Shaheen Afridi: ಶಾಹೀನ್ ಅಫ್ರಿದಿ ಈಗ DSP: ಹೊಸ ಇನಿಂಗ್ಸ್ ಆರಂಭಿಸಿದ ಪಾಕ್ ವೇಗಿ

Shaheen Afridi: ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಯನ್ನು ಔಟ್ ಮಾಡುವ ಮೂಲಕ ಅಫ್ರಿದಿ ಸಾಕಷ್ಟು ಸದ್ದು ಮಾಡಿದ್ದರು.

Jul 05, 2022 | 3:59 PM
TV9kannada Web Team

| Edited By: Zahir PY

Jul 05, 2022 | 3:59 PM

ಪಾಕಿಸ್ತಾನ್ ತಂಡದ ಎಡಗೈ ವೇಗಿ ಶಾಹೀನ್ ಅಫ್ರಿದಿ ಇದೀಗ ಡಿಎಸ್​ಪಿ ಆಗಿ ಹೊಸ ಇನಿಂಗ್ಸ್​ ಆರಂಭಿಸಿದ್ದಾರೆ. ಖೈಬರ್ ಪಖ್ತುಂಖ್ವಾ ಪೊಲೀಸರು ಅವರಿಗೆ ಗೌರವ ಡಿಎಸ್​ಪಿ ಹುದ್ದೆಯನ್ನು ನೀಡಿದ್ದು, ಈ ಮೂಲಕ ಕ್ರಿಕೆಟಿಗನಾಗಿ ಜೊತೆಗೆ ಡಿಎಸ್​ಪಿ ಆಗಿ ಶಾಹೀನ್ ಅಫ್ರಿದಿ ಕಾಣಿಸಿಕೊಳ್ಳಲಿದ್ದಾರೆ.

1 / 6
ಶಾಹೀನ್ ಅವರ ತಂದೆಯೂ ಪೊಲೀಸ್ ಅಧಿಕಾರಿಯಾಗಿದ್ದರು. ಅಲ್ಲದೆ ಅವರ ಸಹೋದರ ಕೂಡ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಪಾಕಿಸ್ತಾನದ ಯೂತ್ ಐಕಾನ್ ಆಗಿ ಗುರುತಿಸಿಕೊಂಡಿರುವ ಗೌರವ ಡಿಎಸ್​ಪಿ ಹುದ್ದೆಯನ್ನು ನೀಡಲಾಗಿದೆ.

2 / 6
 ಈ ಮೂಲಕ ಯುವಕರನ್ನು ಪೊಲೀಸ್ ಇಖಾಲೆಯತ್ತ ಸೆಳೆಯಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಹೊಸ ಹುದ್ದೆಯಿಂದಾಗಿ ಜನರಲ್ಲಿ ಶಾಹೀನ್ ಅವರ ಮೇಲಿನ ನಂಬಿಕೆ ಹೆಚ್ಚುತ್ತದೆ ಎಂದು  ಪಖ್ತುಂಖ್ವಾ ಪೊಲೀಸರು ತಿಳಿಸಿದ್ದಾರೆ.

3 / 6
ಡಿಎಸ್​ಪಿ ಶಾಹೀನ್ ಅಫ್ರಿದಿ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೊಲೀಸ್ ರಾಯಭಾರಿಯಾಗಿರುವುದು ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ. ಅಲ್ಲದೆ ನಮ್ಮ ತಾಯ್ನಾಡನ್ನು ಸುರಕ್ಷಿತವಾಗಿರಿಸಿದ್ದಕ್ಕಾಗಿ ಪಾಕಿಸ್ತಾನಿ ಪಡೆಗಳಿಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದು ಅಫ್ರಿದಿ ತಿಳಿಸಿದ್ದಾರೆ.

4 / 6
ಎಡಗೈ ವೇಗದ ಬೌಲರ್ ಶಾಹೀನ್ ಅಫ್ರಿದಿ ಪ್ರಸ್ತುತ ಪಾಕಿಸ್ತಾನ ತಂಡದ ಭಾಗವಾಗಿದ್ದಾರೆ. ಈ ತಿಂಗಳು ನಡೆಯಲಿರುವ ಶ್ರೀಲಂಕಾ ವಿರುದ್ದದ ಸರಣಿಗೂ ಅಫ್ರಿದಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವಟ ಟಿ20 ವಿಶ್ವಕಪ್​ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಯನ್ನು ಔಟ್ ಮಾಡುವ ಮೂಲಕ ಅಫ್ರಿದಿ ಸಾಕಷ್ಟು ಸುದ್ದಿ ಮಾಡಿದ್ದರು.

5 / 6
ಈ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಅಭಿಮಾನಿಗಳು ಶಾಹೀನ್ ಅಫ್ರಿದಿ ಹಾಗೂ ಟೀಮ್ ಇಂಡಿಯಾ ಪ್ರಮುಖ ಬ್ಯಾಟ್ಸ್​ಮನ್​ಗಳ ಕದನವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಏಕೆಂದರೆ ಅಕ್ಟೋಬರ್ 22 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ.

6 / 6

Follow us on

Most Read Stories

Click on your DTH Provider to Add TV9 Kannada