ಕಿಂಗ್ ಖಾನ್ಗೆ ವಿವೇಕ್ ಅಗ್ನಿಹೋತ್ರಿ ಟಾಂಗ್; ಶಾರುಖ್ರನ್ನು ಹೊಗಳಿದ್ದ ಹಳೆಯ ಟ್ವೀಟ್ ವೈರಲ್ ಮಾಡಿದ ಫ್ಯಾನ್ಸ್
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಗೆದ್ದ ಬಳಿಕ ವಿವೇಕ್ ಅವರು ಸಾಕಷ್ಟು ವಿಚಾರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದ್ದಿದೆ. ಈಗ ಬಾಲಿವುಡ್ ಖಾನ್ಗಳ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.

ದಕ್ಷಿಣ ಭಾರತಕ್ಕೆ ಹೋಲಿಕೆ ಮಾಡಿದರೆ ಬಾಲಿವುಡ್ (Bollywood) ಸಿನಿಮಾಗಳು ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡುತ್ತಿಲ್ಲ ಎಂಬ ಚರ್ಚೆ ಇದೆ. ಬಾಲಿವುಡ್ ದಿನಕಳೆದಂತೆ ಸೊರಗುತ್ತಿದೆ. ಆಮಿರ್ ಖಾನ್ (Aamir Khan), ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಸಿನಿಮಾಗಳು ಮೊದಲಿನ ಖದರ್ ಉಳಿಸಿಕೊಂಡಿಲ್ಲ. ಈ ಮೂವರಿಂದಲೇ ಬಾಲಿವುಡ್ ಮುಳುಗುತ್ತಿದೆ ಎನ್ನುವ ಆರೋಪವನ್ನು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮಾಡಿದ್ದಾರೆ. ಈ ಹೇಳಿಕೆ ಸಾಕಷ್ಟು ಚರ್ಚೆ ಆಗುತ್ತಿದ್ದು, ಪರ-ವಿರೋಧ ಚರ್ಚೆ ನಡೆಯುತ್ತಿದೆ.
ಕಾಶ್ಮೀರಿ ಪಂಡಿತರ ವಲಸೆ ಹಾಗೂ ಹತ್ಯೆ ವಿಚಾರ ಇಟ್ಟುಕೊಂಡು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶನ ಮಾಡಿದ್ದರು ವಿವೇಕ್ ಆಗ್ನಿಹೋತ್ರಿ. ಈ ಚಿತ್ರದಿಂದ ಅವರಿಗೆ ಅಪಾರ ಜನಪ್ರಿಯತೆ ದೊರೆತಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ಗಳಿಕೆ ಮಾಡಿ ಬೀಗಿದೆ. ಈ ಚಿತ್ರ ಗೆದ್ದ ಬಳಿಕ ವಿವೇಕ್ ಅವರು ಸಾಕಷ್ಟು ವಿಚಾರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದ್ದಿದೆ. ಈಗ ಬಾಲಿವುಡ್ ಖಾನ್ಗಳ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.
ಮಾಧ್ಯಮವೊಂದು ಶಾರುಖ್ ಖಾನ್ ಬಗ್ಗೆ ಸುದ್ದಿ ಪ್ರಕಟ ಮಾಡಿತ್ತು. ‘ಬಾಲಿವುಡ್ನಲ್ಲಿ ಶಾರುಖ್ ಖಾನ್ ಈಗಲೂ ಏಕೆ ಕಿಂಗ್?’ ಎಂಬುದನ್ನು ಈ ಸುದ್ದಿಯಲ್ಲಿ ವಿವರಿಸಲಾಗಿತ್ತು. ಈ ಬಗ್ಗೆ ಮಾಡಲಾದ ಟ್ವೀಟ್ಅನ್ನು ವಿವೇಕ್ ರೀಟ್ವೀಟ್ ಮಾಡಿದ್ದಾರೆ. ‘ಎಲ್ಲಿಯವರೆಗೆ ಬಾಲಿವುಡ್ನಲ್ಲಿ ಕಿಂಗ್ಗಳು, ಬಾದ್ಶಾಗಳು, ಸುಲ್ತಾನ್ಗಳು ಇರುತ್ತಾರೋ ಅಲ್ಲಿಯವರೆಗೆ ಬಾಲಿವುಡ್ ಮುಳುಗುತ್ತಲೇ ಇರುತ್ತದೆ. ಇದನ್ನು ಜನರ ಇಂಡಸ್ಟ್ರಿಯನ್ನಾಗಿ ಮಾಡಿ. ಜನರ ಕಥೆಗಳನ್ನು ಸಿನಿಮಾ ಮಾಡಿ. ಆಗ ಇದು ಗ್ಲೋಬಲ್ ಇಂಡಸ್ಟ್ರಿಯಾಗಿ ಬದಲಾಗಲಿದೆ’ ಎಂದು ಬರೆದುಕೊಂಡಿರುವ ವಿವೇಕ್ ಅಗ್ನಿಹೋತ್ರಿ FACT (ಸತ್ಯ) ಎಂದು ಹ್ಯಾಶ್ಟ್ಯಾಗ್ ಹಾಕಿದ್ದಾರೆ.
As long as Bollywood has Kings, Badshahs, Sultans, it will keep sinking. Make it people’s industry with people’s stories, it will lead the global film industry. #FACT https://t.co/msqfrb7gS3
— Vivek Ranjan Agnihotri (@vivekagnihotri) July 14, 2022
— Prasanna_SRKians (@Mylifewaterfall) July 15, 2022
ಇದನ್ನೂ ಓದಿ: ಶಾರುಖ್ ಖಾನ್ ‘ಜವಾನ್’ ಚಿತ್ರದಲ್ಲಿ ದಳಪತಿ ವಿಜಯ್ಗೆ ಅತಿಥಿ ಪಾತ್ರ; ಸಂಭಾವನೆ ಎಷ್ಟು?
ಇದು ಶಾರುಖ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ. ಈ ಮೊದಲು ಶಾರುಖ್ ಖಾನ್ ಅವರನ್ನು ಹೊಗಳಿ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದರು. ಆ ಟ್ವೀಟ್ಗಳ ಸ್ಕ್ರೀನ್ಶಾಟ್ಗಳನ್ನು ಶಾರುಖ್ ಫ್ಯಾನ್ಸ್ ಪೋಸ್ಟ್ ಮಾಡುತ್ತಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ ಅನುಪ್ ಖೇರ್ ಅವರು ಶಾರುಖ್ ಬಗ್ಗೆ ಪಾಸಿಟಿವ್ ಆಗಿ ಮಾಡಿದ ಟ್ವೀಟ್ ಕೂಡ ವೈರಲ್ ಮಾಡಲಾಗುತ್ತಿದೆ.