ಅಕ್ರಮ್​​ To ಲಲಿತ್: ಸುಶ್ಮಿತಾ ಸೇನ್​ ಬಾಳಲ್ಲಿ ಬಂದ 10 ಮಂದಿ; ಇಲ್ಲಿದೆ ನಟಿಯ ಲವ್ ಲೈಫ್

ಲಲಿತ್ ಮೋದಿ ಜತೆ ಸುಶ್ಮಿತಾ ಡೇಟಿಂಗ್ ಮಾಡುತ್ತಿದ್ದಾರೆ. ಲಲಿತ್​ಗೂ ಮೊದಲು ಸುಶ್ಮಿತಾ ಅವರ ಬಾಳಲ್ಲಿ 9 ಮಂದಿ ಬಂದು ಹೋಗಿದ್ದಾರೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಅಕ್ರಮ್​​ To ಲಲಿತ್: ಸುಶ್ಮಿತಾ ಸೇನ್​ ಬಾಳಲ್ಲಿ ಬಂದ 10 ಮಂದಿ; ಇಲ್ಲಿದೆ ನಟಿಯ ಲವ್ ಲೈಫ್
ರೋಹ್ಮನ್-ಸುಶ್ಮಿತಾ-ವಾಸಿಮ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 16, 2022 | 7:45 AM

ಸುಶ್ಮಿತಾ ಸೇನ್ (Sushmita Sen) ಅವರು ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ಸುಶ್ಮಿತಾ ಸೇನ್ ವಯಸ್ಸು 46. ವಯಸ್ಸಿನಲ್ಲಿ ತಮಗಿಂತ 12 ವರ್ಷ ಹಿರಿಯ ವ್ಯಕ್ತಿ ಲಲಿತ್ ಮೋದಿ (Lalit Modi) ಜತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ. ಈ ಫೋಟೋಗಳನ್ನು ಸ್ವತಃ ಲಲಿತ್ ಮೋದಿ ಅವರು ಹಂಚಿಕೊಂಡಿದ್ದಾರೆ. ಲಲಿತ್​ಗೂ ಮೊದಲು ಸುಶ್ಮಿತಾ ಅವರ ಬಾಳಲ್ಲಿ 9 ಮಂದಿ ಬಂದು ಹೋಗಿದ್ದಾರೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಕ್ರಮ್ ಭಟ್

1996ರ ಸಮಯದಲ್ಲಿ ವಿಕ್ರಮ್ ಭಟ್ ಹಾಗೂ ಸುಶ್ಮಿತಾ ಸೇನ್ ಬಾಲಿವುಡ್​ನ ಕ್ಯೂಟ್ ಕಪಲ್ ಆಗಿದ್ದರು. ಇಬ್ಬರೂ ಸಾಕಷ್ಟು ಬಾರಿ ಒಟ್ಟಾಗಿ ಸುತ್ತಾಡಿದ್ದಿದೆ. ‘ದಸ್ತಕ್​’ ಚಿತ್ರದ ಶೂಟಿಂಗ್ ವೇಳೆ ಇವರಿಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ 1996ರಲ್ಲಿ ತೆರೆಗೆ ಬಂತು. ಈ ಚಿತ್ರಕ್ಕೆ ಸುಶ್ಮಿತಾ ನಾಯಕಿ. ವಿಕ್ರಮ್ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದರು.

ಇದನ್ನೂ ಓದಿ
Image
ಸುಶ್ಮಿತಾ ಸೇನ್ ಒಟ್ಟೂ ಆಸ್ತಿ ಮೌಲ್ಯ ಎಷ್ಟು? ಅವರ ಬಳಿ ಯಾವೆಲ್ಲಾ ಕಾರುಗಳಿವೆ ಗೊತ್ತಾ?
Image
ನಟಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್​ನಲ್ಲಿರುವ ಲಲಿತ್ ಮೋದಿ ಯಾರು? ಎಷ್ಟು ಸಾವಿರ ಕೋಟಿ ಒಡೆಯ ಗೊತ್ತಾ?
Image
Sushmita Sen: ಲಲಿತ್ ಮೋದಿ ಜತೆ ಡೇಟಿಂಗ್​ ರಹಸ್ಯ ಬಯಲಾದ ಬಳಿಕ ನಟಿ ಸುಶ್ಮಿತಾ ಸೇನ್​ ಮೊದಲ ಪ್ರತಿಕ್ರಿಯೆ ಏನು?
Image
ಬಾಲಿವುಡ್ ನಟಿ ಸುಶ್ಮಿತಾ ಸೇನ್‌ ಜೊತೆ ಲಲಿತ್ ಮೋದಿ ಡೇಟಿಂಗ್

ರಣದೀಪ್ ಹೂಡ

ಬಾಲಿವುಡ್ ನಟ ರಣದೀಪ್ ಹೂಡ ಹಾಗೂ ಸುಶ್ಮಿತಾ ಸೇನ್ 3 ವರ್ಷಗಳ ಕಾಲ ರಿಲೇಶನ್​ಶಿಪ್​ನಲ್ಲಿದ್ದರು. ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆಗಿತ್ತು. ಹಲವು ಮಾಧ್ಯಮಗಳಲ್ಲಿ ಇವರ ಸುದ್ದಿ ಹರಿದಾಡಿದವು. ‘ಸುಶ್ಮಿತಾ ಸೇನ್ ಅವರ ಜತೆ ಬ್ರೇಕಪ್ ಮಾಡಿಕೊಂಡಿದ್ದು ನನ್ನ ಜೀವನದಲ್ಲಿ ನಡೆದ ಅತ್ಯಂತ ಒಳ್ಳೆಯ ವಿಚಾರಗಳಲ್ಲಿ ಒಂದು’ ಎಂದು ರಣದೀಪ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಬಂಟಿ ಸಚ್​ದೇವ್​

ಸುಶ್ಮಿತಾ ಸೇನ್ ಹಾಗೂ ಬಂಟಿ ಸಚ್​ದೇವ್ ಮಧ್ಯೆ ಲವ್ ಅಫೇರ್ ಇದೆ ಎಂಬ ಸುದ್ದಿ ಹುಟ್ಟಿಕೊಂಡಿತ್ತು. ಸಚ್​ದೇವ್ ಅವರು ಟ್ಯಾಲೆಂಟ್ ಮ್ಯಾನೇಜ್​ಮೆಂಟ್ ಕಂಪನಿ ಒಂದನ್ನು ಹೊಂದಿದ್ದರು. ಹಲವು ಬಾರಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ವದಂತಿ ಬಗ್ಗೆ ಪ್ರಶ್ನೆ ಕೇಳಿದಾಗ ಸುಶ್ಮಿತಾ ನಕ್ಕು ಸುಮ್ಮನಾಗಿದ್ದರು.

ವಾಸಿಮ್ ಅಕ್ರಮ್

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಮ್ ಅಕ್ರಮ್ ಮತ್ತು ಸುಶ್ಮಿತಾ ಸೇನ್ ನಡುವೆ ಪ್ರೀತಿ ಇದೆ ಎನ್ನಲಾಗಿತ್ತು. ಲಲಿತ್ ಮೋದಿ ಜತೆ ಸುಶ್ಮಿತಾ ಆಪ್ತರಾದರು ಹಾಗೂ ವಾಸಿಮ್ ಮತ್ತು ಸುಶ್ಮಿತಾ ನಡುವೆ ಲಾಂಗ್​ ಡಿಸ್ಟನ್ಸ್ ಇತ್ತು ಎಂಬ ಕಾರಣಕ್ಕೆ ಇವರ ಸಂಬಂಧ ಐದೇ ತಿಂಗಳಲ್ಲಿ ಮುರಿದು ಬಿತ್ತು ಎನ್ನಲಾಗಿದೆ.

ರಿತಿಕ್ ಭಾಸಿನ್  

2015ರಲ್ಲಿ ಮುಂಬೈ ಮೂಲದ ರೆಸ್ಟೋರೆಂಟ್ ಮಾಲೀಕ ರಿತಿಕ್ ಭಾಸಿನ್ ಜತೆ ಸುಶ್ಮಿತಾ ಸೇನ್ ಸುತ್ತಾಟ ನಡೆಸಿದ್ದರು ಎನ್ನಲಾಗಿದೆ. ಇವರ ಅನೇಕ ಕಡೆಗಳಲ್ಲಿ ಒಟ್ಟಾಗಿ ಸುತ್ತಾಟ ನಡೆಸಿದ್ದರು. ಆದರೆ, ಇವರ ಸಂಬಂಧ ಹೆಚ್ಚು ಕಾಲ ಬಾಳಲಿಲ್ಲ.

ಮುದಸ್ಸರ್ ಆಜಿಜ್

ನಿರ್ದೇಶಕ ಮುದಸ್ಸಾರ್​ ಆಜಿಜ್ ಜತೆ ಸುಶ್ಮಿತಾ ಲವ್ ಅಫೇರ್ ಇಟ್ಟುಕೊಂಡಿದ್ದರು ಎನ್ನಲಾಗಿತ್ತು. ಇವರ ಸಂಬಂಧದ ಬಗ್ಗೆ ಹುಟ್ಟಿಕೊಂಡ ಸುದ್ದಿಯಿಂದ ಮುದಸ್ಸಾರ್ ಪಾಲಕರು ಸಾಕಷ್ಟು ಡಿಸ್ಟರ್ಬ್ ಆಗಿದ್ದರಂತೆ. ಈ ಬಗ್ಗೆ ಸಂದರ್ಶನದಲ್ಲಿ ಮುದಸ್ಸಾರ್ ಹೇಳಿಕೊಂಡಿದ್ದರು.

ಇಮ್ತಿಯಾಜ್ ಖತ್ರಿ

ಸುಶ್ಮಿತಾ ಸೇನ್​ಗೆ ಆಗ 36 ವರ್ಷ ವಯಸ್ಸು. ಅವರು 22 ವರ್ಷದ ಉದ್ಯಮಿ ಇಮ್ತಿಯಾಜ್ ಖತ್ರಿ ಜತೆ ಸಂಬಂಧ ಇಟ್ಟುಕೊಂಡಿದ್ದರು ಎನ್ನಲಾಗಿತ್ತು. ಗೋವಾದಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಸುಶ್ಮಿತಾ ಈ ಬಗ್ಗೆ ಮೌನ ಮುರಿದಿಲ್ಲ.

ಸಬೀರ್ ಭಾಟಿಯಾ  

ಹಾಟ್​ಮೇಲ್ ಸ್ಥಾಪಕ ಸಬೀರ್ ಭಾಟಿಯಾ ಜತೆ ಸುಶ್ಮಿತಾ ರಿಲೇಶನ್​ಶಿಪ್​ನಲ್ಲಿದ್ದರು ಎನ್ನಲಾಗಿದೆ. ಸುಶ್ಮಿತಾಗೆ 10.5 ಕ್ಯಾರಟ್​ನ ಡೈಮಂಡ್ಅನ್ನು ಸಬೀರ್ ಗಿಫ್ಟ್ ಮಾಡಿದ್ದರು ಎಂದು ವರದಿ ಆಗಿತ್ತು.

ರೋಹ್ಮನ್ ಶಾಲ್

ಅದು 2018ರ ಸಮಯ. ಸುಶ್ಮಿತಾ ಅವರು ರೋಹ್ಮನ್ ಜತೆ ಫೋಟೋ ಹಂಚಿಕೊಂಡರು. ಇದರಿಂದ ಫ್ಯಾನ್ಸ್​ಗೆ ಕುತೂಹಲ ಮೂಡಿತು. ಇವರಿಬ್ಬರ ನಡುವೆ ಪ್ರೀತಿ ಮೂಡಿದೆ ಎಂಬ ವಿಚಾರ ನಂತರ ಖಚಿತವಾಯಿತು. 2021ರ ಡಿಸೆಂಬರ್ ವೇಳೆಗೆ ಇಬ್ಬರೂ ಬ್ರೇಕಪ್ ಮಾಡಿಕೊಂಡರು.  ‘ನಾವು ಗೆಳೆಯರಾಗಿ ನಮ್ಮ ಪಯಣ ಆರಂಭಿಸಿದೆವು, ಈಗ ಗೆಳೆಯರಾಗೇ ಇರುತ್ತಿದ್ದೇವೆ’ ಎಂದು ಸುಶ್ಮಿತಾ ಸೇನ್ ಪೋಸ್ಟ್ ಮಾಡಿದ್ದರು. ಸುಶ್ಮಿತಾಗಿಂತ ರೋಹ್ಮನ್​ ವಯಸ್ಸಿನಲ್ಲಿ ಚಿಕ್ಕವರು.

Published On - 8:41 pm, Fri, 15 July 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್