Kannada News » Photo gallery » Cricket photos » Ind vs eng 5th test Rishabh Pant becomes the first wicket keeper batsman from India to score one hundred and fifty in a single match outside India
IND VS ENG: 90 ವರ್ಷಗಳ ಭಾರತದ ಟೆಸ್ಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಿದ ರಿಷಬ್ ಪಂತ್..!
IND VS ENG: ಎಡ್ಜ್‌ಬಾಸ್ಟನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ ರಿಷಬ್ ಪಂತ್, ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಅರ್ಧಶತಕವನ್ನು ಗಳಿಸಿದರು. ಇದರೊಂದಿಗೆ ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಸಂಭವಿಸದ ದಾಖಲೆಯೊಂದನ್ನು ಪಂತ್ ನಿರ್ಮಿಸಿದರು.
ಟೆಸ್ಟ್ ಕ್ರಿಕೆಟ್ ಆಗಿರಲಿ ಅಥವಾ ಏಕದಿನ, ಟಿ20 ಕ್ರಿಕೆಟ್ಟೇ ಆಗಿರಲಿ ರಿಷಬ್ ಪಂತ್ ಕ್ರೀಸ್‌ನಲ್ಲಿದ್ದರೂ ಎಂದರೆ ಅಲ್ಲೊಂದು ದಾಖಲೆ ಆಗುವುದಂತ್ತೂ ಖಚಿತ. ಇದಕ್ಕೆ ಪೂರಕವೆಂಬಂತೆ ಎಡ್ಜ್‌ಬಾಸ್ಟನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ ರಿಷಬ್ ಪಂತ್, ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಅರ್ಧಶತಕವನ್ನು ಗಳಿಸಿದರು. ಇದರೊಂದಿಗೆ ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಸಂಭವಿಸದ ದಾಖಲೆಯೊಂದನ್ನು ಪಂತ್ ನಿರ್ಮಿಸಿದರು.
1 / 5
ಎಡ್ಜ್‌ಬಾಸ್ಟನ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ರಿಷಬ್ ಪಂತ್ ಅರ್ಧಶತಕ ಬಾರಿಸಿದ ತಕ್ಷಣ, ಅವರು ವಿದೇಶಿ ನೆಲದಲ್ಲಿ ಶತಕದ ನಂತರ ಅರ್ಧಶತಕ ಗಳಿಸಿದ ಮೊದಲ ಭಾರತೀಯ ವಿಕೆಟ್-ಕೀಪರ್ ಎನಿಸಿಕೊಂಡರು. ಧೋನಿಯಿಂದ ಹಿಡಿದು ಫಾರೂಕ್ವರೆಗೆ ಯಾರೂ ಈ ಸಾಧನೆ ಮಾಡಲು ಸಾಧ್ಯವಾಗಲಿಲ್ಲ, ಆದರೆ ಪಂತ್ ಅದನ್ನು ಮಾಡಿದರು.
2 / 5
ಭಾರತದ ಇಬ್ಬರು ವಿಕೆಟ್‌ಕೀಪರ್‌ಗಳು ಮಾತ್ರ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಲು ಸಮರ್ಥರಾಗಿದ್ದಾರೆ. 1973ರಲ್ಲಿ ಇಂಗ್ಲೆಂಡ್ ವಿರುದ್ಧ ಮುಂಬೈ ಟೆಸ್ಟ್‌ನಲ್ಲಿ ಫಾರೂಕ್ ಇಂಜಿನಿಯರ್ 121 ಮತ್ತು 66 ರನ್ ಗಳಿಸಿದ್ದರು. ಆದರೆ ವಿದೇಶಿ ನೆಲದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ವಿಕೆಟ್ ಕೀಪರ್ ಪಂತ್.
3 / 5
ಪಂತ್ ಎಡ್ಜ್‌ಬಾಸ್ಟನ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 76 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ವೇಗದ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದರೂ ಪಂತ್ ನಿಲ್ಲದೆ ಮೊದಲ ಇನ್ನಿಂಗ್ಸ್‌ನಂತೆ 7 ಬೌಂಡರಿಗಳ ನೆರವಿನಿಂದ ಅರ್ಧಶತಕ ಗಳಿಸಿದರು. ಆದಾಗ್ಯೂ, ಎಡ್ಜ್‌ಬಾಸ್ಟನ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 57 ರನ್ ಗಳಿಸಿದ ನಂತರ ಪಂತ್ ಔಟಾದರು.
4 / 5
ಪಂತ್ ಎರಡನೇ ಇನ್ನಿಂಗ್ಸ್‌ನಲ್ಲಿ ರಿವರ್ಸ್ ಸ್ವೀಪ್ ಆಡುವ ಮೂಲಕ ವಿಕೆಟ್ ಕಳೆದುಕೊಂಡರು. ಅವರು ಜಾಕ್ ಲೀಚ್ ಅವರ ಚೆಂಡಿನ ಮೇಲೆ ರಿವರ್ಸ್ ಸ್ವೀಪ್ ಆಡಿದರು. ಆದರೆ ಚೆಂಡು ಅವರ ಗ್ಲೌಸ್‌ಗೆ ಬಡಿದು ಸ್ಲಿಪ್‌ನಲ್ಲಿ ನಿಂತಿದ್ದ ಜೋ ರೂಟ್ ಅವರ ಕೈಗೆ ಹೋಯಿತು.