IND vs ENG: ಒಂದೇ ಓವರ್​ನಲ್ಲಿ 35 ರನ್ ಚಚ್ಚಿದ ಬುಮ್ರಾ! ಲಾರಾ ದಾಖಲೆ ಮುರಿದ ಯಾರ್ಕರ್ ಕಿಂಗ್

Jasprit Bumrah: ಬುಮ್ರಾ ಅನುಭವಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ 35 ರನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದರು. ಈ ಮೂಲಕ ಲಾರಾ 18 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

IND vs ENG: ಒಂದೇ ಓವರ್​ನಲ್ಲಿ 35 ರನ್ ಚಚ್ಚಿದ ಬುಮ್ರಾ! ಲಾರಾ ದಾಖಲೆ ಮುರಿದ ಯಾರ್ಕರ್ ಕಿಂಗ್
ಜಸ್ಪ್ರೀತ್ ಬುಮ್ರಾ
Follow us
TV9 Web
| Updated By: ಪೃಥ್ವಿಶಂಕರ

Updated on:Jul 02, 2022 | 6:04 PM

ಸೂಪರ್‌ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಭಾರತ ಕ್ರಿಕೆಟ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡ ತಕ್ಷಣ ವಿಶ್ವದಾಖಲೆ ಮಾಡಿದ್ದಾರೆ. ಬುಮ್ರಾ ಈ ದಾಖಲೆ ಮಾಡಿದ್ದು ಚೆಂಡಿನಿಂದಲ್ಲ ಬದಲಾಗಿ ಬ್ಯಾಟ್‌ನಿಂದ. ಬುಮ್ರಾ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿ, ವೆಸ್ಟ್ ಇಂಡೀಸ್ ಶ್ರೇಷ್ಠ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ (Brian Lara) ಅವರ ದಾಖಲೆಯನ್ನು ಮುರಿದರು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಎಡ್ಜ್‌ಬಾಸ್ಟನ್ ಟೆಸ್ಟ್‌ನ ಎರಡನೇ ದಿನದಂದು, ಬುಮ್ರಾ ಅನುಭವಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ (Stuart Broad) ಓವರ್‌ನಲ್ಲಿ 35 ರನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದರು. ಈ ಮೂಲಕ ಲಾರಾ 18 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ಲಾರಾ 2004 ರಲ್ಲಿ ಒಂದು ಓವರ್‌ನಲ್ಲಿ 28 ರನ್ ಗಳಿಸಿ ವಿಶ್ವದಾಖಲೆಯನ್ನು ನಿರ್ಮಿಸಿದ್ದರು. ಈಗ ಈ ದಾಖಲೆ ಎರಡನೇ ಬಾರಿ ಪುನರಾವರ್ತನೆಯಾಯಿತು.

ಇನಿಂಗ್ಸ್​ನ 84ನೇ ಓವರ್ ಬೌಲ್ ಮಾಡಿದ ಬ್ರಾಡ್ 35 ರನ್ ನೀಡಿದರು. ಇದು ವಿಶ್ವ ದಾಖಲೆಯಾಯಿತು. ಇದುವರೆಗಿನ ಟೆಸ್ಟ್ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಇಷ್ಟು ರನ್ ನೀಡಿಲ್ಲ ಎಂಬುದು ಗಮನಾರ್ಹ. ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿದ್ದು, ತಮ್ಮ ಹೆಸರಿಗೆ 60 ರನ್ ನೀಡಿ 5 ವಿಕೆಟ್ ಪಡೆದರು.

ಇದನ್ನೂ ಓದಿ
Image
IND vs ENG: ಪಂತ್- ಜಡೇಜಾ ಶತಕ; ಕೊನೆಯಲ್ಲಿ ಬುಮ್ರಾ ಆರ್ಭಟ! 416 ರನ್​ಗಳಿಗೆ ಭಾರತ ಆಲ್​ ಔಟ್
Image
IND vs ENG: ಸೂಪರ್​​ ಸ್ಟಾರ್ ಜಡೇಜಾ; ಆಂಗ್ಲರ ಎದುರು ಅದ್ಭುತ ಶತಕ ಸಿಡಿಸಿ ಮಿಂಚಿದ ಆಲ್​ರೌಂಡರ್..!

ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು

– 35 ಜಸ್ರ್ಪೀತ್ ಬುಮ್ರಾ (ಬೌಲರ್ ಸ್ಟುವರ್ಟ್ ಬ್ರಾಡ್) ಬರ್ಮಿಂಗ್ಹ್ಯಾಮ್ 2022

– 28 ಬ್ರಿಯಾನ್ ಲಾರಾ (ಬೌಲರ್ ಆರ್ ಪೀಟರ್ಸನ್) ಜೋಹಾನ್ಸ್‌ಬರ್ಗ್ 2003

– 28 ಜಿ ಬೈಲಿ ಆಫ್ ( ಬೌಲರ್ ಜೆ ಆಂಡರ್ಸನ್) ಪರ್ತ್ 2013

– 28 ಕೆ ಮಹಾರಾಜ್ (ಬೌಲರ್ ಜೆ ರೂಟ್) ಪೋರ್ಟ್ ಎಲಿಜಬೆತ್ 2020

46 ವರ್ಷಗಳ ಹಳೆಯ ದಾಖಲೆ ಪುಡಿಪುಡಿ

ಅಷ್ಟೇ ಅಲ್ಲ 46 ವರ್ಷಗಳ ಹಳೆಯ ದಾಖಲೆಯನ್ನು ಬುಮ್ರಾ ಮುರಿದಿದ್ದಾರೆ. ಬುಮ್ರಾ ಅವರು ನಾಯಕರಾಗಿ ತಮ್ಮ ಮೊದಲ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 10 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಬುಮ್ರಾ ಗಳಿಸಿದ 31 ರನ್‌ಗಳು ಭಾರತೀಯ ಸ್ಪಿನ್ನರ್ ಮತ್ತು ನಾಯಕ ಬಿಶನ್ ಸಿಂಗ್ ಬೇಡಿ ಅವರ 1976 ರ ದಾಖಲೆಯನ್ನು ಮುರಿಯಿತು. ಈ ದಾಖಲೆಯನ್ನು ಬಿಶನ್ ಸಿಂಗ್ ಅವರು ನ್ಯೂಜಿಲೆಂಡ್ ವಿರುದ್ಧ 30 ರನ್ ಗಳಿಸುವ ಮೂಲಕ ಸ್ಥಾಪಿಸಿದ್ದರು.

Published On - 4:17 pm, Sat, 2 July 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ