Alia Bhatt: ಅವಳಿ ಮಕ್ಕಳಿಗೆ ಜನ್ಮ ನೀಡ್ತಾರಾ ಆಲಿಯಾ? ಒಂದು ಸುಳ್ಳು, ಎರಡು ಸತ್ಯ ಹೇಳಿ ಗುಟ್ಟು ಬಿಟ್ಟುಕೊಟ್ಟ ರಣಬೀರ್​

Alia Bhatt | Ranbir Kapoor: ‘ಅವಳಿ ಮಕ್ಕಳ ತಂದೆ ಆಗುತ್ತಿದ್ದೇನೆ. ದೊಡ್ಡ ಪೌರಾಣಿಕ ಸಿನಿಮಾದಲ್ಲಿ ನಟಿಸಿದ್ದೇನೆ. ಚಿತ್ರರಂಗದಿಂದ ದೀರ್ಘ ಕಾಲ ಬ್ರೇಕ್​ ತೆಗೆದುಕೊಳ್ಳುತ್ತೇನೆ’ ಎಂದು 3 ವಾಕ್ಯಗಳನ್ನು ರಣಬೀರ್​ ಕಪೂರ್ ಹೇಳಿದ್ದಾರೆ. ಇದರಲ್ಲಿ ಒಂದು ಸುಳ್ಳು, ಎರಡು ಸತ್ಯ!

Alia Bhatt: ಅವಳಿ ಮಕ್ಕಳಿಗೆ ಜನ್ಮ ನೀಡ್ತಾರಾ ಆಲಿಯಾ? ಒಂದು ಸುಳ್ಳು, ಎರಡು ಸತ್ಯ ಹೇಳಿ ಗುಟ್ಟು ಬಿಟ್ಟುಕೊಟ್ಟ ರಣಬೀರ್​
ಆಲಿಯಾ ಭಟ್, ರಣಬೀರ್ ಕಪೂರ್
Follow us
TV9 Web
| Updated By: ಮದನ್​ ಕುಮಾರ್​

Updated on: Jul 17, 2022 | 3:14 PM

ನಟಿ ಆಲಿಯಾ ಭಟ್​ (Alia Bhatt) ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತಾವು ತಾಯಿ ಆಗುತ್ತಿರುವ ವಿಚಾರವನ್ನು ಅವರು ಇತ್ತೀಚೆಗೆ ಜಗಜ್ಜಾಹೀರುಗೊಳಿಸಿದ್ದರು. ಪ್ರಿಯಕರ ರಣಬೀರ್​ ಕಪೂರ್​ (Ranbir Kapoor) ಜೊತೆ ಏಪ್ರಿಲ್​ 14ರಂದು ಮದುವೆ ಆಗಿದ್ದ ಅವರು ಕೇವಲ ಎರಡೂವರೆ ತಿಂಗಳಿಗೆ ಪ್ರೆಗ್ನೆನ್ಸಿ ನ್ಯೂಸ್​ ನೀಡಿದ್ದು ಎಲ್ಲರಿಗೂ ಅಚ್ಚರಿ ಉಂಟು ಮಾಡಿತ್ತು. ಈಗ ಈ ದಂಪತಿಗೆ ಜನಿಸುವ ಮಗು ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಆಲಿಯಾ ಭಟ್​ ಅವರು ಅವಳಿ (Twins) ಮಕ್ಕಳಿಗೆ ಜನ್ಮ ನೀಡುತ್ತಾರೆ ಎಂದು ಕೂಡ ಅಭಿಮಾನಿಗಳು ಊಹಿಸುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ರಣಬೀರ್​ ಕಪೂರ್​ ಹೇಳಿರುವ ಒಂದು ಸುಳ್ಳು ಮತ್ತು ಎರಡು ಸತ್ಯ!

ರಣಬೀರ್​ ಕಪೂರ್ ಅವರು ‘ಶಂಷೇರಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜುಲೈ 22ರಂದು ಬಿಡುಗಡೆ ಆಗಲಿದೆ. ಅದರ ಸಲುವಾಗಿ ಅನೇಕ ಕಡೆಗಳಲ್ಲಿ ಅವರು ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರಿಗೆ ಖಾಸಗಿ ಜೀವನದ ಬಗ್ಗೆಯೂ ಪ್ರಶ್ನೆಗಳು ಎದುರಾಗುತ್ತಿವೆ. ಫಿಲ್ಮ್​ ಕಾಂಪ್ಯಾನಿಯನ್​ಗೆ ನೀಡಿದ ಸಂದರ್ಶನದಲ್ಲಿ ಅವರು ಅವಳಿ ಮಕ್ಕಳ ಬಗ್ಗೆ ಸುಳಿವು ನೀಡಿದ್ದಾರೆ. ಒಂದು ಸುಳ್ಳು ಮತ್ತು ಎರಡು ಸತ್ಯವನ್ನು ಹೇಳಬೇಕು ಎಂದು ರಣಬೀರ್​ ಕಪೂರ್​ ಅವರಿಗೆ ಟಾಸ್ಕ್​ ನೀಡಲಾಗಿತ್ತು. ಅದಕ್ಕೆ ಅವರು ನೀಡಿದ ಉತ್ತರ ಅಚ್ಚರಿ ಮೂಡಿಸಿದೆ.

‘ನಾನು ಅವಳಿ ಮಕ್ಕಳ ತಂದೆ ಆಗುತ್ತಿದ್ದೇನೆ. ಒಂದು ದೊಡ್ಡ ಪೌರಾಣಿಕ ಸಿನಿಮಾದಲ್ಲಿ ನಟಿಸಿದ್ದೇನೆ. ಚಿತ್ರರಂಗದಿಂದ ದೀರ್ಘ ಕಾಲ ಬ್ರೇಕ್​ ಪಡೆದುಕೊಳ್ಳುತ್ತೇನೆ’ ಎಂದು ಮೂರು ವಾಕ್ಯಗಳನ್ನು ರಣಬೀರ್​ ಕಪೂರ್ ಹೇಳಿದ್ದಾರೆ. ಈ ಪೈಕಿ ಎರಡು ಸತ್ಯ ಯಾವುದು? ಒಂದು ಸುಳ್ಳು ಯಾವುದು ಎಂದು ಫ್ಯಾನ್ಸ್​ ಊಹಿಸುತ್ತಿದ್ದಾರೆ. ಪೌರಾಣಿಕ ಶೈಲಿಯ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಅವರು ನಟಿಸಿರುವುದು ನಿಜ. ಇನ್ನುಳಿದ ಎರಡು ಹೇಳಿಕೆಯಲ್ಲಿ ಒಂದು ಸುಳ್ಳು, ಇನ್ನೊಂದು ನಿಜ. ಹಾಗಾದರೆ ಸುಳ್ಳು ಯಾವುದು?

ಇದನ್ನೂ ಓದಿ
Image
Alia Bhatt: ‘ರಣವೀರ್​ ಸಿಂಗ್​ ಜತೆ ಏನು ಬೇಕಾದ್ರೂ ಮಾತಾಡ್ತೀನಿ’; ಮದುವೆ ಬಳಿಕ ಆಲಿಯಾ ಭಟ್​ ಅಚ್ಚರಿಯ ಹೇಳಿಕೆ
Image
Alia Bhatt: ಪ್ರೆಗ್ನೆಂಟ್​ ಆಗಿದ್ದು ಆಲಿಯಾ ಭಟ್​, ಆದರೆ ಸುದ್ದಿ ಕೇಳಿ ಕಣ್ಣೀರು ಹಾಕಿದ್ದು ಕರಣ್​ ಜೋಹರ್​
Image
Alia Bhatt Pregnant: ಆಲಿಯಾ ಭಟ್​ ಪ್ರೆಗ್ನೆಂಟ್​; ರಣಬೀರ್​ ಕಪೂರ್​ ಜತೆ ಮದುವೆ ಆಗಿ ಎರಡೂವರೆ ತಿಂಗಳಲ್ಲಿ ಗುಡ್​ ನ್ಯೂಸ್​
Image
ವಿಮಾನ ನಿಲ್ದಾಣದಲ್ಲಿ ಗಾಬರಿಯಿಂದ ಓಡಿ ಹೋದ ನಟಿ ಆಲಿಯಾ ಭಟ್​; ವೈರಲ್​ ವಿಡಿಯೋದ ಸತ್ಯಾಂಶ ಏನು?

ರಣಬೀರ್​ ಕಪೂರ್​ ಅವರು ಚಿತ್ರರಂಗದಿಂದ ದೀರ್ಘಕಾಲ ಬ್ರೇಕ್​ ತೆಗೆದುಕೊಳ್ಳುವುದು ಅನುಮಾನ. ಹಾಗಾಗಿ ಆ ಹೇಳಿಕೆಯೇ ಸುಳ್ಳು ಎಂಬುದು ಅಭಿಮಾನಿಗಳ ಊಹೆ. ಅವಳಿ ಮಕ್ಕಳಿಗೆ ತಂದೆ ಆಗುತ್ತಿರುವುದೇ ಸತ್ಯ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಆಲಿಯಾ ಭಟ್​ ಅವರು ಜನ್ಮ ನೀಡಿದ ನಂತರವೇ ಈ ಒಗಟಿಗೆ ಉತ್ತರ ಸಿಗಲಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ