AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sanya Malhotra: ‘ಭಾರತದಲ್ಲಿ ಮಹಿಳೆಯರಿಗೆ ಈ ನಗರ ಸುರಕ್ಷಿತವಲ್ಲ’; ತವರಿನ ಬಗ್ಗೆಯೇ ತಕರಾರು ತೆಗೆದ ‘ದಂಗಲ್​’ ನಟಿ

Sanya Malhotra | Delhi: ಆಮಿರ್​ ಖಾನ್​ ನಟನೆಯ ‘ದಂಗಲ್​’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಸಾನಿಯಾ ಮಲ್ಹೋತ್ರಾ ಕಾಲಿಟ್ಟರು. ಆ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿತು.

Sanya Malhotra: ‘ಭಾರತದಲ್ಲಿ ಮಹಿಳೆಯರಿಗೆ ಈ ನಗರ ಸುರಕ್ಷಿತವಲ್ಲ’; ತವರಿನ ಬಗ್ಗೆಯೇ ತಕರಾರು ತೆಗೆದ ‘ದಂಗಲ್​’ ನಟಿ
ಸಾನಿಯಾ ಮಲ್ಹೋತ್ರಾ
TV9 Web
| Edited By: |

Updated on:Jul 14, 2022 | 9:33 AM

Share

ಮಹಿಳೆಯರ ಸುರಕ್ಷತೆ ಬಗ್ಗೆ ಪ್ರತಿ ದಿನವೂ ಚರ್ಚೆ ನಡೆಯುತ್ತದೆ. ಪ್ರತಿ ಬಾರಿ ಏನಾದರೊಂದು ಕ್ರೈಮ್​ ನಡೆದಾಗ ‘ಸ್ತ್ರೀಯರಿಗೆ ಇಲ್ಲಿ ಎಷ್ಟು ರಕ್ಷಣೆ ಇದೆ’ ಎನ್ನುವ ಪ್ರಶ್ನೆ ಎದುರಾಗುತ್ತದೆ. ಪ್ರಗತಿ ಹೊಂದಿವೆ ಎಂದು ಹೇಳಿಕೊಳ್ಳುವ ನಗರಗಳಲ್ಲೂ ಹೆಣ್ಮಕ್ಕಳ ಸೇಫ್ಟಿ​ ಬಗ್ಗೆ ಖಚಿತತೆ ಇಲ್ಲದಂತಹ ವಾತಾವರಣ ಇದೆ. ಈ ಬಗ್ಗೆ ಖ್ಯಾತ ನಟಿ ಸಾನಿಯಾ ಮಲ್ಹೋತ್ರಾ (Sanya Malhotra) ಅವರು ಮಾತನಾಡಿದ್ದಾರೆ. ನೇರವಾಗಿ ಅವರು ಕೆಲವು ಆರೋಪಗಳನ್ನು ಮಾಡಿದ್ದಾರೆ. ಅಚ್ಚರಿ ಎಂದರೆ ಅವರು ತಕರಾರು ತೆಗೆದಿರುವುದು ಅವರ ಹುಟ್ಟೂರಿನ ಬಗ್ಗೆ. ಹೌದು, ಸಾನಿಯಾ ಮಲ್ಹೋತ್ರಾ ಹುಟ್ಟಿ ಬೆಳೆದಿದ್ದು ದೆಹಲಿಯಲ್ಲಿ. ಈಗ ಅವರು ವೃತ್ತಿಜೀವನದ ಕಾರಣದಿಂದ ಮುಂಬೈನಲ್ಲಿ (Mumbai) ಸೆಟ್ಲ್​ ಆಗಿದ್ದಾರೆ. ಮಹಿಳೆಯವರಿಗೆ ದೆಹಲಿ (Delhi) ಸುರಕ್ಷಿತವಲ್ಲ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ನವೆಂಬರ್​ ತಿಂಗಳಲ್ಲಿ ಸಾನಿಯಾ ಮಲ್ಹೋತ್ರಾ ಅವರು ಮುಂಬೈನಲ್ಲಿ ಹೊಸ ಮನೆ ಖರೀದಿಸಿದರು. ಅದೇ ಅಪಾರ್ಟ್​ಮೆಂಟ್​ನಲ್ಲಿ ಹೃತಿಕ್​ ರೋಷನ್​ ಅವರ ಮನೆ ಕೂಡ ಇದೆ ಎಂಬುದು ವಿಶೇಷ. ಸಿನಿಮಾ ಕೆಲಸಗಳ ಸಲುವಾಗಿ ದೆಹಲಿ ಬಿಟ್ಟು ಮುಂಬೈಗೆ ಬಂದಿರುವ ಸಾನಿಯಾ ಮಲ್ಹೋತ್ರಾ ಅವರು ಹೀಗೊಂದು ಹೇಳಿಕೆ ನೀಡಿದ್ದಾರೆ. ಮುಂಬೈಗೆ ಹೋಲಿಸಿದರೆ ದೆಹಲಿಯಲ್ಲಿ ಮಹಿಳೆಯರಿಗೆ ಸುರಕ್ಷಿತೆ ಕಡಿಮೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

‘ನಾನು ದೆಹಲಿ ಮೂಲದವಳು. ಹಾಗಿದ್ದರೂ ಮುಂಬೈ ನಗರವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಇದೆ. ಮುಂಬೈನಲ್ಲಿ ನನಗೆ ಹೆಚ್ಚು ಸುರಕ್ಷಿತ ಭಾವನೆ ಮೂಡುತ್ತದೆ. ದೆಹಲಿ ಅಭಿವೃದ್ಧಿ ಹೊಂದಿದೆಯೋ ಇಲ್ಲವೋ ನನಗೆ ತಿಳಿದಿಲ್ಲ. ಆದರೆ ಅಲ್ಲಿ ನನಗೆ ಸೇಫ್​ ಎನಿಸುವುದಿಲ್ಲ. ದೆಹಲಿಯಲ್ಲಿ ಪ್ರತಿ ಹುಡುಗಿಗೂ ಚುಡಾಯಿಸಲಾಗಿರುತ್ತದೆ’ ಎಂದು ಸಾನಿಯಾ ಮಲ್ಹೋತ್ರಾ ಹೇಳಿದ್ದಾರೆ.

ಇದನ್ನೂ ಓದಿ
Image
ಗ್ಯಾಂಗ್​ ರೇಪ್​​ ಆಗಿದೆ ಎಂದು ದೂರು ಕೊಡಲು ಹೋದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪೊಲೀಸ್​ ಅಧಿಕಾರಿ
Image
ಮೊದಲ ದಿನ ಕೆಲಸಕ್ಕೆ ಹೋದ ನರ್ಸ್​ ಮರುದಿನ ಹಾಸ್ಪಿಟಲ್​​ನಲ್ಲಿ ಶವವಾಗಿ ಪತ್ತೆ; ರೇಪ್​ ಆ್ಯಂಡ್​ ಮರ್ಡರ್​ ಎಂದು ದೂರು ಕೊಟ್ಟ ಕುಟುಂಬ
Image
ಅಶ್ಲೀಲ​ ವೆಬ್​ಸೈಟ್​ನಲ್ಲಿ ಉರ್ಫಿ ಜಾವೇದ್​ ಫೋಟೋ; ಪ್ರತಿ ದಿನ ರೇಪ್​ ಬೆದರಿಕೆ: ಶಾಕಿಂಗ್​ ವಿಚಾರ ತೆರೆದಿಟ್ಟ ನಟಿ
Image
ಮಹಿಳೆ ಹತ್ಯೆ ಪ್ರಕರಣ: ಅವಿವಾಹಿತ ಆರೋಪಿ ಅರೆಸ್ಟ್, 10 ವರ್ಷದ ಹಿಂದೆಯೂ ಬಾಲಕಿಯ ರೇಪ್​- ಮರ್ಡರ್ ಮಾಡಿ ಜೈಲುಪಾಲಾಗಿದ್ದ

ಆಮಿರ್​ ಖಾನ್​ ನಟನೆಯ ‘ದಂಗಲ್​’ ಸಿನಿಮಾದಲ್ಲಿ ಸಾನಿಯಾ ಮಲ್ಹೋತ್ರಾ ಮಿಂಚಿದರು. ಆ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿತು. ನಂತರ ಅವರು ‘ಬದಾಯಿ ಹೋ’, ‘ಪಟಾಕಾ’, ‘ಶಕುಂತಲಾ ದೇವಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು.

Published On - 9:33 am, Thu, 14 July 22

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ