‘ಆ ಉದ್ಯಮಿಗೆ ಹೆಂಡತಿಯಾಗಿ ಇದ್ದರೆ ಸ್ಯಾಲರಿ ಕೊಡ್ತೀನಿ ಅಂದ್ರು’; ಕೆಲಸ ಇಲ್ಲದೆ ಗೋಳಾಡಿದ ನಟಿ

2010ರಿಂದ ಈಚೆಗೆ ಅವರಿಗೆ ಆಫರ್ ಕಡಿಮೆ ಆಯಿತು. ಅವರನ್ನು ಕೇವಲ ಸ್ಪೆಷಲ್ ಸಾಂಗ್​ಗೆ ಸೀಮಿತ ಮಾಡಲಾಯಿತು. ಈಗ ಕೈಯಲ್ಲಿ ಕೆಲಸ ಇಲ್ಲದೆ, ಹಣವೂ ಇಲ್ಲದೆ ಒದ್ದಾಡುತ್ತಿದ್ದಾರೆ.

‘ಆ ಉದ್ಯಮಿಗೆ ಹೆಂಡತಿಯಾಗಿ ಇದ್ದರೆ ಸ್ಯಾಲರಿ ಕೊಡ್ತೀನಿ ಅಂದ್ರು’; ಕೆಲಸ ಇಲ್ಲದೆ ಗೋಳಾಡಿದ ನಟಿ
ನೀತು ಚಂದ್ರ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 13, 2022 | 8:39 PM

ನಟಿ ನೀತು ಚಂದ್ರ (Nitu Chandra) ಅವರು ಬಾಲಿವುಡ್​ನಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಪುನೀತ್ ರಾಜ್​ಕುಮಾರ್ (Puneeth Rajkumar) ನಟನೆಯ ‘ಪವರ್’ ಸಿನಿಮಾದಲ್ಲಿ ವಿಶೇಷ ಹಾಡಿಗೆ ಅವರು ಹೆಜ್ಜೆ ಹಾಕಿದ್ದರು. ಸಾಕಷ್ಟು ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಆದರೆ, ಇಂದು ಅವರಿಗೆ ಸಿನಿಮಾ ಆಫರ್ ಸಿಗುತ್ತಿಲ್ಲ. ಈ ಕಾರಣಕ್ಕೆ ಅವರ ಬದುಕು ಕ್ಲಿಷ್ಟವಾಗಿದೆ. ಅಷ್ಟೇ ಅಲ್ಲ ಸಾಕಷ್ಟು ಅವಮಾನಗಳನ್ನು ಅವರು ಎದುರಿಸುವಂತಾಗಿದೆ. ಹೆಂಡತಿ ಆಗಿ ಇದ್ದರೆ ಸ್ಯಾಲರಿ ನೀಡುವ ಬಗ್ಗೆ ಉದ್ಯಮಿಯೊಬ್ಬರು ಅವರಿಗೆ ಆಫರ್ ಕೂಡ ನೀಡಿದ್ದರಂತೆ.

ನೀತು ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2003ರಲ್ಲಿ. ತೆಲುಗಿನ ‘ವಿಷ್ಣು’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. 2005ರಲ್ಲಿ ‘ಗರಂ ಮಸಾಲ’ ಚಿತ್ರದ ಮೂಲಕ ಹಿಂದಿಯಲ್ಲೂ ಮಿಂಚಿದರು. ನಂತರ ನೀತೂಗೆ ಹಲವು ಹಿಂದಿ ಆಫರ್​ಗಳು ಬಂದವು. 2010ರಿಂದ ಈಚೆಗೆ ಅವರಿಗೆ ಆಫರ್ ಕಡಿಮೆ ಆಯಿತು. ಅವರನ್ನು ಕೇವಲ ಸ್ಪೆಷಲ್ ಸಾಂಗ್​ಗೆ ಸೀಮಿತ ಮಾಡಲಾಯಿತು. ಈಗ ಕೈಯಲ್ಲಿ ಕೆಲಸ ಇಲ್ಲದೆ, ಹಣವೂ ಇಲ್ಲದೆ ಒದ್ದಾಡುತ್ತಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

‘ನನ್ನದು ಓರ್ವ ಯಶಸ್ವಿ ನಟಿಯ ವೈಫಲ್ಯದ ಕಥೆ. ಹಲವು ದೊಡ್ಡ ಚಿತ್ರಗಳಲ್ಲಿ ನಟಿಸಿದ ನನಗೆ ಇಂದು ಕೆಲಸವಿಲ್ಲ. ದೊಡ್ಡ ಉದ್ಯಮಿಯೊಬ್ಬರು ನನಗೆ ಆಫರ್ ಒಂದನ್ನು ನೀಡಿದ್ದರು. ಅವರ ಹೆಂಡತಿಯಾಗಿ ನಾನು ಇರಬೇಕು. ಇದಕ್ಕೆ ಅವರು ನನಗೆ ಸ್ಯಾಲರಿ ರೂಪದಲ್ಲಿ ತಿಂಗಳಿಗೆ 25 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದರು. ಈಗ ನನ್ನ ಬಳಿ ಹಣವೂ ಇಲ್ಲ, ಕೆಲಸವೂ ಇಲ್ಲ. ನಾನು ಚಿಂತೆಗೆ ಒಳಗಾಗಿದ್ದೇನೆ’ ಎಂದಿದ್ದಾರೆ ನೀತು.

‘ಓರ್ವ ಡೈರೆಕ್ಟರ್ ಅನ್ನು ಭೇಟಿ ಮಾಡಿದ್ದೆ. ಆಡಿಷನ್ ನೀಡಿದೆ. ಆಡಿಷನ್ ನೀಡಿದ ಒಂದು ಗಂಟೆಯಲ್ಲಿ ನನ್ನನ್ನು ರಿಜೆಕ್ಟ್ ಮಾಡಲಾಯಿತು. ಯಾಕೋ ವರ್ಕೌಟ್ ಆಗುತ್ತಿಲ್ಲ ಅನಿಸುತ್ತಿದೆ ಎಂದು ನಿರ್ದೇಶಕರು ನೇರವಾಗಿ ಹೇಳಿದರು’ ಎಂದಿದ್ದಾರೆ ನೀತು.

ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್ ಬಗ್ಗೆ ಸುದೀಪ್ ಮಾತು; ಲೀಕ್ ಆಯ್ತು ಲುಕ್

ನೀತು ಅವರು ಸದ್ಯ ಹಾಲಿವುಡ್​ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. 2021ರಲ್ಲಿ ತೆರೆಗೆ ಬಂದ ‘ನೆವರ್​ ಬ್ಯಾಕ್​ ಡೌನ್​: ರಿವೋಲ್ಟ್​​​’ ಸಿನಿಮಾದಲ್ಲಿ ಅವರು ನಟಿಸಿದರು. ಆದರೆ, ಅವರ ವೃತ್ತಿ ಜೀವನದಲ್ಲಿ ಈ ಚಿತ್ರ ಯಾವುದೇ ಬದಲಾವಣೆ ಮಾಡಿಲ್ಲ.

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ