್ಲಿ ಬೆಂಗಳೂರಿನಲ್ಲಿ ಪಾಕಿಸ್ತಾನದ ವಿರುದ್ಧ ಗಂಗೂಲಿ (239) ಮತ್ತು ಯುವರಾಜ್ ಸಿಂಗ್ (169) ಶತಕ ಸಿಡಿಸಿದ್ದರು. ಜಡೇಜಾ ನಂತರ ಈ ಟೆಸ್ಟ್‌ಗೆ ಭಾರತ ತಂಡದ ನಾಯಕರಾದ ಜಸ್ಪ್ರೀತ್ ಬುಮ್ರಾ 31 ರನ್ ಗಳಿಸಿ ತಂಡವನ್ನು 412 ರನ್‌ಗಳ ಸ್ಕೋರ್‌ಗೆ ಕೊಂಡೊಯ್ದರು. ಸ್ಟುವರ್ಟ್ ಬ್ರಾಡ್ ಅವರ ಅದೇ ಓವರ್‌ನಲ್ಲಿ ವೈಡ್-ನೋಬಾಲ್ ಸೇರಿದಂತೆ ಒಟ್ಟು 35 ರನ್ ಕಲೆಹಾಕುವ ಮೂಲಕ ಬುಮ್ರಾ ವಿಶ್ವದಾಖಲೆ ಮಾಡಿದರು.

Published On - 3:35 pm, Sat, 2 July 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್