ಮೀಸಲಾತಿ ವಿಚಾರದಲ್ಲಿ ಯತ್ನಾಳ್ ಮಾತಾಡಿದಂತೆ ನಾನು ಮಾತಾಡಲು ಬರಲ್ಲ, ನಾನು ಸರ್ಕಾರದ ಭಾಗ; ಸಚಿವ ಮುರಗೇಶ ನಿರಾಣಿ

ಮೀಸಲಾತಿ ವಿಚಾರದಲ್ಲಿ ಯತ್ನಾಳ್ ಮಾತಾಡಿದಂತೆ ನಾನು ಮಾತಾಡಲು ಬರಲ್ಲ, ನಾನು ಸರ್ಕಾರದ ಭಾಗ; ಸಚಿವ ಮುರಗೇಶ ನಿರಾಣಿ
ಸಚಿವ ಮುರಗೇಶ ನಿರಾಣಿ

ಪಿಎಸ್​ಐ ನೇಮಕಾತಿಯಲ್ಲಿ ಗೋಲ್ ವಿಚಾರದಲ್ಲಿ ಸರ್ಕಾರ ಸ್ಪಷ್ಟವಾಗಿದೆ. ಯಾವುದೇ ಹಸ್ತಕ್ಷೇಪವಿಲ್ಲದೇ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾವುದೇ ಪಕ್ಷ, ಯಾವುದೇ ಜಾತಿ ವ್ಯಕ್ತಿಗಳು ಇದ್ದರು ಸಹ ಅವರನ್ನ ಬಿಡುವ ಪ್ರಶ್ನೆಯೇ ಇಲ್ಲ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 24, 2022 | 3:51 PM

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ (Reservation) ವಿಚಾರದಲ್ಲಿ ಒಬ್ಬೊಬ್ಬ ನಾಯಕರು ಒಂದೊಂದು ರೀತಿಯಲ್ಲಿ ಹೋರಾಟದಲ್ಲಿ ತೊಡಗಿದ್ದಾರೆ. ಕೆಲವರು ಕೋಕೋ, ಕಬಡ್ಡಿ ಆಡುತ್ತಿದ್ದರೆ, ಇನ್ನೂ ಕೆಲವರು ಚೆಸ್ ಆಡುತ್ತಿದ್ದಾರೆ ಎಂದು ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಗುರುಪೀಠದಲ್ಲಿ ಸಚಿವ ಮುರಗೇಶ ನಿರಾಣಿ ಶಾಸಕ ಯತ್ನಾಳ್​ಗೆ ಟಾಂಗ್ ನೀಡಿದರು. ಸದನದಲ್ಲಿ ಮೀಸಲಾತಿ ವಿಚಾರದಲ್ಲಿ ಯತ್ನಾಳ್ ಮಾತಾಡಿದಂತೆ ನಾನು ಮಾತಾಡಲು ಬರಲ್ಲ. ನಾನು ಸರ್ಕಾರದ ಭಾಗ. ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿ ಇದ್ದೇನೆ. ಆ ರೀತಿ ಬೀದಿಗಿಳಿದು ಹೋರಾಟ ಮಾಡಲು ಸಾದ್ಯವಿಲ್ಲ. ಎಲ್ಲ ಲಿಂಗಾಯತರು ಒಂದಾಗ ಬೇಕು ಎಂಬುದು ನಮ್ಮ ಆಶಯ ಕೂಡಾ ಇದೆ ಎಂದು ಹೇಳಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರವಾಗಿ ಈಗಾಗಲೇ ಸಮೀಕ್ಷೆ ಆರಂಭವಾಗಿದೆ‌. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ವರದಿ ನೀಡಲಿದ್ದಾರೆ. ಈ ವರದಿ ಬಂದ ಬಳಿಕ ಇದರ ಬಗ್ಗೆ ಸಿಎಂ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಸಮೀಕ್ಷೆ ನಡೆಯುತ್ತಿದೆ. ಎಲ್ಲ ಲಿಂಗಾಯತ ಒಳಪಂಗಡಗಳ ಬಗ್ಗೆ ಸಮೀಕ್ಷೆ ಆಗುತ್ತಿದೆ. ಎಲ್ಲ ಲಿಂಗಾಯತರಿಗೆ ಕೇಂದ್ರ ಸರ್ಕಾರದಲ್ಲಿ ಓಬಿಸಿಗೆ ಸೇರ್ಪಡೆ ಆಗಬೇಕು ಎಂದು ಹೇಳಿದರು.

ಪಿಎಸ್​ಐ ನೇಮಕಾತಿಯಲ್ಲಿ ಗೋಲ್​ಮಾಲ್ ವಿಚಾರದಲ್ಲಿ ಸರ್ಕಾರ ಸ್ಪಷ್ಟವಾಗಿದೆ. ಯಾವುದೇ ಹಸ್ತಕ್ಷೇಪವಿಲ್ಲದೇ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾವುದೇ ಪಕ್ಷ, ಯಾವುದೇ ಜಾತಿ ವ್ಯಕ್ತಿಗಳು ಇದ್ದರು ಸಹ ಅವರನ್ನ ಬಿಡುವ ಪ್ರಶ್ನೆಯೇ ಇಲ್ಲ. ಇಂತಹ ವಿಚಾರ ಇಟ್ಟುಕೊಂಡು ಗೃಹ ಸಚಿವರನ್ನ ಬದಲಾಯಿಸಬೇಕು ಎಂಬುದು ಸರಿಯಲ್ಲ. ಮೇಲಾಗಿ ಆರಗಜ್ಞಾನೇಂದ್ರ ಅವರು ಅನುಭವಿ ನಾಯಕರು. ಯಡಿಯೂರಪ್ಪ, ಅನಂತಕುಮಾರ ಜೊತೆ ಇದ್ದವರು‌. ಸಮರ್ಥವಾಗಿ ಗೃಹ ಖಾತೆ ನಿರ್ವಹಣೆ ಮಾಡುತ್ತಿದ್ದಾರೆ. ಇಷ್ಟಕ್ಕೂ ಸಚಿವ ಬದಲಾವಣೆ ಮುಖ್ಯಮಂತ್ರಿ ಪರಮಾಧಿಕಾರ. ಅವಧಿಗೂ ಮುನ್ನ ಚುನಾವಣೆ ನಡೆಯುವುದು ಸಾದ್ಯತೆ ಇಲ್ಲಾ. 2023ಕ್ಕೆ ವಿಧಾನ ಸಭೆ ಚುನಾವಣೆ ನಡೆಯಲಿದೆ. ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ಹಾಗೂ ಹೈಕಮಾಂಡ ತಿರ್ಮಾಣ ಮಾಡುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ;

ಪ್ರಿಯಾಂಕ್​ ಖರ್ಗೆಯನ್ನು ತನಿಖೆಗೆ ಒಳಪಡಿಸಬೇಕು; ಸಚಿವ ಸುನೀಲ್ ಕುಮಾರ್ ಆಗ್ರಹ

ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ರಾಜಕೀಯ ಕೊಲೆಗಳಾಗಿದ್ವು: ಸಿದ್ದು ವಿರುದ್ಧ ಎಚ್​ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ

Follow us on

Related Stories

Most Read Stories

Click on your DTH Provider to Add TV9 Kannada