ಶಾರುಖ್ ಖಾನ್​ ಮನೆಯ ಹೊಸ ನೇಮ್​ಪ್ಲೇಟ್ ಬೆಲೆ ಎಷ್ಟು? ಈ ದುಡ್ಡಲ್ಲಿ ಐಷಾರಾಮಿ ಕಾರನ್ನೇ ಖರೀದಿಸಬಹುದು

ಶಾರುಖ್ ಖಾನ್​ ಮನೆಯ ಹೊಸ ನೇಮ್​ಪ್ಲೇಟ್ ಬೆಲೆ ಎಷ್ಟು? ಈ ದುಡ್ಡಲ್ಲಿ ಐಷಾರಾಮಿ ಕಾರನ್ನೇ ಖರೀದಿಸಬಹುದು
ಶಾರುಖ್​-ಮನ್ನತ್

ಗೌರಿ ಖಾನ್​ ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್. ಅವರಿಗೆ ಮನೆಯನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಹೆಚ್ಚು ಕಾಳಜಿ ಇದೆ. ‘ಮನ್ನತ್​’ಗೆ ಹೊಸ ನೇಮ್​ಪ್ಲೇಟ್ ಹಾಕಲು ಅವರೇ ಆಸಕ್ತಿ ತೋರಿದ್ದರು.

TV9kannada Web Team

| Edited By: Rajesh Duggumane

Apr 26, 2022 | 3:51 PM

ಸೆಲೆಬ್ರಿಟಿಗಳು ಮಾಡುವ ಸಣ್ಣ ಕೆಲಸಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತವೆ. ಅವರು ಕಾರು ಖರೀದಿಸಿದರೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಯಾಗುತ್ತದೆ. ಶಾರುಖ್ ಖಾನ್ ಅವರು (Shah Rukh Khan) ಇದೇ ರೀತಿಯ ವಿಚಾರದಲ್ಲಿ ಸುದ್ದಿಯಾಗಿದ್ದರು. ಅವರ ಮನೆ ಮನ್ನತ್​​ನ (Mannat) ನೇಮ್​ಪ್ಲೇಟ್ ಬದಲಾಯಿಸಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಟ್ವಿಟರ್​ನಲ್ಲಿ ಮನ್ನತ್ ಹೆಸರು ಟ್ರೆಂಡ್ ಆಗಿತ್ತು. ಈಗ ಈ ಬಗ್ಗೆ ಹೊಸದೊಂದು ಅಪ್​ಡೇಟ್ ಬಂದಿದೆ. ಈ ನೇಮ್​ಪ್ಲೇಟ್ ಡಿಸೈನ್ ಮಾಡಿದ್ದು ಶಾರುಖ್ ಪತ್ನಿ ಗೌರಿ ಖಾನ್​. ಇದಕ್ಕೆ ತಗುಲಿದ ಬೆಲೆ ಕೇಳಿ ಅನೇಕರು ಕಣ್ಣರಳಿಸಿದ್ದಾರೆ.

ಗೌರಿ ಖಾನ್​ ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್. ಅವರಿಗೆ ಮನೆಯನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಹೆಚ್ಚು ಕಾಳಜಿ ಇದೆ. ‘ಮನ್ನತ್​’ಗೆ ಹೊಸ ನೇಮ್​ಪ್ಲೇಟ್ ಹಾಕಲು ಅವರೇ ಆಸಕ್ತಿ ತೋರಿದ್ದರು. ಅಂತೆಯೇ ಅವರೇ ಮುಂದಾಳತ್ವ ವಹಿಸಿ ಬೋರ್ಡ್ ಸಿದ್ಧಪಡಿಸಿದ್ದಾರೆ. ಈ ಬೋರ್ಡ್​ಗೆ ಸುಮಾರು 20-25 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ವರದಿ ಆಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಶಾರುಖ್​ ಖಾನ್ ಭಾರತದ ಶ್ರೀಮಂತ ನಟರ ಪೈಕಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅವರು ಐಪಿಎಲ್ ತಂಡವನ್ನು ಹೊಂದಿದ್ದಾರೆ. ಪ್ರೊಡಕ್ಷನ್ ಹೌಸ್ ನಡೆಸುತ್ತಿದ್ದಾರೆ. ಹಲವು ಬ್ರ್ಯಾಂಡ್​ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಅಷ್ಟೇ ಅಲ್ಲ, ಹಲವು ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದರಿಂದ ವರ್ಷಕ್ಕೆ ಅವರಿಗೆ ಅದೆಷ್ಟೋ ಕೋಟಿ ಹರಿದು ಬರುತ್ತದೆ. ಹೀಗಾಗಿ, ಈ 25 ಲಕ್ಷ ರೂಪಾಯಿ ಅವರಿಗೆ ದೊಡ್ಡ ವಿಚಾರ ಅಲ್ಲ ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದಾರೆ. ಈ ಮೊತ್ತದಲ್ಲಿ ಒಂದು ಐಷಾರಾಮಿ ಕಾರನ್ನೇ ಖರೀದಿಸಬಹುದು ಎಂಬ ಮಾತನ್ನು ಅಭಿಮಾನಿಗಳು ಹೇಳಿದ್ದಾರೆ.

ಇತ್ತೀಚೆಗೆ ಶಾರುಖ್ ಹೊಸ ಸಿನಿಮಾ ಘೋಷಣೆ ಆಗಿತ್ತು. ರಾಜ್​ಕುಮಾರ್ ಹಿರಾನಿ ಜತೆ ಶಾರುಖ್ ಖಾನ್ ಇದೇ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಸಂಜಯ್ ದತ್, ಆಮಿರ್ ಖಾನ್ ಜತೆಗೆ ಈ ಮೊದಲು ಹಿರಾನಿ ಕೆಲಸ ಮಾಡಿದ್ದಾರೆ. ‘ಡಂಕಿ’ ಸಿನಿಮಾ 2023ರ ಡಿಸೆಂಬರ್ 22ರಂದು ತೆರೆಗೆ ಬರುತ್ತಿದೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋ, ಶಾರುಖ್ ಅವರ ರೆಡ್​ ಚಿಲ್ಲೀ ಸ್ಟುಡಿಯೋ ಹಾಗೂ ರಾಜ್​ಕುಮಾರ್ ಹಿರಾನಿ ಫಿಲ್ಮ್ಸ್​ ಪ್ರೆಸೆಂಟ್ ಮಾಡುತ್ತಿದೆ.

ಇದನ್ನೂ ಓದಿ:  ವೆಬ್​ ಸರಣಿಗೆ ಆ್ಯಕ್ಷನ್​ಕಟ್​ ಹೇಳಲು ರೆಡಿ ಆದ ಆರ್ಯನ್ ಖಾನ್​; ಹಣ ಹೂಡಲು ಶಾರುಖ್​ ರೆಡಿ

ಸೌದಿ ಮಿನಿಸ್ಟರ್​ ಜೊತೆ ಶಾರುಖ್​, ಸಲ್ಮಾನ್​​, ಅಕ್ಷಯ್​ ಕುಮಾರ್​ ಪೋಸ್; ಏನಿದು ಸಮಾಚಾರ?

Follow us on

Related Stories

Most Read Stories

Click on your DTH Provider to Add TV9 Kannada