ಜಮೀರ್ ಸರ್ಕಾರ-ವಿರೋಧಿ ಚಟುವಟಿಕೆ ಮಾಡ್ತಾನ, ಒದ್ದು ಒಳಗ ಹಾಕ್ರಲಾ! ಎಂದರು ಬಸನಗೌಡ ಪಾಟೀಲ ಯತ್ನಾಳ್
ಅಸಲಿಗೆ ಅವನಿಗೆ ನಮ್ಮ ನಾಯಕದ್ದೇ ಸಲುಗೆ ಜಾಸ್ತಿಯಾಗಿದೆ. ಅವನೊಂದಿಗೆ ಅಡ್ಜಸ್ಟ್ ಮೆಂಟ್ ಇಟ್ಟುಕೊಂಡಿರುವ ನಾಯಕರು ನಮ್ಮಲ್ಲಿದ್ದಾರೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದವರಿಗೆ ಇವನು ಸಹಾಯ ಮಾಡುತ್ತಾನೆಂದರೆ ಒದ್ದು ಒಳಗೆ ಹಾಕಬೇಕು ತಾನೇ? ಎಂದರು ಬಿಜೆಪಿ ಶಾಸಕ.
Vijyapura: ಬಿಜೆಪಿಯ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ವಿರೋಧ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುವಾಗ ಅವರೊಂದಿಗೆ ತಮ್ಮ ಪಕ್ಷದವರದನ್ನೂ ಸೇರಿಸಿಕೊಳ್ಳುತ್ತಾರೆ. ಅಂದರೆ ತೆಗಳುವಿಕೆಯಲ್ಲಿ ಅವರ ಪಕ್ಷಬೇಧ ಮಾಡುವುದಿಲ್ಲ! ಶನಿವಾರ ವಿಜಯಪುರನಲ್ಲಿ ಪತ್ರಕರ್ತರು ಯತ್ನಾಳ್ ಅವರಿಗೆ ಹುಬ್ಬಳ್ಳಿ ಗಲಭೆ (Hubballi Riots) ಆರೋಪಿತರ ಕುಟುಂಬಗಳಿಗೆ ಧನಸಹಾಯ ಮಾಡುತ್ತಿರುವುದನ್ನು ಗಮನಕ್ಕೆ ತಂದಾಗ ಹಿಂದೂ ವಿರೋಧಿ ಕೆಲಸಗಳನ್ನು ಮಾಡುವುದೇ ಜಮೀರ್ ಅಹ್ಮದ್ ನ (Zameer Ahmed) ಜಾಯಮಾನ. ನಮ್ಮ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪೋಲಿಸ್ ಠಾಣೆಗೆ ಬೆಂಕಿ ಹಚ್ಚುವ ಜನರಿಗೆ ಹಣ ಸಹಾಯ ಮಾಡುತ್ತಾನೆ, ಜೈಲಿಗೆ ಹೋಗಿ ಅವರನ್ನು ಸನ್ಮಾನಿಸುತ್ತಾನೆ. ಇಷ್ಟೆಲ್ಲ ಅವನು ಮಾಡುತ್ತಿದ್ದರೂ ಗೃಹಸಚಿವರು ಸುಮ್ಮನಿರೋದು ಯಾಕೆ? ಎಂದು ಯತ್ನಾಳ್ ಕೇಳಿದರು.
ಅಸಲಿಗೆ ಅವನಿಗೆ ನಮ್ಮ ನಾಯಕದ್ದೇ ಸಲುಗೆ ಜಾಸ್ತಿಯಾಗಿದೆ. ಅವನೊಂದಿಗೆ ಅಡ್ಜಸ್ಟ್ ಮೆಂಟ್ ಇಟ್ಟುಕೊಂಡಿರುವ ನಾಯಕರು ನಮ್ಮಲ್ಲಿದ್ದಾರೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದವರಿಗೆ ಇವನು ಸಹಾಯ ಮಾಡುತ್ತಾನೆಂದರೆ ಒದ್ದು ಒಳಗೆ ಹಾಕಬೇಕು ತಾನೇ? ಸಿದ್ದರಾಮಯ್ಯನವರೇ ಅವನ ಕೈಬಿಟ್ಟಿದ್ದಾರೆ, ನಿನ್ನೆ ಜಮೀರ್ ಕೃತ್ಯದ ಬಗ್ಗೆ ಕೇಳಿದಾಗ ಅವರು ಏನೂ ಪ್ರತಿಕ್ರಿಯೆ ನೀಡಲಿಲ್ಲ ಎಂದು ಯತ್ನಾಳ್ ಹೇಳಿದರು.
ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ನನ್ನು ದೇಶವಿರೋಧಿ ಚಟುವಟಿಕೆಗಳ ಅರೋಪದಲ್ಲಿ ಜೈಲಿಗೆ ಹಾಕಲಾಗಿದೆ. ಜಮೀರ್ ನನ್ನು ಹಾಕಿಲ್ಲ, ಯಾಕೆಂದರೆ, ಬಿಜೆಪಿ ಒಬ್ಬ ಮಹಾನಾಯಕನ ಬೆಂಬಲ ಅವನಿಗಿದೆ. ನನ್ನನ್ನು ಕೇಳಿದರೆ ಜಮೀರ್ ವಿರುದ್ಧ ತನಿಖೆ ನಡೆಸಬೇಕು ಮತ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಇದನ್ನೂ ಓದಿ: ಮೀಸಲಾತಿ ವಿಚಾರದಲ್ಲಿ ಯತ್ನಾಳ್ ಮಾತಾಡಿದಂತೆ ನಾನು ಮಾತಾಡಲು ಬರಲ್ಲ, ನಾನು ಸರ್ಕಾರದ ಭಾಗ; ಸಚಿವ ಮುರಗೇಶ ನಿರಾಣಿ