ಗ್ಯಾಂಗ್​ ರೇಪ್​​ ಆಗಿದೆ ಎಂದು ದೂರು ಕೊಡಲು ಹೋದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪೊಲೀಸ್​ ಅಧಿಕಾರಿ

ಹುಡುಗಿಯನ್ನು ಮೊದಲು ನಾಲ್ವರು ಸೇರಿ ಅಪಹರಣ ಮಾಡಿ, ಭೋಪಾಲ್​​ಗೆ ಕರೆದುಕೊಂಡು ಹೋದರು. ನಾಲ್ಕು ದಿನ ಅಲ್ಲಿಟ್ಟುಕೊಂಡು ಆಕೆಯ ಮೇಲೆ ರೇಪ್​ ಮಾಡಿದ್ದಾರೆ. ಅದಾದ ಮೇಲೆ ವಾಪಸ್ ಊರಿಗೆ ಕರೆದುಕೊಂಡು ಬಂದು, ಅಲ್ಲಿನ ಪೊಲೀಸ್ ಸ್ಟೇಶನ್​ ಎದುರೇ ಬಿಟ್ಟು ಹೋಗಿದ್ದರು.

ಗ್ಯಾಂಗ್​ ರೇಪ್​​ ಆಗಿದೆ ಎಂದು ದೂರು ಕೊಡಲು ಹೋದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪೊಲೀಸ್​ ಅಧಿಕಾರಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:May 04, 2022 | 10:25 AM

ಲಖನೌ: ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ದೂರು ನೀಡಲು ಹೋದ 13ವರ್ಷದ ಬಾಲಕಿಯ ಮೇಲೆ ಪೊಲೀಸ್​ ಠಾಣೆಯ ಮುಖ್ಯ ಅಧಿಕಾರಿ ಮತ್ತೊಮ್ಮೆ ರೇಪ್​ ಮಾಡಿರುವ ಕ್ರೂರ ಘಟನೆ ಉತ್ತರ ಪ್ರದೇಶದ ಲಲಿತ್​ ಪುರದಲ್ಲಿ ನಡೆದಿದೆ. ತನ್ನ ಮೇಲೆ ನಾಲ್ವರು ಅತ್ಯಾಚಾರ ಮಾಡಿದ್ದಾರೆ ಎಂದು ಬಾಲಕಿ ಪೊಲೀಸರಿಗೆ ದೂರು ನೀಡಲು ತನ್ನ ಸಂಬಂಧಿಯೊಬ್ಬರ ಜತೆ  ಹೋಗಿದ್ದಳು.  ಈ ವೇಳೆ ಠಾಣೆಯಲ್ಲಿದ್ದ ಅಧಿಕಾರಿ (SHO) ತಿಲಕ್​ಧಾರಿ ಸರೋಜ್​ ಬಾಲಕಿಯ ಮೇಲೆ ಮತ್ತೆ ಅತ್ಯಾಚಾರ ಮಾಡಿದ್ದಾನೆ. ಈಗ ಆತನನ್ನು ಅಮಾನತು ಮಾಡಲಾಗಿದ್ದು, ಕ್ರಿಮಿನಲ್ ಕೇಸ್​ ದಾಖಲಾಗಿದೆ.  ಪೊಲೀಸ್ ಅಧಿಕಾರಿ ಬಾಲಕಿಯ ಮೇಲೆ ರೇಪ್​ ಮಾಡಿ ಪರಾರಿಯಾಗಿದ್ದಾನೆ. ಹಾಗೇ, ಅದಕ್ಕೂ ಮೊದಲು ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ನಾಲ್ವರಲ್ಲಿ ಮೂವರು ಅರೆಸ್ಟ್ ಆಗಿದ್ದಾರೆ. 

ಹುಡುಗಿಯನ್ನು ಮೊದಲು ನಾಲ್ವರು ಸೇರಿ ಅಪಹರಣ ಮಾಡಿ, ಭೋಪಾಲ್​​ಗೆ ಕರೆದುಕೊಂಡು ಹೋದರು. ನಾಲ್ಕು ದಿನ ಅಲ್ಲಿಟ್ಟುಕೊಂಡು ಆಕೆಯ ಮೇಲೆ ರೇಪ್​ ಮಾಡಿದ್ದಾರೆ. ಅದಾದ ಮೇಲೆ ವಾಪಸ್ ಊರಿಗೆ ಕರೆದುಕೊಂಡು ಬಂದು, ಅಲ್ಲಿನ ಪೊಲೀಸ್ ಸ್ಟೇಶನ್​ ಎದುರೇ ಬಿಟ್ಟು ಹೋಗಿದ್ದರು. ಆಗ ಇದೇ ಪೊಲೀಸ್ ಅಧಿಕಾರಿ, ಬಾಲಕಿಯ ಬಳಿ ಎಲ್ಲವನ್ನೂ ವಿಚಾರಿಸಿ, ಅವಳ ಅತ್ತೆಯನ್ನು ಸ್ಟೇಶನ್​ಗೆ ಕರೆಸಿದ್ದ. ಹಾಗೇ, ಬಾಲಕಿಯನ್ನು ಆ ಮಹಿಳೆಯೊಂದಿಗೆ ಕಳಿಸಿದ್ದಲ್ಲದೆ, ‘ಮರುದಿನ ಬಾ ನಿನ್ನ ಹೇಳಿಕೆ ದಾಖಲಿಸಿಕೊಳ್ಳಬೇಕು’ ಎಂದು ಹೇಳಿದ್ದ. ಅದರಂತೆ ಮರುದಿನ ಬಾಲಕಿ ತನ್ನ ಅತ್ತೆಯೊಂದಿಗೆ ಪೊಲೀಸ್ ಠಾಣೆಗೆ ಹೋದಾಗ ಈ ಪೊಲೀಸ್​ ರಾಕ್ಷಸನಾಗಿದ್ದ. ಬಾಲಕಿಯನ್ನು ಒಳಗಿನ ಕೋಣೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ದುರದೃಷ್ಟಕ್ಕೆ ಆ ಅತ್ತೆಯ ಎದುರಿಗೇ ಇದೆಲ್ಲ ನಡೆದರೂ ಅವಳು ಬಾಯಿಮುಚ್ಚಿಕೊಂಡೇ ಇದ್ದಳು. ಹೀಗಾಗಿ ಆಕೆಯ ವಿರುದ್ಧವೂ ಕೇಸ್​ ದಾಖಲಾಗಿದೆ.

ಪೊಲೀಸ್ ಅಧಿಕಾರಿ ಸೇರಿ, ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಎಲ್ಲರ ವಿರುದ್ಧವೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಠಾಣಾಧಿಕಾರಿಯನ್ನು ಅಮಾನತು ಮಾಡಿದ್ದೇವೆ. ಹಾಗೇ, ನಾಪತ್ತೆಯಾಗಿರುವ ಆತನನ್ನು ಬಂಧಿಸಲು ತಂಡವನ್ನೂ ರಚಿಸಲಾಗಿದೆ. ಹಾಗೇ, ಹುಡುಗಿಯನ್ನು  ವೈದ್ಯಕೀಯ ತಪಾಸಣೆಗೆ ಕಳಿಸಲಾಗಿದೆ ಎಂದು ಲಲಿತ್​ಪುರ ಪೊಲೀಸ್ ಮುಖ್ಯಸ್ಥ ನಿಖಿಲ್​ ಪಾಠಕ್​ ತಿಳಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ಕಮಿಷನರ್ ಕಮಲ್ ಪಂತ್ ವಿರುದ್ಧ ಬಿಜೆಪಿಯವರು ಮಾತಾಡಿದ್ದರಿಂದ ಪಿಎಸ್ಐ ಅಕ್ರಮ ಹೊರಬಂದಿದೆ -ಹೆಚ್ಡಿ ಕುಮಾರಸ್ವಾಮಿ

Published On - 10:25 am, Wed, 4 May 22

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್