ಮೊದಲ ದಿನ ಕೆಲಸಕ್ಕೆ ಹೋದ ನರ್ಸ್​ ಮರುದಿನ ಹಾಸ್ಪಿಟಲ್​​ನಲ್ಲಿ ಶವವಾಗಿ ಪತ್ತೆ; ರೇಪ್​ ಆ್ಯಂಡ್​ ಮರ್ಡರ್​ ಎಂದು ದೂರು ಕೊಟ್ಟ ಕುಟುಂಬ

, ಮಹಿಳೆಯ ಶವವನ್ನು ಪೋಸ್ಟ್​ಮಾರ್ಟಮ್​​ಗೆ ಕಳಿಸಲಾಗಿದೆ. ಕುಟುಂಬದವರು ಇದು ರೇಪ್​ ಆ್ಯಂಡ್ ಮರ್ಡರ್​ ಎಂದೇ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಮೊದಲ ದಿನ ಕೆಲಸಕ್ಕೆ ಹೋದ ನರ್ಸ್​ ಮರುದಿನ ಹಾಸ್ಪಿಟಲ್​​ನಲ್ಲಿ ಶವವಾಗಿ ಪತ್ತೆ; ರೇಪ್​ ಆ್ಯಂಡ್​ ಮರ್ಡರ್​ ಎಂದು ದೂರು ಕೊಟ್ಟ ಕುಟುಂಬ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: May 01, 2022 | 10:32 AM

ನರ್ಸಿಂಗ್​ ಹೋಂವೊಂದರಲ್ಲಿ ಕೆಲಸ ಸಿಕ್ಕು, ಮೊದಲ ದಿನ ಕೆಲಸಕ್ಕೆಂದು ಹೋದ ನರ್ಸ್​ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.    ಶುಕ್ರವಾದ ಈಕೆಯದ್ದು ಕೆಲಸದ ಮೊದಲ ದಿನ ಆಗಿತ್ತು. ಅಂದು ಆಸ್ಪತ್ರೆಗೆ ಹೋದವಳು ಶನಿವಾರ ಇವರ ದೇಹ ನರ್ಸಿಂಗ್​ಹೋಂನ ಗೋಡೆಗೆ ನೇಣುಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿತ್ತು. ಅಂದರೆ ಅದೇ ಗೋಡೆಯ ಮೇಲಿದ್ದ ಕಿಟಕಿಗೆ ಹಗ್ಗಕಟ್ಟಲಾಗಿದ್ದು, ನರ್ಸ್​ ಶವ ಗೋಡೆಗೆ ಇಳಿಬಿಟ್ಟಂತೆ ನೇತಾಡುತ್ತಿದೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬುದು ಮೃತ ನರ್ಸ್​ ಕುಟುಂಬದವರ ಆರೋಪ. ನಮ್ಮ ಮನೆ ಮಗಳನ್ನು ಅತ್ಯಾಚಾರ ಮಾಡಿ, ಬಳಿಕ ಹತ್ಯೆ ಮಾಡಲಾಗಿದೆ ಎಂದು ಹೇಳುತ್ತಿರುವ ಪಾಲಕರು, ನರ್ಸಿಂಗ್​ ಹೋಂನ ಆಡಳಿತಾಧಿಕಾರಿ ಸೇರಿ ಮೂವರ ಹೆಸರನ್ನು ಉಲ್ಲೇಖಿಸಿದ್ದಾರೆ. ಸದ್ಯ ಎಫ್​ಐಆರ್ ದಾಖಲಾಗಿದೆ.

ಘಟನೆ ನಡೆದದ್ದು ಉತ್ತರ ಪ್ರದೇಶದ ಉನ್ನಾವೋದಲ್ಲಿರುವ ನ್ಯೂ ಜೀವನ್​ ಹಾಸ್ಪಿಟಲ್​​ನಲ್ಲಿ. ಉನ್ನಾವೋ ಹೆಚ್ಚುವರಿ ಎಸ್​​ಪಿ ಶಶಿ ಶೇಖರ್​ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮಹಿಳೆಯ ಶವವನ್ನು ಪೋಸ್ಟ್​ಮಾರ್ಟಮ್​​ಗೆ ಕಳಿಸಲಾಗಿದೆ. ಕುಟುಂಬದವರು ಇದು ರೇಪ್​ ಆ್ಯಂಡ್ ಮರ್ಡರ್​ ಎಂದೇ ದೂರು ನೀಡಿದ್ದಾರೆ. ಅವರು ಹೇಳಿದ ಹೆಸರಿನ ಮೂವರ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ಪ್ರಕರಣ ಸಾಬೀತಾದರೆ ಖಂಡಿತ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು  ತಿಳಿಸಿದ್ದಾರೆ.

ಉನ್ನಾವೋದಲ್ಲಿ ಇದೇ ಮೊದಲಲ್ಲ. ಈ ಹಿಂದೆಯೂ ನಡೆದ ಅತ್ಯಾಚಾರ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದವು. ಉನ್ನಾವೋದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಕೇಸ್​ಗೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕನಾಗಿದ್ದ ಕುಲದೀಪ್​ ಸಿಂಗ್​ ಸೇಂಗರ್​ ತಲೆದಂಡವಾಗಿದ್ದು ನೆನಪಿರಬಹುದು. ಈಗ ಇದೂ ಕೂಡ ಅತ್ಯಾಚಾರವೆಂಬುದೇ ಪಾಲಕರ ಬಲವಾದ ಆರೋಪ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಆಕೆಯ ಶವ ಪತ್ತೆಯಾಗುತ್ತಿದ್ದಂತೆ ಅಪಾರ ಪ್ರಮಾಣದಲ್ಲಿ ಜನರು ಸೇರಿದ್ದಾರೆ. ಅನೇಕರು ಫೋಟೋ, ವಿಡಿಯೋಗಳನ್ನೂ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: Ramadan Eid 2022 Decoration Ideas: ರಂಜಾನ್ ಹಬ್ಬಕ್ಕೆ ನಿಮ್ಮ ಮನೆಯನ್ನು ಮತ್ತಷ್ಟು ಸುಂದರ ಹಾಗೂ ಹಬ್ಬದ ಕಳೆ ತರಿಸಲು ಇಲ್ಲಿದೆ ಐಡಿಯಾ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್