ವಿಜಯನಗರ: ಬೇವಿನಹಳ್ಳಿ ತಾಂಡದ ಬಳಿ ಜಿಮ್ ಟ್ರೈನರ್ ಧನ್ಯಕುಮಾರ್ ಬರ್ಬರ ಹತ್ಯೆ (Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿದ ಮೂವರು ಆರೋಪಿಗಳ ಬಂಧನ ಮಾಡಲಾಗಿದೆ. ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಬೇವಿನಹಳ್ಳಿ ತಾಂಡದ ಬಳಿ ಕಳೆದ ಮೂರು ದಿನಗಳ ಹಿಂದೆ ಕೊಲೆ ನಡೆದಿತ್ತು. ರವಿ (24), ಮಲ್ಲಿಕಾರ್ಜುನ(25), ಸುದೀಪ್(21) ಬಂಧಿತ ಆರೋಪಿಗಳು. ಎರಡು ರೌಡಿಗಳ ಗುಂಪುಗಳ ವಿಚಾರಕ್ಕೆ ಕೊಲೆ ನಡೆಸಲಾಗಿದೆ. ಆ ಬ್ಯಾಚ್ ಬೆಳೆಯುತ್ತಿದೆ, ಅವರ ಜತೆ ಧನ್ಯಕುಮಾರ್ ಬೆಳೆಯಬಾರದು ಅಂತ ಕೊಲೆ ಮಾಡಲಾಗಿದ್ದು, ಇದು ಪ್ರಾಥಮಿಕ ಹಂತದಲ್ಲಿ ತಿಳಿದು ಬಂದಿದೆ. ಇನ್ನೂ ತನಿಖೆ ನಡೆಯುತ್ತಿದೆ, ಇನ್ನೂ ಈ ಕೇಸ್ನಲ್ಲಿ ಬೇರೆಯವರಿದ್ದಾರೆ ಅಂತ ಮಾಹಿತಿ ಇದೆ. ಹರಪನಹಳ್ಳಿ ಡಿವೈಎಸ್ಪಿ, ಸಿಪಿಐ, ಮತ್ತು ಹರಪನಹಳ್ಳಿ, ಅರಸಿಕೇರೆ, ಹಲವಾಗಲು ಪಿಎಸ್ಐಗಳ ನೇತೃತ್ವದಲ್ಲಿ ತಂಡ ಮಾಡಲಾಗಿತ್ತು. ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಮೂರು ದಿನಗಳ ಹಿಂದೆ ಸ್ನೇಹಿತರ ಜೊತೆ ಊಟಕ್ಕೆ ಹೋಗಿದ್ದಾಗ ಬರ್ಬರ ಹತ್ಯೆ ಮಾಡಲಾಗಿತ್ತು. ಅರಸಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಮಾಡಲಾಗಿದೆ ಎಂದು ವಿಜಯನಗರ ಎಸ್ಪಿ ಡಾ.ಅರುಣ್ ಕೆ ಹೇಳಿಕೆ ನೀಡಿದ್ದಾರೆ.
ಟ್ರ್ಯಾಕ್ಟರ್ ಮೇಲಿದ್ದ ಬಿದ್ದು ಬಾಲಕ ಸಾವು:
ಕಲಬುರಗಿ: ಇಂದು ಮಧ್ಯಾಹ್ನ ಟ್ರ್ಯಾಕ್ಟರ್ ಮೇಲಿದ್ದ ಬಿದ್ದು ಬಾಲಕ ಗಾಯಗೊಂಡಿದ್ದ. ನೆಲೋಗಿಯಲ್ಲಿರೋ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಾಲಕನನ್ನು ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಅಲ್ಲಿ ವೈದ್ಯರು ಇರದೇ ಇದ್ದಿದ್ದರಿಂದ ಜೇವರ್ಗಿಗೆ ಕಳುಹಿಸಲಾಗಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಬಾಲಕ ಗುರು ಮಂಗಾ (10) ಮೃತಪಟ್ಟಿದ್ದಾನೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಇರೋದೆ ಬಾಲಕನ ಸಾವಿಗೆ ಕಾರಣ ಅಂತ ಆರೋಪಿಸಿ ಕುಟುಂಬಸ್ಥರು, ಮತ್ತು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಆರೋಗ್ಯ ಕೇಂದ್ರ ಕ್ಕೆ ಮುಳ್ಳು ಹಚ್ಚಿ, ಟೈರ್ಗೆ ಬೆಂಕಿ ಹಚ್ಚಿದ್ದಾರೆ. ಆರೋಗ್ಯ ಕೇಂದ್ರದ ಮುಂದಿದ್ದ ಆ್ಯಂಬುಲೆನ್ಸ್ಗೆ ಜನರು ಕಲ್ಲೆಸೆದಿದ್ದಾರೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ:
ಬಾಗಲಕೋಟೆ: ಸಿಡಿಲು ಬಡಿದು ತೆಂಗಿನಮರ ಹೊತ್ತಿ ಉರಿದಿರುವಂತಹ ಘಟನೆ ಹಿರೆಶಿವನಗುತ್ತಿ ಗ್ರಾಮದಲ್ಲಿ ನಡೆದಿದೆ. ಸಿದ್ದಯ್ಯ ಹಿರೆಮಠ ಎಂಬುವರ ತೆಂಗಿನ ಮರ. ಕೆಲ ಹೊತ್ತು ಜನರಿಗೆ ಗಾಬರಿ ಹುಟ್ಟಿಸಿದ್ದು, ಬೆಂಕಿ ನೋಡಲು ಜನರು ಜಮಾಯಿಸಿದ್ದರು. ತೆಂಗಿನ ಮರಕ್ಕೆ ನೀರು ಹೊಡೆದು ಗ್ರಾಮಸ್ಥರು ಬೆಂಕಿ ಆರಿಸಿದ್ದಾರೆ.
ಅಂತರರಾಜ್ಯ ಕನ್ನಾ ಕಳ್ಳನ ಬಂಧನ
ಬಳ್ಳಾರಿ: ಅಂತರರಾಜ್ಯ ಕನ್ನಾ ಕಳ್ಳನ ಬಂಧನ ಮಾಡಲಾಗಿದೆ. ರಾಯಚೂರಿನ ಕಾಳಿದಾಸ ನಗರದ ಅಮರ್ ಸಿಂಗ್ ಟಾಕ್ ಬಂಧಿತ ಆರೋಪಿ. ಮನೆ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಆರೋಪಿ ಬಂಧನ ಮಾಡಲಾಗಿದ್ದು, ಬಂಧಿತನಿಂದ 4,60.000 ಮೌಲ್ಯದ ಬಂಗಾರ 92 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಸಂಡೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕಿ ಮಾಡಿ