AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhumi Pednekar Birthday: ಭಿನ್ನ ಪಾತ್ರಗಳಿಂದ ಗಮನ ಸೆಳೆದ ನಟಿ ಭೂಮಿ ಪೆಡ್ನೇಕರ್​ಗೆ ಹ್ಯಾಪಿ ಬರ್ತ್​ಡೇ

Bhumi Pednekar: ಪ್ರತಿ ಸಿನಿಮಾದಲ್ಲಿ ನಟಿ ಭೂಮಿ ಪೆಡ್ನೇಕರ್​ ಅವರು ಡಿಫರೆಂಟ್​ ಆದಂತಹ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಮೂಲಕ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ.

Bhumi Pednekar Birthday: ಭಿನ್ನ ಪಾತ್ರಗಳಿಂದ ಗಮನ ಸೆಳೆದ ನಟಿ ಭೂಮಿ ಪೆಡ್ನೇಕರ್​ಗೆ ಹ್ಯಾಪಿ ಬರ್ತ್​ಡೇ
ಭೂಮಿ ಪೆಡ್ನೇಕರ್
Follow us
TV9 Web
| Updated By: ಮದನ್​ ಕುಮಾರ್​

Updated on: Jul 18, 2022 | 7:41 AM

ಚಿತ್ರರಂಗದಲ್ಲಿ ಒಬ್ಬೊಬ್ಬರ ಆಯ್ಕೆ ಒಂದೊಂದು ರೀತಿ ಇರುತ್ತದೆ. ಕೆಲವು ನಟಿಯರು ಗ್ಲಾಮರ್​ ಬಲದಿಂದ ಯಶಸ್ಸು ಸಾಧಿಸುತ್ತಾರೆ. ಇನ್ನೂ ಕೆಲವರು ಸ್ಟಾರ್​ ಹೀರೋಗಳ ಸಿನಿಮಾಗಳಲ್ಲಿ ಕಾಣಿಸಿಕೊಂಡು ಗೆಲುವು ಪಡೆಯುತ್ತಾರೆ. ಕೆಲವು ನಟಿಯರು ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾರೆ. ನಟಿ ಭೂಮಿ ಪೆಡ್ನೇಕರ್ (Bhumi Pednekar)  ಅವರು ಮೂರನೇ ಪ್ರಕಾರಕ್ಕೆ ಸೇರುವವರು. ನಟಿಯಾಗಿ ಅವರು ಚಿತ್ರರಂಗಕ್ಕೆ ಕಾಲಿಟ್ಟು 7 ವರ್ಷಗಳು ಕಳೆದಿವೆ. ಇಷ್ಟು ವರ್ಷಗಳಲ್ಲಿ ಅವರು 10ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್​ (Bollywood) ಹೀರೋಯಿನ್​ಗಳ ಪೈಕಿ ಭೂಮಿ ಪೆಡ್ನೇಕರ್​ ಅವರು ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಇಂದು (ಜುಲೈ 18) ಅವರಿಗೆ ಜನ್ಮದಿನದ (Bhumi Pednekar Birthday) ಸಡಗರ. ಆ ಪ್ರಯುಕ್ತ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಭೂಮಿ ಪೆಡ್ನೇಕರ್​ ಸಾಗಿ ಬಂದ ಹಾದಿಯನ್ನು ಫ್ಯಾನ್ಸ್​ ಮೆಲುಕು ಹಾಕುತ್ತಿದ್ದಾರೆ.

ಬಹುತೇಕ ನಟಿಯರು ನೇರವಾಗಿ ಬಂದು ಕ್ಯಾಮೆರಾ ಮುಂದೆ ನಿಲ್ಲುತ್ತಾರೆ. ಆದರೆ ಭೂಮಿ ಪೆಡ್ನೇಕರ್​ ಆ ರೀತಿ ಅಲ್ಲ. ನಟಿ ಆಗುವುದಕ್ಕೂ ಮುನ್ನ ಪ್ರತಿಷ್ಠಿತ ಯಶ್​ ರಾಜ್​ ಫಿಲ್ಮ್ಸ್ ಸಂಸ್ಥೆಯಲ್ಲಿ ಅವರು ಸಹಾಯಕ ಕಾಸ್ಟಿಂಗ್​ ಡೈರೆಕ್ಟರ್​ ಆಗಿ 6 ವರ್ಷ ಕೆಲಸ ಮಾಡಿದ್ದರು. ನಂತರ ‘ದಮ್​ ಲಗಾಗೆ ಹೈಷಾ’ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಹೀರೋಯಿನ್​ ಆಗಿ ಪರಿಚಿತರಾದರು.

ಮೊದಲ ಸಿನಿಮಾದಲ್ಲಿ ಬಳುಕುವ ಬಳ್ಳಿಯಂತೆ ಕಾಣಿಸಿಕೊಂಡು ಜನರನ್ನು ರಂಜಿಸಬೇಕು ಎಂಬ ಆಸೆ ಅನೇಕರಿಗೆ ಇರುತ್ತದೆ. ಆದರೆ ಭೂಮಿ ಪೆಡ್ನೇಕರ್​ ಆಯ್ಕೆ ಮಾಡಿಕೊಂಡಿದ್ದ ಪಾತ್ರ ಭಿನ್ನವಾಗಿತ್ತು. ‘ದಮ್​ ಲಗಾ ಕೆ ಹೈಷಾ’ ಚಿತ್ರದಲ್ಲಿ ಅವರು ಧಡೂತಿ ದೇಹ ಹೊಂದಿರುವ ಯುವತಿಯಾಗಿ ಕಾಣಿಸಿಕೊಂಡರು. ಆ ಪಾತ್ರಕ್ಕಾಗಿ ನಿಜವಾಗಿಯೂ ದೇಹದ ತೂಕ ಹೆಚ್ಚಿಸಿಕೊಂಡಿದ್ದರು.

ಇದನ್ನೂ ಓದಿ
Image
Meera Jasmine: ‘ಅರಸು’ ಚಿತ್ರದ ನಟಿ ಮೀರಾ ಜಾಸ್ಮಿನ್​ ಗ್ಲಾಮರಸ್​ ಫೋಟೋ ಕಂಡು ಅಭಿಮಾನಿಗಳಿಗೆ ಅಚ್ಚರಿ
Image
Amulya: ಮೊದಲ ಸಲ ರೀಲ್ಸ್​ ಮಾಡಿದ ಅಮೂಲ್ಯ; ಲಂಗ ದಾವಣಿ ಧರಿಸಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ ನಟಿ
Image
ಅಕ್ರಮ್​​ To ಲಲಿತ್: ಸುಶ್ಮಿತಾ ಸೇನ್​ ಬಾಳಲ್ಲಿ ಬಂದ 10 ಮಂದಿ; ಇಲ್ಲಿದೆ ನಟಿಯ ಲವ್ ಲೈಫ್
Image
Sanya Malhotra: ‘ಭಾರತದಲ್ಲಿ ಮಹಿಳೆಯರಿಗೆ ಈ ನಗರ ಸುರಕ್ಷಿತವಲ್ಲ’; ತವರಿನ ಬಗ್ಗೆಯೇ ತಕರಾರು ತೆಗೆದ ‘ದಂಗಲ್​’ ನಟಿ

2019ರಲ್ಲಿ ತೆರೆಕಂಡ ‘ಬಾಲಾ’ ಸಿನಿಮಾದಲ್ಲಿ ಭೂಮಿ ಪೆಡ್ನೇಕರ್​ ಅವರು ಕಪ್ಪು ಮೈಬಣ್ಣದ ಹುಡುಗಿಯ ಪಾತ್ರ ಮಾಡಿದರು. ಆ ಸಿನಿಮಾ ಕೂಡ ಯಶಸ್ವಿ ಆಯಿತು. ಭೂಮಿ ಪೆಡ್ನೇಕರ್​ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆದರು. ಪ್ರತಿ ಪಾತ್ರದ ಮೂಲಕವೂ ಜನರಿಗೆ ಒಂದು ಮೆಸೇಜ್​ ನೀಡಲು ಭೂಮಿ ಪ್ರಯತ್ನಿಸುತ್ತಾರೆ. ಆ ಕಾರಣಕ್ಕಾಗಿ ಅವರು ಅಭಿಮಾನಿಗಳಿಗೆ ಸಖತ್​ ಇಷ್ಟ ಆಗುತ್ತಾರೆ.

2022ರ ಆರಂಭದಲ್ಲಿ ‘ಬದಾಯಿ ದೋ’ ಸಿನಿಮಾ ತೆರೆಕಂಡಿತು. ಆ ಚಿತ್ರದಲ್ಲಿ ಲೆಸ್ಬಿಯನ್​ (ಸಲಿಂಗಕಾಮಿ) ಯುವತಿಯ ಪಾತ್ರವನ್ನು ಭೂಮಿ ಪೆಡ್ನೇಕರ್​ ಆಯ್ಕೆ ಮಾಡಿಕೊಂಡರು. ಅಂಥ ಬೋಲ್ಡ್​ ಪಾತ್ರ ಮಾಡುವಲ್ಲಿ ಅವರು ಯಾವುದೇ ಹಿಂಜರಿಕೆ ತೋರಲಿಲ್ಲ. ಈಗ ಅವರ ಕೈಯಲ್ಲಿ ಅನೇಕ ಆಫರ್​ಗಳಿವೆ. ನಟನೆಯ ಸಾಮರ್ಥ್ಯದಿಂದ ಬಾಲಿವುಡ್​ನಲ್ಲಿ ಅವರು ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ