AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ಮದ್ವೆಯಾದವಳ ಶೀಲದ ಮೇಲೆಯೇ ಶಂಕೆ: ಪ್ರೀತಿಕೊಂದ ಕೊಲೆಗಾರ

ಆತ ಆಕೆಯನ್ನ ಬಣ್ಣ ಬಣ್ಣದ ಮಾತುಗಳನ್ನ ಆಡಿ, ತನ್ನ ಗಾಳಕ್ಕೆ ಬೀಳಿಸಿಕೊಂಡು ವಿವಾಹವಾಗಿದ್ದ. ನಿನ್ನನ್ನ ಜೀವನ ಪೂರ್ತಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಲವ್ ಮ್ಯಾರೇಜ್ ಆದವನು ನಾಲ್ಕನೇ ತಿಂಗಳಿಗೆ ಆಕೆಯ ಕಥೆಯನ್ನೇ ಮುಗಿಸಿದ್ದಾನೆ. ಪ್ರೀತಿಸಿ ಮದುವೆಯಾದವಳ ಶೀಲವನ್ನೇ ಶಂಕಿಸಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈದಿದ್ದಾನೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಪ್ರೀತಿ ಮದ್ವೆಯಾದವಳ ಶೀಲದ ಮೇಲೆಯೇ ಶಂಕೆ: ಪ್ರೀತಿಕೊಂದ ಕೊಲೆಗಾರ
Ramanagara Murder
ಪ್ರಶಾಂತ್​ ಬಿ.
| Edited By: |

Updated on: Feb 19, 2026 | 4:10 PM

Share

ರಾಮನಗರ, (ಫೆಬ್ರವರಿ 19): ಕೌಟುಂಬಿಕ ಕಲಹ, ಪತ್ನಿಯ ಶೀಲದ ಮೇಲೆ ಶಂಕೆ ಹಿನ್ನೆಲೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕ್ರೂರಿ ಪತಿಯೊಬ್ಬ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ‌ಜಿಲ್ಲೆ ರಾಮನಗರದಲ್ಲಿ ನಡೆದಿದೆ. ಸುಫಿಯಾ ಬಾನು ಹತ್ಯೆಯಾದ ಮಹಿಳೆ. ಸಲ್ಮಾನ್(22) ಹಾಗೂ ಸುಫಿಯಾ ಬಾನು(21) ವಯಸ್ಸಿನ್ನೂ ಚಿಕ್ಕದು. ಬೆಂಗಳೂರು ದಕ್ಷಿಣ ‌ಜಿಲ್ಲೆ ರಾಮನಗರದ ಯಾರಬ್ ನಗರ ನಿವಾಸಿಗಳು. ರಾಮನಗರದ ‌ಫಿಲೆಚೆರಿಯೊಂದರಲ್ಲಿ ಕೆಲಸ ಮಾಡುತ್ತಿರುವಾಗಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಹೀಗಾಗಿ ನಾಲ್ಕು ತಿಂಗಳ ಕೆಳಗೆ ಇಬ್ಬರು ವಿವಾಹವಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದರೂ ಸಹ ಪತ್ನಿ ಶೀಲಶಂಕಿಸಿ ಹತ್ಯೆ ಮಾಡಿದ್ದಾನೆ.

ಪತ್ನಿ ಸುಫಿಯಾ ಬಾನು ಮನೆಯಲ್ಲಿಯೇ ಸಲ್ಮಾನ್‌ ‌ಕೂಡ ವಾಸವಾಗಿದ್ದ. ಸಲ್ಮಾನ್ ಸುಫಿಯಾಳನ್ನ ಲೈಫ್ ಲಾಂಗ್ ನಿನ್ನನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದಿದ್ದ. ಆದರೆ ನಿನ್ನೆ (ಫೆ.18) ಸಂಜೆ ಇಬ್ಬರು ಫಿಲಚೇರಿಯಲ್ಲಿ ಕೆಲಸ ಮುಗಿಸಿಕೊಂಡು ವಾಪಾಸ್ ಮನೆಗೆ ಬಂದ ವೇಳೆ, ಸುಫಿಯಾ ತಾಯಿ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಸುಫಿಯಾಳಿಗೆ ಚಾಕುವಿನಿಂದ ಭೀಕರವಾಗಿ ಚುಚ್ಚಿದ್ದಾನೆ. ತಕ್ಷಣ ‌ಆಸ್ಪತ್ರೆಗೆ ದಾಖಲಿಸಲು ಮುಂದಾಗುವರಷ್ಟರಲ್ಲಿ ಸುಫಿಯಾ ಪ್ರಾಣಪಕ್ಷಿ ಹಾರಿಹೋಗಿದೆ.

ಇದನ್ನೂ ಓದಿ: ವ್ಹೀಲ್‌ ಚೇರ್‌ನಲ್ಲಿದ್ದ ವೃದ್ಧ ಪತಿ ಎದುರೇ ಪತ್ನಿಯ ಕೊಲೆ: ಚಿನ್ನಾಭರಣ ದೋಚಿ ಎಸ್ಕೇಪ್​​

ಅಂದಹಾಗೆ ಸುಫಿಯಾ ಹಾಗೂ ಆರೋಪಿ ಸಲ್ಮಾನ್, ಮದುವೆ ಆಗುವುದಕ್ಕೂ ಮೊದಲೇ ರಾಮನಗರದ ಫಿಲೇಚೆರಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಪ್ರೀತಿ ಹುಟ್ಟಿ ಇಬ್ಬರು ವಿವಾಹವಾಗಿದ್ದರು. ಇನ್ನು ಸುಫಿಯಾ ತನ್ನ ತಾಯಿ, ತಮ್ಮ ಜೊತೆ ವಾಸವಾಗಿದ್ದಳು. ವಿವಾಹವಾದ‌ ನಂತರ ಸಲ್ಮಾನ್ ಸಹಾ ಅವರೊಟ್ಟಿಗೆ ಇದ್ದ. ಇಬ್ಬರು ವಿವಾಹವಾಗಿದ್ದು ತಂದೆ ಹಾಗೂ ಸಹೋದರಿಯವರಿಗೂ ಕೂಡ ಗೊತ್ತಿರಲಿಲ್ಲ. ಇನ್ನು ಇಬ್ಬರು ಮದುವೆ ಆದ ನಂತರವೂ ಕೂಡ ಒಟ್ಟಿಗೆ ಒಂದೇ ಫಿಲೇಚೆರಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಿದ್ರು ಸುಫಿಯಾ ಬಾನು ಶೀಲದ ಮೇಲೆ ಸಲ್ಮಾನ್ ಗೆ ಸಾಕಷ್ಟು ಅನುಮಾನಪಟ್ಟಿದ್ದ.

ತನ್ನ ಹೆಂಡತಿ ಬೇರೊಬ್ಬರ ಜೊತೆ ಅನೈತಿಕ ಸಂಬಂಧವೊಂದಿದ್ದಾಳೆ ಎಂದು ಕೆಲ ದಿನಗಳಿಂದ ಸುಫಿಯಾ ಜೊತೆ ಸಲ್ಮಾನ್ ಗಲಾಟೆ ಮಾಡುತ್ತಿದ್ದನಂತೆ. ನಿನ್ನೆ ಸಹ ಸುಫಿಯಾ ಜೊತೆ ಗಲಾಟೆ ತೆಗೆದು ಆನಂತರ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಆರೋಪಿ ಸಲ್ಮಾನ್ ಕಠಿಣ ಶಿಕ್ಷೆ ‌ಕೊಡಿಸಬೇಕು ಎಂದು ಮೃತರ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇನ್ನು ತನ್ನ ಪತ್ನಿಯನ್ನ ಕೊಲೆಗೈದ ನಂತರ ಆರೋಪಿ ಸಲ್ಮಾನ್ ತಾನಾಗಿಯೇ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಮನಗರದ ಪುರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.