AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್ ‘ಜವಾನ್​’ ಚಿತ್ರದಲ್ಲಿ ದಳಪತಿ ವಿಜಯ್​ಗೆ ಅತಿಥಿ ಪಾತ್ರ; ಸಂಭಾವನೆ ಎಷ್ಟು?

‘ಜವಾನ್​’ ಸಿನಿಮಾ ಸಾಕಷ್ಟು ವಿಚಾರಗಳಿಗೆ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಲು ದಳಪತಿ ವಿಜಯ್ ರೆಡಿ ಆಗಿದ್ದಾರೆ.

ಶಾರುಖ್ ಖಾನ್ ‘ಜವಾನ್​’ ಚಿತ್ರದಲ್ಲಿ ದಳಪತಿ ವಿಜಯ್​ಗೆ ಅತಿಥಿ ಪಾತ್ರ; ಸಂಭಾವನೆ ಎಷ್ಟು?
ಶಾರುಖ್​-ವಿಜಯ್
TV9 Web
| Edited By: |

Updated on: Jul 15, 2022 | 5:29 PM

Share

ಶಾರುಖ್ ಖಾನ್ (Shah Rukh Khan) ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ನಾಲ್ಕು ವರ್ಷಗಳ ಕಾಲ ಬಳಿಕ ನಟನೆಗೆ ಮರಳುತ್ತಿರುವ ಅವರು ಒಟ್ಟಾಗಿ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಅದರಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಅಟ್ಲೀ ನಿರ್ದೇಶನದ ‘ಜವಾನ್​’ ಸಿನಿಮಾ (Jawan Movie). ಈ ಚಿತ್ರದಲ್ಲಿ ಶಾರುಖ್ ಖಾನ್ ಸೋಲ್ಜರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇತ್ತೀಚೆಗೆ ರಿಲೀಸ್ ಆದ ಗ್ಲಿಂಪ್ಸ್ ವಿಡಿಯೋ ಮೂಲಕ ಗೊತ್ತಾಗಿದೆ. ಈ ಸಿನಿಮಾದಲ್ಲಿ ‘ದಳಪತಿ’ ವಿಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

‘ಜವಾನ್​’ ಸಿನಿಮಾ ಸಾಕಷ್ಟು ವಿಚಾರಗಳಿಗೆ ಗಮನ ಸೆಳೆಯುತ್ತಿದೆ. ಅಟ್ಲೀ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಈಗಾಗಲೇ ವಿಜಯ್ ಸೇತುಪತಿ ಅವರು ನಟಿಸೋದು ಪಕ್ಕಾ ಆಗಿದೆ. ಈಗ ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಲು ದಳಪತಿ ವಿಜಯ್ ರೆಡಿ ಆಗಿದ್ದಾರೆ. ಸೆಪ್ಟೆಂಬರ್ ಮಧ್ಯದ ವೇಳೆಗೆ ಚೆನ್ನೈನಲ್ಲಿ ಈ ಚಿತ್ರದ ಶೂಟಿಂಗ್ ನಡೆಯಲಿದೆ. ಒಂದು ಅಥವಾ ಎರಡು ದಿನಗಳ ಕಾಲ ಶೂಟಿಂಗ್ ಇರಲಿದೆ ಎಂದು ವರದಿ ಆಗಿದೆ.

ಕೆಲ ಹೀರೋಗಳು ಅತಿಥಿ ಪಾತ್ರ ಮಾಡಿದರೂ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಅಚ್ಚರಿ ಎಂದರೆ ದಳಪತಿ ವಿಜಯ್ ಅವರು ಈ ಚಿತ್ರಕ್ಕಾಗಿ ಒಂದು ರೂಪಾಯಿ ಕೂಡ ಪಡೆಯುತ್ತಿಲ್ಲ. ಇದಕ್ಕೆ ಕಾರಣ ಅಟ್ಲೀ ಹಾಗೂ ಶಾರುಖ್ ಖಾನ್​. ವಿಜಯ್​​ಗೆ ಶಾರುಖ್ ಖಾನ್ ಹಾಗೂ ಅಟ್ಲಿ ಜತೆ ಒಳ್ಳೆಯ ಬಾಂಧವ್ಯ ಇದೆ. ಅಟ್ಲೀ ಹಾಗೂ ವಿಜಯ್ ಮೂರು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಹೀಗಾಗಿ, ಸಂಭಾವನೆ ಪಡೆಯುವುದಿಲ್ಲ ಎಂಬ ಮಾತನ್ನು ವಿಜಯ್ ಹೇಳಿದ್ದಾರೆ. ಅವರು ಅತಿಥಿ ಪಾತ್ರ ಮಾಡುತ್ತಿರುವ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಆಗಲಿದೆ.

ಇದನ್ನೂ ಓದಿ: ಹನಿಮೂನ್​ ಮುಗಿಸಿ ಬಂದ ನಯನತಾರಾ; ಶಾರುಖ್​ ಖಾನ್​ ಜೊತೆ ತಕ್ಷಣ ಶೂಟಿಂಗ್​ ಶುರು

‘ಜವಾನ್​’ ಸಿನಿಮಾದಲ್ಲಿ ಸಖತ್ ಮಾಸ್ ಆ್ಯಕ್ಷನ್ ಇರಲಿದೆ ಎನ್ನಲಾಗುತ್ತಿದೆ. ಈ ಚಿತ್ರದ ಗ್ಲಿಂಪ್ಸ್ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ಈ ಚಿತ್ರ ಮುಂದಿನ ವರ್ಷ ಜೂನ್ 2ಕ್ಕೆ ತೆರೆಗೆ ಬರಲಿದೆ. ‘ರೆಡ್ ಚಿಲ್ಲೀಸ್ ಎಂಟರ್​ಟೇನ್​ಮೆಂಟ್’ ಮೂಲಕ ಗೌರವ್ ವರ್ಮಾ ಹಾಗೂ ಶಾರುಖ್ ಖಾನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಯನತಾರಾ ಅವರು ಈ ಚಿತ್ರದಲ್ಲಿ ನಾಯಕಿ ಆಗಿ ನಟಿಸುತ್ತಿದ್ದಾರೆ. ಇನ್ನು, ದಳಪತಿ ವಿಜಯ್ ಅವರು ‘ವಾರಿಸು’ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ನಾಯಕಿ.

Follow Us
TV9 Web
TV9 Web

TV9 Kannada

Read More
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ