AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sushmita Sen: ಸುಶ್ಮಿತಾ ಸೇನ್​ ಮುಖದಲ್ಲಿ ಹೊಸ ಕಳೆ; ಲಲಿತ್​ ಮೋದಿ ಜತೆ ಸಂಬಂಧ ಬೆಳೆಸಿದ ನಂತರ ಹೇಗಿದೆ ಲೈಫ್​?

Lalit Modi | Sushmita Sen: ಜನರು ಎಷ್ಟೇ ಟ್ರೋಲ್​ ಮಾಡಿದರೂ ಸುಶ್ಮಿತಾ ಸೇನ್ ತಲೆ ಕೆಡಿಸಿಕೊಂಡಿಲ್ಲ. ಬಿಂದಾಸ್​ ಆಗಿ ಫೋಟೋಗೆ ಪೋಸ್​ ನೀಡುತ್ತಾ, ಖುಷಿಖುಷಿಯಾಗಿ ಅವರು ದಿನ ಕಳೆಯುತ್ತಿದ್ದಾರೆ.

Sushmita Sen: ಸುಶ್ಮಿತಾ ಸೇನ್​ ಮುಖದಲ್ಲಿ ಹೊಸ ಕಳೆ; ಲಲಿತ್​ ಮೋದಿ ಜತೆ ಸಂಬಂಧ ಬೆಳೆಸಿದ ನಂತರ ಹೇಗಿದೆ ಲೈಫ್​?
ಸುಶ್ಮಿತಾ ಸೇನ್
TV9 Web
| Edited By: |

Updated on:Jul 21, 2022 | 2:58 PM

Share

ಕಳೆದ ಕೆಲವು ದಿನಗಳಿಂದ ನಟಿ ಸುಶ್ಮಿತಾ ಸೇನ್ (Sushmita Sen)​ ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ. ಅವರ ಖಾಸಗಿ ಜೀವನದ ವಿಚಾರ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಕೆಲವರು ಅವರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ. ಅದಕ್ಕೆ ಕಾರಣ, ಲಲಿತ್​ ಮೋದಿ (Lalit Modi) ಜೊತೆಗಿನ ಸುಶ್ಮಿತಾ ಸೇನ್​ ರಿಲೇಷನ್​ಶಿಪ್​. 46ರ ಪ್ರಾಯದ ಅವರು 58ರ ಪ್ರಾಯದ ಲಲಿತ್​ ಮೋದಿ ಜೊತೆಗೆ ಡೇಟಿಂಗ್​ ಮಾಡುತ್ತಿದ್ದಾರೆ. ‘ಹಣಕ್ಕಾಗಿ ಪ್ರೀತಿ ಮಾಡುವ ಮಹಿಳೆ’ ಎಂದು ಅವರನ್ನು ನೆಟ್ಟಿಗರು ಟ್ರೋಲ್​ (Troll) ಮಾಡುತ್ತಿದ್ದಾರೆ. ಆದರೆ ಅಂಥ ಕಮೆಂಟ್​ಗಳಿಗೆ ಸುಶ್ಮಿತಾ ಸೇನ್​ ಬೆಲೆ ನೀಡಿಲ್ಲ. ತಮ್ಮ ಪಾಡಿಗೆ ತಾವು ಹಾಯಾಗಿ ಇದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಕೆಲವು ನಟಿಯರು ಟೀಕೆಗಳಿಗೆ ಹೆದರಿ ತಮ್ಮ ನಿರ್ಧಾರಗಳನ್ನು ಗುಟ್ಟಾಗಿ ಇಡುತ್ತಾರೆ. ಇನ್ನೂ ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಸೈಲೆಂಟ್​ ಆಗಿಬಿಡುತ್ತಾರೆ. ಆದರೆ ಸುಶ್ಮಿತಾ ಸೇನ್​ ಅಂಥವರಲ್ಲ. ಯಾರು ಎಷ್ಟೇ ಟ್ರೋಲ್​ ಮಾಡಿದರೂ ಅವರು ತಲೆ ಕೆಡಿಸಿಕೊಂಡಿಲ್ಲ. ಬಿಂದಾಸ್​ ಆಗಿ ಫೋಟೋಗೆ ಪೋಸ್​ ನೀಡುತ್ತ, ಖುಷಿಖುಷಿಯಾಗಿ ದಿನ ಕಳೆಯುತ್ತಿದ್ದಾರೆ. ತಮ್ಮ ಜೀವನದ ಬಗ್ಗೆ ಅವರು ಅಪ್​ಡೇಟ್​ ನೀಡುತ್ತಿದ್ದಾರೆ. ಶೀಘ್ರದಲ್ಲೇ ಅವರು ಲಲಿತ್​ ಮೋದಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ. ಆ ಬಗ್ಗೆ ಅವರಿಂದಲೇ ಅಧಿಕೃತ ಮಾಹಿತಿ ಹೊರಬರಬೇಕಿದೆ.

ಇದನ್ನೂ ಓದಿ
Image
ಅಕ್ರಮ್​​ To ಲಲಿತ್: ಸುಶ್ಮಿತಾ ಸೇನ್​ ಬಾಳಲ್ಲಿ ಬಂದ 10 ಮಂದಿ; ಇಲ್ಲಿದೆ ನಟಿಯ ಲವ್ ಲೈಫ್
Image
ಸುಶ್ಮಿತಾ ಸೇನ್ ಒಟ್ಟೂ ಆಸ್ತಿ ಮೌಲ್ಯ ಎಷ್ಟು? ಅವರ ಬಳಿ ಯಾವೆಲ್ಲಾ ಕಾರುಗಳಿವೆ ಗೊತ್ತಾ?
Image
Sushmita Sen: 46ರ ಸುಶ್ಮಿತಾ ಸೇನ್​​​ ಮದುವೆ ಆಗದಿದ್ದರೂ 2 ಮಕ್ಕಳ ತಾಯಿ; 56ರ ಲಲಿತ್​ ಮೋದಿ ಜತೆ ಈಗ ಚಿಗುರಿದೆ ಪ್ರೀತಿ
Image
Oxygen Cylinder: ಆಸ್ಪತ್ರೆಗೆ ಆಕ್ಸಿಜನ್​ ನೀಡಲು ಮುಂದಾದ ನಟಿ ಸುಶ್ಮಿತಾ ಸೇನ್​​ಗೆ ತಪ್ಪಲಿಲ್ಲ ಟ್ರೋಲ್ ಕಾಟ

ತಮಗೆ ಅನಿಸಿದ್ದನ್ನು ಮಾಡುವ ಕಾರಣದಿಂದಲೇ ಸುಶ್ಮಿತಾ ಸೇನ್ ಫೇಮಸ್​. ಮಕ್ಕಳನ್ನು ದತ್ತು ಪಡೆಯುವ ವಿಚಾರದಲ್ಲೂ ಇದು ಸಾಬೀತಾಗಿತ್ತು. 18ನೇ ವಯಸ್ಸಿನಲ್ಲೇ ಸುಶ್ಮಿತಾ ಸೇನ್​ ಅವರು ಮಿಸ್​ ಯೂನಿವರ್ಸ್​ ಮತ್ತು ಮಿಸ್​ ಇಂಡಿಯಾ ಕಿರೀಟ ಪಡೆದು ಬೀಗಿದರು. ಬಳಿಕ ಅವರಿಗೆ ಚಿತ್ರರಂಗದಿಂದ ಹೇರಳ ಅವಕಾಶ ಬಂತು. ತಮ್ಮ 24ನೇ ವಯಸ್ಸಿನಲ್ಲಿ ಅವರು ಹೆಣ್ಣು ಮಗುವನ್ನು ದತ್ತು ಪಡೆಯುವ ತೀರ್ಮಾನಕ್ಕೆ ಬಂದರು. ಆಗ ಅವರ ನಿರ್ಧಾರಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಮದುವೆ ಆಗದೇ ಮಗುವನ್ನು ಸಾಕುವುದು ಕಷ್ಟ ಎಂದು ಕೆಲವರು ಕಿವಿಮಾತು ಹೇಳಿದ್ದರು. ಆದರೆ ಅವುಗಳಿಗೆ ಸುಶ್ಮಿತಾ ಸೇನ್​ ತಲೆ ಕೆಡಿಸಿಕೊಳ್ಳಲಿಲ್ಲ. 2000ನೇ ಇಸವಿಯಲ್ಲಿ ರೀನೀ ಎಂಬ ಹೆಣ್ಣು ಮಗಳನ್ನು ಅವರು ದತ್ತು ಪಡೆದುಕೊಂಡರು. 2010ರಲ್ಲಿ ಆಲಿಶಾ ಎಂಬ ಮಗುವನ್ನು ಅವರು ದತ್ತು ಪಡೆದರು.

ಲಲಿತ್​ ಮೋದಿ ಜತೆಗಿನ ಡೇಟಿಂಗ್ ವಿಚಾರ ಬಯಲಾದ ಬಳಿಕ ಮೊದಲ ಬಾರಿಗೆ ಸುಶ್ಮಿತಾ ಸೇನ್​ ಅವರು ಸೂಚ್ಯವಾಗಿ ಒಂದು ವಾಕ್ಯವನ್ನು ಹಂಚಿಕೊಂಡಿದ್ದರು. ‘ಕೆಲವೊಮ್ಮೆ ನೀವು ಕತ್ತಲೆಯ ಜಾಗದಲ್ಲಿ ಮುಳುಗಿದ್ದಾಗ ನಿಮ್ಮನ್ನು ಹುಗಿದಂತೆ ಎನಿಸಬಹುದು. ಆದರೆ ನಿಮ್ಮನ್ನು ಬಿತ್ತಿರಬಹುದಲ್ಲವೇ?’ ಎಂಬ ವಾಕ್ಯವನ್ನು ಅವರು ಪೋಸ್ಟ್​ ಮಾಡಿದ್ದರು. ಅದು ನೆಟ್ಟಿಗರ ಗಮನ ಸೆಳೆದಿತ್ತು.

Published On - 2:58 pm, Thu, 21 July 22