Harbhajan Singh Birthday: 42ನೇ ವರ್ಷಕ್ಕೆ ಕಾಲಿಟ್ಟ ಹರ್ಭಜನ್; ಟರ್ಬನೇಟರ್ ವೃತ್ತಿ ಬದುಕು ಹೇಗಿತ್ತು ಗೊತ್ತಾ?

Harbhajan Singh Birthday: ಹರ್ಭಜನ್, ಮಾರ್ಚ್ 1997 ರಲ್ಲಿ ಬೆಂಗಳೂರಿನಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು, ಅದೇ ಆಸ್ಟ್ರೇಲಿಯಾದ ವಿರುದ್ಧ ಹರ್ಭಜನ್ ಮೊದಲ ಬಾರಿಗೆ ಭಾರತದ ಪರ ಟೆಸ್ಟ್‌ನಲ್ಲಿ ಹ್ಯಾಟ್ರಿಕ್ ಗಳಿಸಿದರು.

Harbhajan Singh Birthday: 42ನೇ ವರ್ಷಕ್ಕೆ ಕಾಲಿಟ್ಟ ಹರ್ಭಜನ್; ಟರ್ಬನೇಟರ್ ವೃತ್ತಿ ಬದುಕು ಹೇಗಿತ್ತು ಗೊತ್ತಾ?
ಹರ್ಭಜನ್ ಸಿಂಗ್
Follow us
TV9 Web
| Updated By: ಪೃಥ್ವಿಶಂಕರ

Updated on: Jul 03, 2022 | 3:31 PM

ಇಂದು ಭಾರತ ಕ್ರಿಕೆಟ್‌ನ ‘ಟರ್ಬನೇಟರ್’ ಹರ್ಭಜನ್ ಸಿಂಗ್ (Harbhajan Singh) ಅವರ ಜನ್ಮದಿನ. ಭಾರತದ ಮಾಜಿ ಕ್ರಿಕೆಟಿಗ 42 ನೇ ವಯಸ್ಸಿಗೆ ಹೆಜ್ಜೆ ಹಾಕಿದ್ದಾರೆ. ಅವರ 23 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ, ಹರ್ಭಜನ್ ಅವರ ಹೆಸರನ್ನು 2007 ರ T20 ವಿಶ್ವಕಪ್ ಮತ್ತು 2011 ರ ODI ವಿಶ್ವಕಪ್ ಗೆದ್ದ ತಂಡದಲ್ಲಿ ನೆನಪಿಸಿಕೊಳ್ಳಲಾಗುತ್ತದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ (Eden Gardens) ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದೆದುರು ಹರ್ಭಜನ್ 21 ನೇ ವಯಸ್ಸಿನಲ್ಲಿ ಹ್ಯಾಟ್ರಿಕ್ ಗಳಿಸಿದರು. ಈಡನ್‌ನಲ್ಲಿ ನಡೆದ ಆ ಟೆಸ್ಟ್ ಪಂದ್ಯದಲ್ಲಿ ಭಜ್ಜಿ ಮೊದಲ ಇನ್ನಿಂಗ್ಸ್‌ನಲ್ಲಿ ಸತತ ರಿಕಿ ಪಾಂಟಿಂಗ್ (7), ಆಡಮ್ ಗಿಲ್‌ಕ್ರಿಸ್ಟ್ (0) ಮತ್ತು ಶೇನ್ ವಾರ್ನ್ (0) (Ricky Ponting, Adam Gilchrist and Shane Warne) ಅವರನ್ನು ಔಟ್ ಮಾಡಿದರು. ಅದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಮೊದಲ ಹ್ಯಾಟ್ರಿಕ್ ಆಗಿತ್ತು. ಆದರೆ, ಆ ಪಂದ್ಯದಲ್ಲಿ ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡ ಫಾಲೋ ಆನ್‌ನಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಗೆಲುವು ಸಾಧಿಸಿತ್ತು. ಆ ಗೆಲುವು ಭಾರತಕ್ಕೆ ಐತಿಹಾಸಿಕ ಗೆಲುವಾಗಿದ್ದು, ಆ ಟೆಸ್ಟ್ ಸರಣಿಯ 3 ಪಂದ್ಯಗಳಲ್ಲಿ ಭಜ್ಜಿ 32 ವಿಕೆಟ್ಗಳನ್ನು ಪಡೆದರು.

ಹರ್ಭಜನ್, ಮಾರ್ಚ್ 1997 ರಲ್ಲಿ ಬೆಂಗಳೂರಿನಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು, ಅದೇ ಆಸ್ಟ್ರೇಲಿಯಾದ ವಿರುದ್ಧ ಹರ್ಭಜನ್ ಮೊದಲ ಬಾರಿಗೆ ಭಾರತದ ಪರ ಟೆಸ್ಟ್‌ನಲ್ಲಿ ಹ್ಯಾಟ್ರಿಕ್ ಗಳಿಸಿದರು. ಚೊಚ್ಚಲ ಟೆಸ್ಟ್​ನಲ್ಲೇ 2 ವಿಕೆಟ್ ಕಬಳಿಸಿದರು. ತಮ್ಮ 23 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ 103 ಟೆಸ್ಟ್‌ಗಳಲ್ಲಿ 418 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ 15-218. ಜೊತೆಗೆ 25 ಬಾರಿ 5 ವಿಕೆಟ್ ಪಡೆದಿದ್ದಾರೆ. ಮತ್ತು ಟೆಸ್ಟ್‌ನಲ್ಲಿ 5 ಬಾರಿ 10 ವಿಕೆಟ್ ಪಡೆದಿದ್ದಾರೆ. ಅಷ್ಟೇ ಅಲ್ಲ, ಟೆಸ್ಟ್​ನಲ್ಲಿ 2 ಶತಕ ಕೂಡ ಸಿಡಿಸಿದ್ದಾರೆ.

ಏಪ್ರಿಲ್ 1997 ರಲ್ಲಿ ಶಾರ್ಜಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಹರ್ಭಜನ್ ತಮ್ಮ ODI ಚೊಚ್ಚಲ ಪಂದ್ಯವನ್ನು ಮಾಡಿದರು. ಅವರು 238 ODIಗಳಲ್ಲಿ 269 ವಿಕೆಟ್ಗಳನ್ನು ಪಡೆದಿದ್ದಾರೆ. ODIನಲ್ಲಿ ಅವರ ಅತ್ಯುತ್ತಮ ಬೌಲಿಂಗ್ 31 ರನ್​ಗೆ 5 ವಿಕೆಟ್ ಪಡೆದಿರುವುದಾಗಿದೆ. 1997 ರಲ್ಲಿ ತಮ್ಮ ಟೆಸ್ಟ್ ಮತ್ತು ODI ಗೆ ಪಾದಾರ್ಪಣೆ ಮಾಡಿದರೂ, ಭಜ್ಜಿ 2006 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ದೇಶಕ್ಕಾಗಿ ಟ್ವೆಂಟಿ 20 ಗೆ ಪಾದಾರ್ಪಣೆ ಮಾಡಿದರು. 26 ಅಂತರಾಷ್ಟ್ರೀಯ ಟ್ವೆಂಟಿ-20 ಪಂದ್ಯಗಳಲ್ಲಿ 25 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ
Image
IND vs ENG: ಕೊರೊನಾದಿಂದ ಚೇತರಿಸಿಕೊಂಡ ಹಿಟ್‌ಮ್ಯಾನ್ ರೋಹಿತ್; ಸೀಮಿತ ಓವರ್‌ಗಳ ಸರಣಿಗೆ ಸಿದ್ಧತೆ
Image
IND vs ENG: 6 ಎಸೆತಗಳಲ್ಲಿ ವಿಶ್ವದಾಖಲೆ ಬರೆದ ಬಮ್ರಾ; ಕೊಹ್ಲಿ- ದ್ರಾವಿಡ್ ಸೆಲೆಬ್ರೇಷನ್ ಹೇಗಿತ್ತು ಗೊತ್ತಾ?

ದೇಶದ ಜೆರ್ಸಿ ಹೊರತಾಗಿ 2008ರಿಂದ 2021ರ ವರೆಗೆ ಐಪಿಎಲ್​ನಲ್ಲಿ 183 ಪಂದ್ಯಗಳಲ್ಲಿ ಆಡಿದ್ದು, 150 ವಿಕೆಟ್ ಪಡೆದಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆಯಲ್ಲಿದ್ದರು.

ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ