Shamshera Twitter Review: ‘ಶಂಷೇರಾ’ ಟ್ವಿಟರ್​ ವಿಮರ್ಶೆ; ರಣಬೀರ್​ ಕಪೂರ್​ ಚಿತ್ರ ನೋಡಿ ಭೇಷ್​ ಎಂದ ಪ್ರೇಕ್ಷಕರು

Shamshera | Ranbir Kapoor: ‘ರಣಬೀರ್​ ಕಪೂರ್​ ಎಂಟ್ರಿ ಸೀನ್​ ತುಂಬ ಚೆನ್ನಾಗಿದೆ. ಪ್ರತಿ ದೃಶ್ಯದಲ್ಲೂ ನಿರೀಕ್ಷೆ ಹೆಚ್ಚುತ್ತದೆ. ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಸೂಪರ್​’ ಎಂದು ಪ್ರೇಕ್ಷಕರು ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.

Shamshera Twitter Review: ‘ಶಂಷೇರಾ’ ಟ್ವಿಟರ್​ ವಿಮರ್ಶೆ; ರಣಬೀರ್​ ಕಪೂರ್​ ಚಿತ್ರ ನೋಡಿ ಭೇಷ್​ ಎಂದ ಪ್ರೇಕ್ಷಕರು
ಶಂಷೇರಾ ಪೋಸ್ಟರ್​
Follow us
TV9 Web
| Updated By: ಮದನ್​ ಕುಮಾರ್​

Updated on:Jul 22, 2022 | 11:02 AM

ನಟ ರಣಬೀರ್​ ಕಪೂರ್​ (Ranbir Kapoor) ಅವರು ಭರ್ಜರಿ ಗೆಲುವು ಪಡೆಯುವುದು ಖಚಿತ ಆಗಿದೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ಅವರು ನಟಿಸಿರುವ ‘ಶಂಷೇರಾ’ ಸಿನಿಮಾ (Shamshera) ಇಂದು (ಜುಲೈ 22) ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮೊದಲ ದಿನ ಮೊದಲ ಶೋ ನೋಡಿದ ಅಭಿಮಾನಿಗಳು ಭೇಷ್​ ಎನ್ನುತ್ತಿದ್ದಾರೆ. ತುಂಬ ಅದ್ದೂರಿಯಾಗಿ ಈ ಚಿತ್ರ ಮೂಡಿಬಂದಿದ್ದು, ಟ್ವಿಟರ್​ ವಿಮರ್ಶೆಯಲ್ಲಿ (Shamshera Twitter Review) ಮೆಚ್ಚುಗೆ ಮಾತುಗಳನ್ನು ಹಂಚಿಕೊಳ್ಳಲಾಗುತ್ತಿದೆ. ಎರಡು ಶೇಡ್​ನಲ್ಲಿ ರಣಬೀರ್​ ಕಪೂ​ರ್​ ಅವರು ಕಾಣಿಸಿಕೊಂಡಿದ್ದಾರೆ. ‘ಶಂಷೇರಾ’ ಚಿತ್ರಕ್ಕೆ ವಾಣಿ ಕಪೂರ್​ ನಾಯಕಿ. ಕರಣ್​ ಮಲ್ಹೋತ್ರಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ರಣಬೀರ್​ ಕಪೂರ್​ ಅವರು ಈ ಹಿಂದೆ ಕಾಣಿಸಿಕೊಂಡಿದ್ದು ‘ಸಂಜು’ ಚಿತ್ರದಲ್ಲಿ. ಆ ಸಿನಿಮಾ 2018ರಲ್ಲಿ ತೆರೆಕಂಡಿತ್ತು. ಆ ಚಿತ್ರದ ಬಿಗ್​ ಸಕ್ಸಸ್​ ಬಳಿಕ ಬಹಳ ಸಮಯ ತೆಗೆದುಕೊಂಡು ಮಾಡಿದ ಚಿತ್ರವೇ ‘ಶಂಷೇರಾ’. ಅವರ ಪರಿಶ್ರಮಕ್ಕೆ ಈಗ ಸೂಕ್ತ ಪ್ರತಿಫಲ ಸಿಗುತ್ತಿದೆ. ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದ ಪ್ರೇಕ್ಷಕರು ಮೊದಲ ದಿನವೇ ಮುಗಿಬಿದ್ದು ಈ ಚಿತ್ರವನ್ನು ನೋಡುತ್ತಿದ್ದಾರೆ. ಎಲ್ಲರಿಗೂ ಸಿನಿಮಾ ಇಷ್ಟ ಆಗುತ್ತಿದೆ. ಚಿತ್ರದಲ್ಲಿ ಏನೆಲ್ಲ ಚೆನ್ನಾಗಿದೆ ಎಂಬುದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ
Image
Alia Bhatt: ಅವಳಿ ಮಕ್ಕಳಿಗೆ ಜನ್ಮ ನೀಡ್ತಾರಾ ಆಲಿಯಾ? ಒಂದು ಸುಳ್ಳು, ಎರಡು ಸತ್ಯ ಹೇಳಿ ಗುಟ್ಟು ಬಿಟ್ಟುಕೊಟ್ಟ ರಣಬೀರ್​
Image
‘ಹೆಣ್ಣು ಮಗು ಬೇಕು’: ಮನದ ಆಸೆ ತಿಳಿಸಿ, ಮಕ್ಕಳನ್ನು ನೋಡಿಕೊಳ್ಳುವುದು ಕಲಿಯುತ್ತಿರುವ ರಣಬೀರ್​ ಕಪೂರ್
Image
10ನೇ ಕ್ಲಾಸ್​ನಲ್ಲಿ ರಣಬೀರ್​ ಕಪೂರ್​ ಪಡೆದ ಅಂಕ ಎಷ್ಟು? ನಿರೀಕ್ಷಿಸಿದ್ದೇ ಬೇರೆ, ಆಗಿದ್ದೇ ಬೇರೆ
Image
ಮದುವೆ ಆದ ಖುಷಿಗೆ ಹೆಂಡತಿಯನ್ನು ಎತ್ತಿಕೊಂಡು ಓಡಾಡಿದ​ ರಣಬೀರ್​ ಕಪೂರ್​: ವಿಡಿಯೋ ವೈರಲ್​

‘ರಣಬೀರ್​ ಕಪೂರ್​ ಅವರ ಎಂಟ್ರಿ ಸೀನ್​ ತುಂಬ ಚೆನ್ನಾಗಿದೆ. ನಾಲ್ಕು ವರ್ಷಗಳ ಬಳಿಕ ಅವರನ್ನು ನೋಡುತ್ತಿರುವುದು ತುಂಬ ರಿಫ್ರೆಶಿಂಗ್​ ಎನಿಸುತ್ತಿದೆ. ಪ್ರತಿ ದೃಶ್ಯದಲ್ಲೂ ನಿರೀಕ್ಷೆ ಹೆಚ್ಚುತ್ತದೆ. ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಸೂಪರ್​’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್​ ಮಾಡಿದ್ದಾರೆ.

‘ಒಂದೇ ಮಾತಲ್ಲಿ ಹೇಳಬೇಕು ಎಂದರೆ ಶಂಷೇರಾ ಬ್ಲಾಕ್​ ಬಸ್ಟರ್​ ಆಗಲಿದೆ. ಇಡೀ ಸಿನಿಮಾದಲ್ಲಿ ಯಾವುದೇ ಬೋರಿಂಗ್​ ದೃಶ್ಯಗಳು ಇಲ್ಲ. ಇಡೀ ತಂಡಕ್ಕೆ ಶುಭವಾಗಲಿ. ಎಲ್ಲವೂ ಪರ್ಫೆಕ್ಟ್​ ಆಗಿದೆ’ ಎಂದು ವೀಕ್ಷಕರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾಗೆ ಸಿಗುತ್ತಿರುವ ಪಾಸಿಟಿವ್​ ಪ್ರತಿಕ್ರಿಯೆ ಕಂಡು ‘ಶಂಷೇರಾ’ ಚಿತ್ರತಂಡ ಖುಷಿಯಾಗಿದೆ.

‘ರಣಬೀರ್​ ಕಪೂರ್​ ಅವರ ಕಮ್​ಬ್ಯಾಕ್​ಗೆ ಇದು ಅತ್ಯುತ್ತಮ ಸಿನಿಮಾ. ಅವರಿಂದ ಮಾಡಲು ಆಗದೇ ಇರುವುದು ಏನೂ ಇಲ್ಲ’ ಎಂದು ಅಭಿಮಾನಿಗಳು ಅನಿಸಿಕೆ ತಿಳಿಸಿದ್ದಾರೆ. ‘ಈ ವರ್ಷ ಬಾಲಿವುಡ್​ನಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ಇದು ದಿ ಬೆಸ್ಟ್​. ದ್ವಿಪಾತ್ರದಲ್ಲಿ ರಣಬೀರ್​ ಕಪೂರ್​ ನಟನೆ ಸೂಪರ್​. ಸಾಹಸ ದೃಶ್ಯಗಳು ಅದ್ಭುತವಾಗಿವೆ. ಕುಟುಂಬದ ಸದಸ್ಯರ ಜೊತೆ ಈ ಚಿತ್ರವನ್ನು ನೋಡಿ ಎಂದು ನಾನು ಶಿಫಾರಸ್ಸು ಮಡುತ್ತೇನೆ’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್​ ಮಾಡಿದ್ದಾರೆ.

Published On - 11:02 am, Fri, 22 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ