ಬಾಬು ಜಗಜೀವನ ರಾಮ್ ಕಾರ್ಯಕ್ರಮದಲ್ಲಿ ರಸ್ತೆ ಅಡ್ಡಗಟ್ಟಿಬಿಟ್ಟಿದ್ದ ಜನರನ್ನು ಸಿದ್ದರಾಮಯ್ಯ ಗದರಿದ್ದು!
ಗಮನಿಸಬೇಕಾದ ಸಂಗತಿಯೆಂದರೆ ಗುಂಪಿನಲ್ಲಿದ್ದ ಕೆಲವರ ಹೆಸರುಗಳು ಸಿದ್ದಾರಾಮಯ್ಯನವರಿಗೆ ಗೊತ್ತಿದ್ದಿದ್ದು! ದಾಕ್ಷಿಣ್ಯ ತೋರದೆ, ಏಯ್ ಸರಿಯಪ್ಪ, ಏಯ್ ಹಿಂದೆ ಹೋಗಪ್ಪ, ಅಮ್ಮ ತಾಯಿ ನೀನು ಕೂತ್ಕೊಳ್ಳಮ್ಮ, ಏಯ್ ತಿಮ್ಮಯ್ಯ ಹಿಂದೆ ಹೀಗೆ ಅವರು ಗದರುವುದನ್ನು ಕೇಳಿಸಿಕೊಳ್ಳಬಹುದು.
Mysuru: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ವಿಧಾನಸಭೆಯಲ್ಲಿ ಕಲಾಪ ನಡೆಯುವಾಗ ಆಡಳಿತ ಪಕ್ಷದವರನ್ನು ತರಾಟೆಗೆ ತೆಗೆದುಕೊಳ್ಳುವ ಹಾಗೆ ಸಾರ್ವಜನಿಕ ಸಭೆಯಲ್ಲಿ ಜನರು ಗಲಾಟೆ ಮಾಡುತ್ತಿದ್ದರೆ ಅಥವಾ ರಸ್ತೆ ಬ್ಲಾಕ್ ಮಾಡಿಕೊಂಡು ನಿಂತಿದ್ದರೆ ಅವರನ್ನೂ ಗದರಿಯೂ ಬಿಡುತ್ತಾರೆ. ಅಂಥದೊಂದು ಘಟನೆ ಶನಿವಾರ ಮೈಸೂರಲ್ಲಿ ಹಸಿರು ಕ್ರಾಂತಿ ಹರಿಕಾರ (green revolution) ಮಾಜಿ ಉಪ ಪ್ರಧಾನ ಮಂತ್ರಿ ಬಾಬು ಜಗಜೀವನ್ ರಾಮ್ (Babu Jagjivan Ram) ಸ್ಮರಣಾರ್ಥ ಆಯೋಜಿಲಾಗಿದ್ದ ಕಾರ್ಯಕ್ರಮದಲ್ಲಿ ನಡೆಯಿತು. ಸಭೆಯಲ್ಲಿ ಸಾವಿರಾರು ಜನ ಜಮಾಯಿಸಿದ್ದರು. ಆದರೆ ಜನರ ಗುಂಪಿನಿಂದಾಗಿ ವೇದಿಕೆ ಎದುರುಗಡೆಯಿದ್ದ ರಸ್ತೆ ಬ್ಲಾಕ್ ಅಗಿತ್ತು ಮತ್ತು ಸ್ವಲ್ಪ ಜನ ವೇದಿಕೆಯ ತೀರ ಮುಂಭಾಗದಲ್ಲಿ ನಿಂತು ಕಿರುಚಾಡುತ್ತಿದ್ದರು. ಅವರಲ್ಲಿ ಮಹಿಳೆಯರು ಮತ್ತು ಯುವಕರು ಸಹ ಸೇರಿದ್ದರು.
ರಸ್ತೆಯನ್ನು ಬ್ಲಾಕ್ ಮಾಡಬೇಡಿ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತದೆ ಅಂತ ನಿರೂಪಕರು ಪದೇಪದೆ ಹೇಳುತ್ತಿದ್ದರೂ ಜನ ಕ್ಯಾರೆ ಅನ್ನಲಿಲ್ಲ. ಆಗಲೇ ಸಿದ್ದರಾಮಯ್ಯನವರು ಮೈಕನ್ನು ತಮ್ಮ ಕೈಗೆತ್ತಿಕೊಂಡು ಜನರನ್ನು ಗದರಲಾರಂಭಿಸಿದರು. ಗಮನಿಸಬೇಕಾದ ಸಂಗತಿಯೆಂದರೆ ಗುಂಪಿನಲ್ಲಿದ್ದ ಕೆಲವರ ಹೆಸರುಗಳು ಸಿದ್ದಾರಾಮಯ್ಯನವರಿಗೆ ಗೊತ್ತಿದ್ದಿದ್ದು! ದಾಕ್ಷಿಣ್ಯ ತೋರದೆ, ಏಯ್ ಸರಿಯಪ್ಪ, ಏಯ್ ಹಿಂದೆ ಹೋಗಪ್ಪ, ಅಮ್ಮ ತಾಯಿ ನೀನು ಕೂತ್ಕೊಳ್ಳಮ್ಮ, ಏಯ್ ತಿಮ್ಮಯ್ಯ ಹಿಂದೆ ಹೀಗೆ ಅವರು ಗದರುವುದನ್ನು ಕೇಳಿಸಿಕೊಳ್ಳಬಹುದು.
ಅವರ ಗದರಿಕೆಯ ಬಳಿಕವೇ ಜನ ದಾರಿಯಲ್ಲಿ ನಿಂತವರು ದಾರಿ ಬಿಟ್ಟು ಸರಿದಾರಿಗೆ ಬರುತ್ತಾರೆ! ವೇದಿಕೆಯ ಮೇಲಿರುವ ನಿರೂಪಕಿ ಸಿದ್ದರಾಮಯ್ಯನವರನ್ನು ಕುರಿತು, ‘ನಮ್ಮ ಸಾಹೇಬರದ್ದು ಮಾತು ಮಾತ್ರ ಒರಟು ಆದರೆ ಮನಸ್ಸು ಬೆಣ್ಣೆಯಂತೆ ಮೃದು,’ ಅನ್ನುತ್ತಾರೆ.
ಇದನ್ನೂ ಓದಿ: ಸಿದ್ದರಾಮಯ್ಯನವರ ಆಶೀರ್ವಾದದಿಂದಲೇ ಹುಬ್ಬಳ್ಳಿ ಗಲಭೆ ಆರೋಪಿತರ ಕುಟುಂಬಗಳಿಗೆ ಜಮೀರ್ ಸಹಾಯ ಮಾಡುತ್ತಿದ್ದಾರೆ: ಪ್ರತಾಪ್ ಸಿಂಹ