Ranbir Kapoor: ಆಲಿಯಾ ಭಟ್​ ಜತೆ ಮದುವೆ ಆದ ಬಳಿಕ ರಣಬೀರ್​ ಕಪೂರ್​ಗೆ ಮೊದಲ ಸೋಲು; ಫ್ಯಾನ್ಸ್​ಗೆ ನಿರಾಸೆ

Shamshera Box Office Collection: ರಣಬೀರ್​ ಕಪೂರ್​ ಅವರು ನಟಿಸಿದ ‘ಸಂಜು’ ಚಿತ್ರ 2018ರಲ್ಲಿ ತೆರೆಕಂಡು ಭರ್ಜರಿ ಗೆಲುವು ಪಡೆದಿತ್ತು. ಈಗ ದೊಡ್ಡ ಗ್ಯಾಪ್​ ಬಳಿಕ ‘ಶಂಷೇರಾ’ ಮೂಲಕ ಅಭಿಮಾನಿಗಳ ಎದುರು ಬಂದ ಅವರು​ ಸೋಲು ಕಾಣುವಂತಾಗಿದೆ.

Ranbir Kapoor: ಆಲಿಯಾ ಭಟ್​ ಜತೆ ಮದುವೆ ಆದ ಬಳಿಕ ರಣಬೀರ್​ ಕಪೂರ್​ಗೆ ಮೊದಲ ಸೋಲು; ಫ್ಯಾನ್ಸ್​ಗೆ ನಿರಾಸೆ
ರಣಬೀರ್ ಕಪೂರ್, ಆಲಿಯಾ ಭಟ್​
TV9kannada Web Team

| Edited By: Madan Kumar

Jul 26, 2022 | 7:15 AM

ನಟ ರಣಬೀರ್​ ಕಪೂರ್​ (Ranbir Kapoor) ಅವರ ಅಭಿಮಾನಿಗಳು ‘ಶಂಷೇರಾ’ (Shamshera) ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಅದ್ದೂರಿ ವೆಚ್ಚದಲ್ಲಿ ಈ ಚಿತ್ರ ಮೂಡಿಬಂದಿದೆ. ಇದರಲ್ಲಿ ಸಂಜಯ್​ ದತ್, ವಾಣಿ ಕಪೂರ್​​ ಅವರಂತಹ ಸ್ಟಾರ್​ ಕಲಾವಿದರ ಜತೆ ರಣಬೀರ್​ ಕಪೂರ್​ ತೆರೆಹಂಚಿಕೊಂಡಿದ್ದಾರೆ. ಇಷ್ಟೆಲ್ಲ ಇದ್ದರೂ ಕೂಡ ಶಂಷೇರಾ’ ಸಿನಿಮಾ ಬಾಕ್ಸ್​ ಆಫೀಸ್​ (Shamshera Box Office Collection) ಗಳಿಕೆಯಲ್ಲಿ ನಿರೀಕ್ಷಿತ ಮಟ್ಟದ ಸಾಧನೆ ಮಾಡಿಲ್ಲ. ರಣಬೀರ್​ ಕಪೂರ್ ಅಭಿಮಾನಿಗಳಿಗೆ ಈ ಚಿತ್ರ ಇಷ್ಟ ಆಗಿಲ್ಲ. ವೀಕೆಂಡ್​ನಲ್ಲೂ ಸಹ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರದತ್ತ ಮುಖ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ಚಿತ್ರ ಇನ್ನಷ್ಟು ಸೊರಗುವುದು ಖಚಿತ ಎನ್ನಲಾಗುತ್ತಿದೆ.

ಏಪ್ರಿಲ್​ 14ರಂದು ಆಲಿಯಾ ಭಟ್​ ಜೊತೆ ರಣಬೀರ್​ ಕಪೂರ್​ ಮದುವೆ ನೆರವೇರಿತು. ವಿವಾಹದ ನಂತರ ಬಿಡುಗಡೆ ಆದ ಮೊದಲ ಸಿನಿಮಾ ‘ಶಂಷೇರಾ’. ಹಾಗಾಗಿ ರಣಬೀರ್​ ಕಪೂರ್​ ಅವರಿಗೆ ಈ ಚಿತ್ರದ ಮೇಲೆ ನಿರೀಕ್ಷೆ ಇತ್ತು. ಆದರೆ ಅಂದುಕೊಂಡ ರೀತಿಯಲ್ಲಿ ಕಲೆಕ್ಷನ್ ಆಗುತ್ತಿಲ್ಲ. ಯಶ್​ ರಾಜ್​ ಫಿಲ್ಮ್ಸ್​ ಮೂಲಕ ನಿರ್ಮಾಣ ಆದ ಈ ಚಿತ್ರಕ್ಕೆ ಬಹುಕೋಟಿ ರೂಪಾಯಿ ಬಂಡವಾಳ ಹೂಡಲಾಗಿದೆ. ಆದರೆ ಮೊದಲ ವಾರಾಂತ್ಯ ಕಳೆದರೂ ಹಾಕಿದ ಬಂಡವಾಳ ವಾಪಸ್​ ಬಂದಿಲ್ಲ.

ಮೊದಲ ದಿನ ‘ಶಂಷೇರಾ’ ಭರ್ಜರಿ ಓಪನಿಂಗ್​ ಪಡೆದುಕೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಫಸ್ಟ್​ ಡೇ ಆಗಿದ್ದು 10.25 ಕೋಟಿ ರೂಪಾಯಿ ಮಾತ್ರ. ಎರಡನೇ ದಿನವಾದ ಶನಿವಾರ 10.50 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು. ಭಾನುವಾರ 11 ಕೋಟಿ ರೂಪಾಯಿ ಸಂಗ್ರಹ ಆಗಿದೆ. ರಣಬೀರ್​ ಕಪೂರ್​ ಅವರಂತಹ ಸ್ಟಾರ್​ ನಟನ ಚಿತ್ರಕ್ಕೆ ಈ ಮೊತ್ತ ಸಮಾಧಾನಕರವಲ್ಲ.

ರಣಬೀರ್​ ಕಪೂರ್​ ಅವರು ನಟಿಸಿದ ‘ಸಂಜು’ ಚಿತ್ರ 2018ರಲ್ಲಿ ತೆರೆಕಂಡು ಭರ್ಜರಿ ಗೆಲುವು ಪಡೆದಿತ್ತು. ಈಗ ದೊಡ್ಡ ಗ್ಯಾಪ್​ ಬಳಿಕ ‘ಶಂಷೇರಾ’ ಮೂಲಕ ಅಭಿಮಾನಿಗಳ ಎದುರು ಬಂದ ರಣಬೀರ್​ ಕಪೂರ್​ ಸೋಲು ಕಾಣುವಂತಾಗಿದೆ. ಸದ್ಯ ಅವರ ಕೈಯಲ್ಲಿ ‘ಬ್ರಹ್ಮಾಸ್ತ್ರ’ ಸಿನಿಮಾ ಇದೆ. ಆ ಚಿತ್ರ ಮೂರು ಪಾರ್ಟ್​ನಲ್ಲಿ ಮೂಡಿಬರುತ್ತಿದೆ. ಮೊದಲ ಪಾರ್ಟ್​ ಸೆಪ್ಟೆಂಬರ್​ 9ರಂದು ರಿಲೀಸ್​ ಆಗಲಿದೆ. ಅದರಲ್ಲಿ ರಣಬೀರ್ ಕಪೂರ್​ಗೆ ಜೋಡಿಯಾಗಿ ಆಲಿಯಾ ಭಟ್​ ನಟಿಸಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada