AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips: ಮನೆಯಲ್ಲಿ ಕನ್ನಡಿ ಎಲ್ಲಿರಬೇಕು? ವಾಸ್ತು ಪ್ರಕಾರ ಈ ಸಣ್ಣ ತಪ್ಪುಗಳೇ ದಾರಿದ್ರ್ಯಕ್ಕೆ ಕಾರಣ!

ಪ್ರತಿಯೊಬ್ಬರ ಮನೆಯಲ್ಲೂ ಕನ್ನಡಿ ಅವಶ್ಯಕ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಕನ್ನಡಿಗಳ ಸರಿಯಾದ ದಿಕ್ಕು ಮನೆಯ ಶಕ್ತಿ, ಸಂಪತ್ತು ಮತ್ತು ಸಕಾರಾತ್ಮಕ ವಾತಾವರಣದ ಮೇಲೆ ನೇರ ಪರಿಣಾಮ ಬೀರುತ್ತದೆ. ಮನೆಯಲ್ಲಿ ಎಲ್ಲೆಂದರಲ್ಲಿ ಕನ್ನಡಿ ಹಾಕುವುದರಿಂದ ವಾಸ್ತು ದೋಷ ಉಂಟಾಗಬಹುದು. ಮಲಗುವ ಕೋಣೆ, ಮುಖ್ಯ ದ್ವಾರ ಮತ್ತು ಸ್ನಾನಗೃಹದಲ್ಲಿ ಕನ್ನಡಿ ಇಡುವ ನಿಯಮಗಳನ್ನು ತಿಳಿದುಕೊಳ್ಳಿ. ಸರಿಯಾದ ದಿಕ್ಕಿನಲ್ಲಿ ಇರಿಸಿದ ಕನ್ನಡಿ ಸಮೃದ್ಧಿ ತರುತ್ತದೆ.

Vastu Tips: ಮನೆಯಲ್ಲಿ ಕನ್ನಡಿ ಎಲ್ಲಿರಬೇಕು? ವಾಸ್ತು ಪ್ರಕಾರ ಈ ಸಣ್ಣ ತಪ್ಪುಗಳೇ ದಾರಿದ್ರ್ಯಕ್ಕೆ ಕಾರಣ!
ಮನೆಯಲ್ಲಿ ಕನ್ನಡಿ ಎಲ್ಲಿರಬೇಕು?Image Credit source: Getty Images
ಅಕ್ಷತಾ ವರ್ಕಾಡಿ
|

Updated on: Aug 13, 2026 | 4:37 PM

Share

ಪ್ರತಿಯೊಬ್ಬರ ಮನೆಯಲ್ಲೂ ಕನ್ನಡಿ ಇರುವುದು ಅತ್ಯಗತ್ಯ. ಬೆಳಿಗ್ಗೆ ಎದ್ದ ತಕ್ಷಣದಿಂದ ಹಿಡಿದು ಎಲ್ಲೇ ಹೊರಡುವಾಗಲೂ ಮುಖ ನೋಡಿಕೊಳ್ಳಲು ಕನ್ನಡಿ ಬೇಕೇ ಬೇಕು. ಆದರೆ, ಕನ್ನಡಿ ಕೇವಲ ಅಲಂಕಾರದ ಅಥವಾ ಪ್ರತಿಬಿಂಬ ನೋಡುವ ವಸ್ತುವಷ್ಟೇ ಅಲ್ಲ ಎಂಬುದು ನಿಮಗೆ ತಿಳಿದಿದೆಯೇ? ವಾಸ್ತು ಶಾಸ್ತ್ರದ ಪ್ರಕಾರ, ಕನ್ನಡಿಯು ಮನೆಯ ಶಕ್ತಿ (Energy) ಮತ್ತು ಸಕಾರಾತ್ಮಕ ವಾತಾವರಣದ ಮೇಲೆ ನೇರ ಪರಿಣಾಮ ಬೀರುತ್ತದೆ. ಮನೆಯಲ್ಲಿ ಎಲ್ಲೆಂದರಲ್ಲಿ ಕನ್ನಡಿ ತೂಗಾಕುವುದರಿಂದ ವಾಸ್ತು ದೋಷ ಉಂಟಾಗಬಹುದು. ಹಾಗಾದರೆ ಮನೆಗೆ ಎಷ್ಟು ಕನ್ನಡಿಗಳು ಸೂಕ್ತ? ಅವುಗಳನ್ನು ಯಾವ ದಿಕ್ಕಿನಲ್ಲಿಡಬೇಕು? ಸಂಪೂರ್ಣ ವಿವರ ಇಲ್ಲಿದೆ.

ಮನೆಗೆ ಎಷ್ಟು ಕನ್ನಡಿಗಳು ಬೇಕು ಮತ್ತು ಯಾವ ದಿಕ್ಕು ಸೂಕ್ತ?

ಮನೆಯಲ್ಲಿ ಅತಿಯಾಗಿ ಕನ್ನಡಿಗಳನ್ನು ಬಳಸುವುದು ವಾಸ್ತು ಪ್ರಕಾರ ಸೂಕ್ತವಲ್ಲ. ಸಾಮಾನ್ಯ ನಂಬಿಕೆಯ ಪ್ರಕಾರ, ಮನೆಗೆ ಎರಡು ಕನ್ನಡಿಗಳು ಸಾಕು ಎಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಇಡಲು ಉತ್ತರ ಮತ್ತು ಪೂರ್ವ ದಿಕ್ಕುಗಳು ಅತ್ಯಂತ ಶ್ರೇಷ್ಠವಾಗಿವೆ. ಉತ್ತರ ದಿಕ್ಕು ಸಂಪತ್ತು ಮತ್ತು ಸಮೃದ್ಧಿಯ ಅಧಿಪತಿಯಾದ ಕುಬೇರನಿಗೆ ಸಂಬಂಧಿಸಿದ್ದರಿಂದ, ಇಲ್ಲಿ ಕನ್ನಡಿ ಇಡುವುದರಿಂದ ಆರ್ಥಿಕ ಪ್ರಗತಿಯಾಗುತ್ತದೆ. ಇನ್ನು ಪೂರ್ವ ದಿಕ್ಕು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುವ ದಿಕ್ಕಾಗಿದೆ. ಆದರೆ, ಎರಡು ಕನ್ನಡಿಗಳನ್ನು ಒಂದೇ ದಿಕ್ಕಿನಲ್ಲಿ ಪರಸ್ಪರ ಮುಖಾಮುಖಿಯಾಗಿ ಅಥವಾ ತೀರಾ ಹತ್ತಿರದಲ್ಲಿ ಇಡುವುದನ್ನು ತಪ್ಪಿಸಬೇಕು. ಇಂತಹ ಪ್ರತಿಬಿಂಬಗಳು ಮನೆಯ ಶಕ್ತಿಯಲ್ಲಿ ಅಸಮತೋಲನವನ್ನು ಉಂಟುಮಾಡುತ್ತವೆ.

ಮಲಗುವ ಕೋಣೆಯಲ್ಲಿ ಕನ್ನಡಿ ಇಡುವಾಗ ವಹಿಸಬೇಕಾದ ಎಚ್ಚರಿಕೆಗಳು:

ಮಲಗುವ ಕೋಣೆಯಲ್ಲಿ (Bedroom) ಕನ್ನಡಿಯನ್ನು ಇಡುವಾಗ ಅತ್ಯಂತ ಜಾಗರೂಕರಾಗಿರಬೇಕು. ನೀವು ಮಲಗುವಾಗ ನಿಮ್ಮ ದೇಹ ಅಥವಾ ಹಾಸಿಗೆಯು ಕನ್ನಡಿಯಲ್ಲಿ ಪ್ರತಿಫಲಿಸಬಾರದು. ವಾಸ್ತು ಶಾಸ್ತ್ರದ ಪ್ರಕಾರ, ಹಾಸಿಗೆಯ ಪ್ರತಿಬಿಂಬವು ಕನ್ನಡಿಯಲ್ಲಿದ್ದರೆ ಅದು ನಿದ್ರಾಹೀನತೆ ಮತ್ತು ದಂಪತಿಗಳ ನಡುವಿನ ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಬಹುದು. ಒಂದು ವೇಳೆ ನಿಮ್ಮ ರೂಮ್‌ನಲ್ಲಿ ಕನ್ನಡಿಯ ಸ್ಥಾನವನ್ನು ಬದಲಾಯಿಸಲು ಸಾಧ್ಯವಾಗದಿದ್ದರೆ, ರಾತ್ರಿ ಮಲಗುವ ಮುನ್ನ ಅದರ ಮೇಲೆ ಒಂದು ದಪ್ಪನೆಯ ಬಟ್ಟೆಯನ್ನು ಮುಚ್ಚುವುದು ಉತ್ತಮ ಪರಿಹಾರವಾಗಿದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಮುಖ್ಯ ದ್ವಾರದ ಬಳಿ ಕನ್ನಡಿ ಇಡುವ ಸರಿಯಾದ ನಿಯಮ:

ಮನೆಯ ಮುಖ್ಯ ಬಾಗಿಲಿಗೆ (Main Door) ತೀರಾ ನೇರವಾಗಿ ಕನ್ನಡಿಯನ್ನು ತೂಗಾಕಬಾರದು. ಏಕೆಂದರೆ, ಹೊರಗಿನಿಂದ ಮನೆಗೆ ಪ್ರವೇಶಿಸುವ ಸಕಾರಾತ್ಮಕ ಶಕ್ತಿಯನ್ನು ಈ ಕನ್ನಡಿಯು ಮತ್ತೆ ಹೊರಗೆ ಪ್ರತಿಫಲಿಸಿ ಕಳುಹಿಸುತ್ತದೆ ಎಂದು ನಂಬಲಾಗಿದೆ. ಆದರೆ, ಮುಖ್ಯ ಬಾಗಿಲಿನ ನೇರಕ್ಕೆ ಇಡುವ ಬದಲು, ಬಾಗಿಲಿನ ಪಕ್ಕದ ಗೋಡೆಯ ಮೇಲೆ ಕನ್ನಡಿಯನ್ನು ಇಡಬಹುದು. ಇದನ್ನು ವಾಸ್ತುನಲ್ಲಿ ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸಲು ನೆರವಾಗುತ್ತದೆ.

ಸ್ನಾನಗೃಹದ ಕನ್ನಡಿ ಮತ್ತು ಕನ್ನಡಿಗಳ ಸರಿಯಾದ ನಿರ್ವಹಣೆ:

ಸ್ನಾನಗೃಹದಲ್ಲೂ (Bathroom) ಸಹ ಹೆಚ್ಚು ಕನ್ನಡಿಗಳನ್ನು ಹಾಕುವುದನ್ನು ತಪ್ಪಿಸಬೇಕು, ಅಲ್ಲಿಗೆ ಒಂದು ಕನ್ನಡಿ ಸಾಕು. ಇದರ ಜೊತೆಗೆ ಮನೆಯಲ್ಲಿರುವ ಪ್ರತಿಯೊಂದು ಕನ್ನಡಿಯೂ ಯಾವಾಗಲೂ ಸ್ವಚ್ಛವಾಗಿರಬೇಕು. ಯಾವುದೇ ಕಾರಣಕ್ಕೂ ಬಿರುಕು ಬಿಟ್ಟ ಅಥವಾ ಒಡೆದುಹೋದ ಕನ್ನಡಿಗಳನ್ನು ಮನೆಯಲ್ಲಿ ಇಡಲೇಬಾರದು. ಇಂತಹ ಒಡೆದ ಕನ್ನಡಿಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಜಾಗದಲ್ಲಿ ಇರಿಸಲಾದ ಸ್ವಚ್ಛವಾದ ಕನ್ನಡಿ ಮಾತ್ರ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us