ಮಸೀದಿ ಒಳ ನುಗ್ಗಿ ಅತ್ಯಾಚಾರಕ್ಕೆ ಯತ್ನ: ಮರ್ಮಾಂಗ ತೋರಿಸಿ ಅಸಭ್ಯ ವರ್ತನೆ, ಉಳ್ಳಾಲ ಪೊಲೀಸರಿಂದ ಆರೋಪಿ ಬಂಧನ

ಮಸೀದಿ ಒಳ ನುಗ್ಗಿ ಅತ್ಯಾಚಾರಕ್ಕೆ ಯತ್ನ: ಮರ್ಮಾಂಗ ತೋರಿಸಿ ಅಸಭ್ಯ ವರ್ತನೆ, ಉಳ್ಳಾಲ ಪೊಲೀಸರಿಂದ ಆರೋಪಿ ಬಂಧನ
ಸುಜಿತ್ ಶೆಟ್ಟಿ(26) ಬಂಧಿತ ಆರೋಪಿ

11 ಹುಡುಗಿಯರ ಜೊತೆ ಅಶ್ಲೀಲ ಸೆಲ್ಫಿ ತೆಗೆದು 2018ರಲ್ಲಿ ಹೋಮ್ ಗಾರ್ಡ್ ಕೆಲಸದಿಂದ ಅಮಾನತ್ತಾಗಿದ್ದ. ಲಾಡ್ಜ್ ಸೇರಿದಂತೆ ವಿವಿಧ ಕಡೆ ಸೆಲ್ಫಿ ತೆಗೆದು ವೈರಲ್ ಮಾಡಿದ್ದ. ಹಾಗಾಗಿ ಅಂದು ಸಸ್ಪೆಂಡ್ ಮಾಡಲಾಗಿತ್ತು. 

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 30, 2022 | 6:08 PM

ಮಂಗಳೂರು: ಮಸೀದಿ ಒಳಗೆ ನುಗ್ಗಿ ಅತ್ಯಚಾರಕ್ಕೆ (Rape) ಯತ್ನಿಸಿದ್ದ ಆರೋಪಿಯನ್ನು ಮಂಗಳೂರಿನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ನಿಟ್ಟೆ ನಿವಾಸಿ ಸುಜಿತ್ ಶೆಟ್ಟಿ(26) ಬಂಧಿತ ಆರೋಪಿ. ಏ.29ರಂದು ಬೆಳಗಿನ ಜಾವ 2 ಗಂಟೆಗೆ ಮಸೀದಿಗೆ ನುಗ್ಗಿದ್ದು, ಮಹಿಳೆಯರು ನಮಾಜ್ ಮಾಡುತ್ತಿದ್ದ ಕೊಠಡಿಗೆ ನುಗ್ಗಿ ಕೃತ್ಯ ಎಸಗಿದ್ದಾನೆ. ವಿಶೇಷ ಕಾರ್ಯಕ್ರಮ ಅಂಗವಾಗಿ ರಾತ್ರಿಯಿಡೀ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಮೂರ್ನಾಲ್ಕು ಜನ ಮಹಿಳೆ-ಯುವತಿಯರಿದ್ದ ಕಡೆ ನುಗ್ಗಿ, ತನ್ನ ಮರ್ಮಾಂಗ ತೋರಿಸಿ ಅಸಭ್ಯ ವರ್ತನೆ ಮಾಡಿದ್ದಾನೆ. ಈ ಸುಜಿತ್ ಶೆಟ್ಟಿ ಅಂತಿಂತಾ ಕಾಮುಕನಲ್ಲ. 11 ಹುಡುಗಿಯರ ಜೊತೆ ಅಶ್ಲೀಲ ಸೆಲ್ಫಿ ತೆಗೆದು 2018ರಲ್ಲಿ ಹೋಮ್ ಗಾರ್ಡ್ ಕೆಲಸದಿಂದ ಅಮಾನತ್ತಾಗಿದ್ದ. ಲಾಡ್ಜ್ ಸೇರಿದಂತೆ ವಿವಿಧ ಕಡೆ ಸೆಲ್ಫಿ ತೆಗೆದು ವೈರಲ್ ಮಾಡಿದ್ದ. ಹಾಗಾಗಿ ಅಂದು ಸಸ್ಪೆಂಡ್ ಮಾಡಲಾಗಿತ್ತು.

ಆಟೋ ಹಾಗೂ ಖಾಸಗಿ ಬಸ್ ನಡುವೆ ಅಪಘಾತ

ತುಮಕೂರು: ಆಟೋ ಹಾಗೂ ಖಾಸಗಿ ಬಸ್ ನಡುವೆ ಅಪಘಾತ (Accident) ಸಂಭವಿಸಿದ್ದು, ಮೂವರಿಗೆ ಗಾಯಗೊಂಡಿದ್ದರೆ, ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬೆನಿವಾರದ ಕೊಪ್ಪಲು ಬಳಿ ನಡೆದಿದೆ. ಆಟೋದಲ್ಲಿದ್ದ ರಾಮಣ್ಣ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಗಡಿ ಮೂಲದ ರಾಮಣ್ಣ ತಮ್ಮ ಮಕ್ಕಳ ಜೊತೆ ದೇವಸ್ಥಾನಕ್ಕೆ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಕುಣಿಗಲ್​ನಲ್ಲಿ ನಡೆಯುತ್ತಿರುವ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಖಾಸಗಿ ಬಸ್ ಬರುತ್ತಿತ್ತು. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಆಟೋದಲ್ಲಿದ್ದ ರಾಮಣ್ಣ ಸಾವನ್ನಪ್ಪಿದ್ದು, ಮೂವರಿಗೆ ಗಾಯವಾಗಿದೆ. ಗಾಯಾಳುಗಳು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹೊಸನಿಜಗಲ್ ಗ್ರಾಮದಲ್ಲಿ ವಿದ್ಯುತ್​ ಪ್ರವಹಿಸಿ ವೆಲ್ಡರ್​ ಸಾವು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಹೊಸನಿಜಗಲ್ ಗ್ರಾಮ ಗ್ರಾಮದ ಅಂಜನೇಯ ದೇವಾಲಯ ಬಳಿ ವಿದ್ಯುತ್​ ಪ್ರವಹಿಸಿ ವೆಲ್ಡರ್​, ಕೂತಘಟ್ಟದ ಫೈರೋಜ್ (35) ಮೃತಪಟ್ಟಿದ್ದಾರೆ. ಚಾವಣಿಗೆ ಪೈಪ್ ಅಳವಡಿಸುವ ವೇಳೆ ವಿದ್ಯುತ್ ಪ್ರವಹಿಸಿದೆ. ಹೈ ವೋಲ್ಟೇಜ್ ಲೈನ್ ನಿಂದ ಸಂಪರ್ಕ ಪಡೆದು ಕೆಲಸ ಮಾಡುವ ವೇಳೆ ವೆಲ್ಡರ್ ಅಸುನೀಗಿದ್ದಾರೆ. ದಾಬಸ್​ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ಹೆಚ್ಚಿನ ಅಪರಾಧ ಸುದ್ಧಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:

ದ್ವೇಷ ರಾಜಕಾರಣ ಬಿಡಿ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದ ಗುಂಪಿಗೆ ಕೌಂಟರ್​ ಕೊಟ್ಟ ಇನ್ನೊಂದು ನಿವೃತ್ತರ ಗುಂಪು; ಪ್ರಧಾನಿ ಆಡಳಿತ ಹೊಗಳಿ ಪತ್ರ

Follow us on

Related Stories

Most Read Stories

Click on your DTH Provider to Add TV9 Kannada