Shah Rukh Khan: ಶಾರುಖ್ ನಿವಾಸದ ನಾಮಫಲಕ ಬದಲು; ಟ್ವಿಟರ್​ನಲ್ಲಿ ‘ಮನ್ನತ್’ ಟ್ರೆಂಡಿಂಗ್- ಫ್ಯಾನ್ಸ್ ರಿಯಾಕ್ಷನ್ ಏನಿತ್ತು?

Mannat: ಶಾರುಖ್ ನಿವಾಸಕ್ಕೆ ಹೊಸ ನೇಮ್ ಬೋರ್ಡ್ ಬಂದಿದೆ. ಆಧುನಿಕ ವಿನ್ಯಾಸದ ಈ ಬೋರ್ಡ್ ಫ್ಯಾನ್ಸ್ ಮನಗೆದ್ದಿದೆ. ಇದೇ ಕಾರಣಕ್ಕೆ ಇಂದು ಕೆಲ ಸಮಯದ ಕಾಲ ‘ಮನ್ನತ್’ ಟ್ವಿಟರ್​ನ ಟ್ರೆಂಡಿಂಗ್ ಪಟ್ಟಿಯಲ್ಲೂ ಕಾಣಿಸಿಕೊಂಡಿತ್ತು.

Shah Rukh Khan: ಶಾರುಖ್ ನಿವಾಸದ ನಾಮಫಲಕ ಬದಲು; ಟ್ವಿಟರ್​ನಲ್ಲಿ 'ಮನ್ನತ್' ಟ್ರೆಂಡಿಂಗ್- ಫ್ಯಾನ್ಸ್ ರಿಯಾಕ್ಷನ್ ಏನಿತ್ತು?
ಶಾರುಖ್ ಖಾನ್ ಹಾಗೂ ‘ಮನ್ನತ್’ ನಿವಾಸದ ಹೊಸ ನಾಮಫಲಕ
Follow us
TV9 Web
| Updated By: shivaprasad.hs

Updated on: Apr 23, 2022 | 7:57 PM

ಬಾಲಿವುಡ್​ನ ಬಾದ್​​ಷಾ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ಶಾರುಖ್​ ಖಾನ್​ಗೆ (Shah Rukh Khan) ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗವಿದೆ. ಆಕ್ಷನ್, ರೊಮ್ಯಾಂಟಿಕ್ ಹೀಗೆ.. ಎಲ್ಲಾ ಪಾತ್ರಗಳಲ್ಲೂ ಮಿಂಚಿರುವ ಶಾರುಖ್​ಗೆ ಭಾರತದಲ್ಲಿ ಮಕ್ಕಳು, ಯುವಕರಿಂದ ಹಿಡಿದು ವೃದ್ಧರ ತನಕವೂ ಫ್ಯಾನ್ಸ್​ಗಳಿದ್ದಾರೆ. ಅವರಿಗೆಲ್ಲಾ ಶಾರುಖ್ ನಿವಾಸ ‘ಮನ್ನತ್’ ಮೇಲೆ ವಿಶೇಷ ಆದರ. ಇದಕ್ಕೆ ಹಲವು ಕಾರಣಗಳು. ನೆಚ್ಚಿನ ಸ್ಟಾರ್ ನಟ ಅಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಿರುತ್ತಾರೆ ಎಂಬುದು ಒಂದು ಕಾರಣ. ಇದಲ್ಲದೇ ಮತ್ತೊಂದು ವಿಶೇಷ ಕಾರಣ ಇದೆ. ಶಾರುಖ್ ಜನ್ಮದಿನದಂದು ದೇಶದ ಹಲವೆಡೆಯಿಂದ ಅಭಿಮಾನಿಗಳು ನಟನ ಮನೆಯ ಮುಂಭಾಗ ಆಗಮಿಸುತ್ತಾರೆ. ಅಂದು ಶಾರುಖ್ ತಮ್ಮ ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ಕೈಬೀಸುತ್ತಾರೆ. ಇದು ಬಹಳಷ್ಟು ವರ್ಷಗಳಿಂದ ನಡೆದು ಬಂದಿದೆ. ನೆರೆದಿರುವ ಅಸಂಖ್ಯ ಅಭಿಮಾನಿಗಳಿಗೆ ಶಾರುಖ್ ಕೈಬೀಸುತ್ತಿರುವ ದೃಶ್ಯಗಳನ್ನು ನೀವೂ ನೋಡಿರುತ್ತೀರಿ.

ಹೀಗಿರುವ ‘ಮನ್ನತ್’ನ ಒಂದು ವಿಶೇಷವೆಂದರೆ ಆಗಾಗ ಅದರ ನಾಮಫಲಕ ಬದಲಾಗುವುದು! ಹೌದು. ‘ಮನ್ನತ್’ ಬೋರ್ಡ್​ಅನ್ನು ಹೊಸ ವಿನ್ಯಾಸದೊಂದಿಗೆ ಬದಲಾಯಿಸಲಾಗುತ್ತದೆ. ಶಾರುಖ್ ಅಭಿಮಾನಿಗಳು ಮುಂಬೈಗೆ ತೆರಳಿದಾಗ, ‘ಮನ್ನತ್’ ಮುಂಭಾಗಕ್ಕೆ ತೆರಳಿ, ಅಲ್ಲಿನ ನಾಮಫಲಕದೊಂದಿಗೆ ಫೋಟೋ ತೆಗೆಸಿಕೊಂಡು ಬರುವುದು ವಾಡಿಕೆ.

ಹೀಗಾಗಿಯೇ ಅಲ್ಲಿನ ನಾಮಫಲಕದೊಂದಿಗೆ ಅಭಿಮಾನಿಗಳು ವಿಶೇಷವಾಗಿ ಕನೆಕ್ಟ್ ಆಗಿದ್ದಾರೆ. ಹೀಗಾಗಿ ಪ್ರತಿ ಬಾರಿ ನಾಮಫಲಕ ಬದಲಾದಾಗಲೂ ಅದು ಸಖತ್ ಸುದ್ದಿಯಾಗುತ್ತದೆ. ಇದೀಗ ಶಾರುಖ್ ನಿವಾಸಕ್ಕೆ ಹೊಸ ನೇಮ್ ಬೋರ್ಡ್ ಬಂದಿದೆ. ಆಧುನಿಕ ವಿನ್ಯಾಸದ ಈ ಬೋರ್ಡ್ ಫ್ಯಾನ್ಸ್ ಮನಗೆದ್ದಿದೆ. ಇದೇ ಕಾರಣಕ್ಕೆ ಇಂದು ಕೆಲ ಸಮಯದ ಕಾಲ ‘ಮನ್ನತ್’ ಟ್ವಿಟರ್​ನ ಟ್ರೆಂಡಿಂಗ್ ಪಟ್ಟಿಯಲ್ಲೂ ಕಾಣಿಸಿಕೊಂಡಿತ್ತು.

‘ಮನ್ನತ್’ ನಾಮಫಲಕ ಬದಲಾವಣೆಗೆ ಅಭಿಮಾನಿಗಳಿಂದ ವಿವಿಧ ರೀತಿಯ ಪ್ರತಿಕ್ರಿಯೆ:

ಟ್ವಿಟರ್​ನಲ್ಲಿ ಶಾರುಖ್ ಅಭಿಮಾನಿಗಳು ‘ಮನ್ನತ್’ ಇತ್ತೀಚಿನ ವರ್ಷಗಳಲ್ಲಿ ಹೇಗೆ ಬದಲಾಗುತ್ತಾ ಬಂದಿದೆ ಎಂಬುದನ್ನು ಫೋಟೋ ಸಹಿತ ವಿವರಿಸಿದ್ದಾರೆ. ಇದರೊಂದಿಗೆ ತಾವು ಮನ್ನತ್​ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಯಾವ ನಾಮಫಲಕವಿತ್ತು ಎಂಬುದನ್ನೂ ಹಂಚಿಕೊಂಡಿದ್ದಾರೆ. ಓರ್ವ ಅಭಿಮಾನಿ, ‘ನಾಮಫಲಕ ಬದಲಾಗಿರಬಹುದು, ಆದರೆ ಭಾವನೆಗಳು ಹಾಗೇ ಇವೆ’ ಎಂದಿದ್ದಾರೆ.

ಶಾರುಖ್ ಅಭಿಮಾನಿಗಳ ಟ್ವೀಟ್​ಗಳು ಇಲ್ಲಿದೆ:

ಚಿತ್ರಗಳ ವಿಷಯಕ್ಕೆ ಬಂದರೆ ಶಾರುಖ್ ‘ಪಠಾಣ್’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಕೂಡ ಬಣ್ಣಹಚ್ಚುತ್ತಿದ್ದಾರೆ. ಇತ್ತೀಚೆಗೆಷ್ಟೇ ಶಾರುಖ್ ಹಾಗೂ ರಾಜ್​ಕುಮಾರ್ ಹಿರಾನಿ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ ‘ಡಂಕಿ’ ಅನೌನ್ಸ್ ಆಗಿತ್ತು.

ಇದನ್ನೂ ಓದಿ: Ashika Ranganath: ‘ಅವತಾರ ಪುರುಷ’ ಬೆಡಗಿ ಆಶಿಕಾ ರಂಗನಾಥ್ ಕ್ಯೂಟ್ ಫೋಟೋ ಆಲ್ಬಂ

Jersy Box Office Collection: ‘ಕೆಜಿಎಫ್ ಚಾಪ್ಟರ್ 2’ 9ನೇ ದಿನ ಗಳಿಸಿದ ಅರ್ಧದಷ್ಟೂ ಕಲೆಕ್ಷನ್ ಮಾಡದ ಜೆರ್ಸಿ; ಇಲ್ಲಿದೆ ಲೆಕ್ಕಾಚಾರ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ