Breaking News: ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿದ ಖ್ಯಾತ ಗಾಯಕ ಭೂಪಿಂದರ್ ಸಿಂಗ್ ನಿಧನ
Bhupinder Singh Passes Away: ಭೂಪಿಂದರ್ ಸಿಂಗ್ ಅವರನ್ನು ಮುಂಬೈನ ಅಂಧೇರಿಯಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಕರುಳಿನ ಇನ್ಫೆಕ್ಷನ್ ಆಗಿತ್ತು.
ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿದ ಖ್ಯಾತ ಗಾಯಕ ಭೂಪಿಂದರ್ ಸಿಂಗ್ (Bhupinder Singh) ಅವರು ಇಂದು (ಜುಲೈ 18) ರಾತ್ರಿ 7.45ಕ್ಕೆ ನಿಧನ ಹೊಂದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.ಭೂಪಿಂದರ್ ಸಿಂಗ್ ಅವರನ್ನು ಮುಂಬೈನ ಅಂಧೇರಿಯಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಕರುಳಿನ ಇನ್ಫೆಕ್ಷನ್ ಆಗಿತ್ತು. ಈಗ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಬಾಲಿವುಡ್ ಮಂದಿ ಶೋಕ ವ್ಯಕ್ತಪಡಿಸಿದ್ದಾರೆ.
‘ನನ್ನ ಪತಿ ಭೂಪಿಂದರ್ ಅವರು ಇಂದು ನಿಧನ ಹೊಂದಿದ್ದಾರೆ. ಅವರ ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ. ಅವರು ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು’ ಎಂದು ಭೂಪಿಂದರ್ ಅವರ ಪತ್ನಿ ಮಿತಾಲಿ ಅವರು ಮಾಹಿತಿ ನೀಡಿದ್ದಾರೆ.
‘10 ದಿನಗಳ ಹಿಂದೆ ಭೂಪಿಂದರ್ ಅವರು ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಇನ್ಫೆಕ್ಷನ್ ಆಗಿತ್ತು. ಕರುಳಿನ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ನಾವು ಈ ಬಗ್ಗೆ ಪರೀಕ್ಷೆ ಮಾಡುವಾಗಲೇ ಅವರಿಗೆ ಕೊವಿಡ್ ಅಂಟಿತು. ಸೋಮವಾರ ಬೆಳಗ್ಗೆ ಅವರ ಆರೋಗ್ಯ ಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿತು. ಅವರಿಗೆ ರಾತ್ರಿ 7.45ರ ಸುಮಾರಿಗೆ ಹೃದಯ ಸ್ತಂಭನ ಆಗಿದೆ’ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
Singer & Guitarist #BhupinderSingh ‘s demise is a great loss to the film industry especially the music world . Heartfelt condolences to his wife #Mitalee ji and the entire family. Will always be remembered through his songs. ॐ शान्ति ! ? pic.twitter.com/ocKrf6viDQ
— Ashoke Pandit (@ashokepandit) July 18, 2022
ಭೂಪಿಂದರ್ ಅವರು ಹುಟ್ಟಿದ್ದು ಪಂಜಾಬ್ನ ಅಮೃತಸರದಲ್ಲಿ. ಅವರು ತಂದೆಯಿಂದ ಸಂಗೀತ ಕಲಿತರು. ಆಲ್ ಇಂಡಿಯಾ ರೇಡಿಯೋ ಮೂಲಕ ತಮ್ಮ ವೃತ್ತಿಜೀವನವನ್ನು ಭೂಪಿಂದರ್ ಆರಂಭಿಸಿದರು. 1962ರಲ್ಲಿ ಸಂಗೀತ ಸಂಯೋಜಕ ಮದನ್ ಮೋಹನ್ ಅವರು ಪಾರ್ಟಿ ಒಂದಕ್ಕೆ ತೆರಳಿದ್ದರು. ಈ ಪಾರ್ಟಿಯಲ್ಲಿ ಭೂಪಿಂದರ್ ಗಿಟಾರ್ ಬಾರಿಸುತ್ತಿದ್ದರು. ಅದನ್ನು ಕೇಳಿ ಅವರಿಗೆ ಮುಂಬೈಗೆ ಬರುವಂತೆ ಹೇಳಿದರು ಮದನ್. ‘ಹೊಕೆ ಮಜ್ಬೂರ್..’ ಹಾಡನ್ನು ಹಾಡುವಂತೆ ಭೂಪಿಂದರ್ಗೆ ಮದನ್ ಆಫರ್ ನೀಡಿದರು. ನಂತರ ಬಾಲಿವುಡ್ನಲ್ಲಿ ಭೂಪಿಂದರ್ ಅವರು ಗುರುತಿಸಿಕೊಳ್ಳುತ್ತಾ ಬಂದರು.
‘ನಾಮ್ ಗಮ್ ಜಾಯೆಗಾ..’, ‘ಹೋತಾ ಪೆ ಐಸಿ ಬಾತ್..’, ‘ಕಭಿ ಕಿಸಿ ಕೋ ಮುಕಮ್ಮಲ್ ಜಹಾ ನಹಿ ಮಿಲ್ತಾ..’ ಸೇರಿ ಇನ್ನೂ ಹಲವು ಸೂಪರ್ ಹಿಟ್ ಗೀತೆಗಳು ಅವರ ಕಂಠದಿಂದ ಮೂಡಿ ಬಂದಿವೆ.
Published On - 10:15 pm, Mon, 18 July 22