AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sini Shetty: ‘ಮಿಸ್​ ಇಂಡಿಯಾ 2022’ ಸಿನಿ ಶೆಟ್ಟಿ ಸೂಪರ್​ ಡ್ಯಾನ್ಸ್​ ವಿಡಿಯೋ ವೈರಲ್​; ಹೆಜ್ಜೆ ಹಾಕಿದ್ದು ಯಾವ ಹಾಡಿಗೆ?

Sini Shetty Dance Video: ಡ್ಯಾನ್ಸ್​ನಲ್ಲಿ ಸಿನಿ ಶೆಟ್ಟಿ ಅವರು ತರಬೇತಿ ಪಡೆದುಕೊಂಡಿದ್ದಾರೆ. ಆದಷ್ಟು ಬೇಗ ಅವರು ಸಿನಿಮಾದಲ್ಲಿ ನಟಿಸಬೇಕು ಎಂದು ಫ್ಯಾನ್ಸ್​ ಹಂಬಲ ವ್ಯಕ್ತಪಡಿಸುತ್ತಿದ್ದಾರೆ.

Sini Shetty: ‘ಮಿಸ್​ ಇಂಡಿಯಾ 2022’ ಸಿನಿ ಶೆಟ್ಟಿ ಸೂಪರ್​ ಡ್ಯಾನ್ಸ್​ ವಿಡಿಯೋ ವೈರಲ್​; ಹೆಜ್ಜೆ ಹಾಕಿದ್ದು ಯಾವ ಹಾಡಿಗೆ?
ಸ್ನೇಹಿತೆ ಜತೆ ಸಿನಿ ಶೆಟ್ಟಿ ಡ್ಯಾನ್ಸ್​
TV9 Web
| Updated By: ಮದನ್​ ಕುಮಾರ್​|

Updated on:Jul 19, 2022 | 8:15 AM

Share

ಕರ್ನಾಟಕ ಮೂಲದ ಸಿನಿ ಶೆಟ್ಟಿ (Sini Shetty) ಅವರು ಈ ವರ್ಷ ಮಿಸ್​ ಇಂಡಿಯಾ (Miss India) ಕಿರೀಟ ಮುಡಿಗೇರಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಅವರ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್​ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಫ್ಯಾಷನ್​ ಜಗತ್ತಿನಲ್ಲಿ ಹೆಸರು ಮಾಡಿದವರು ಸಿನಿಮಾಗೆ ಎಂಟ್ರಿ ನೀಡುವುದು ವಾಡಿಕೆ. ಈಗಾಗಲೇ ಸಿನಿ ಶೆಟ್ಟಿ ಅವರಿಗೂ ಹಲವು ಆಫರ್​ಗಳು ಬಂದಿರುತ್ತವೆ. ಚಿತ್ರರಂಗಕ್ಕೆ ಕಾಲಿಡಲು ಬೇಕಾದ ಹಲವು ತಯಾರಿಯನ್ನು ಸಿನಿ ಶೆಟ್ಟಿ ಈಗಾಗಲೇ ಮಾಡಿಕೊಂಡಂತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕೆಲವು ಡ್ಯಾನ್ಸ್ ವಿಡಿಯೋಗಳು ವೈರಲ್​ ಆಗಿವೆ. ‘ಮಿಸ್​ ಇಂಡಿಯಾ 2022’ (Miss India 2022) ಪಟ್ಟ ಗೆದ್ದ ಬಳಿಕ ಅವರನ್ನು ಸೋಶಿಯಲ್​ ಮೀಡಿಯಾದಲ್ಲಿ ಫಾಲೋ ಮಾಡುವವರ ಸಂಖ್ಯೆ ಹೆಚ್ಚಿದೆ. ಸಿನಿ ಶೆಟ್ಟಿ ಹಂಚಿಕೊಂಡ ವಿಡಿಯೋಗಳು ಲಕ್ಷಾಂತರ ವೀವ್ಸ್​ ಪಡೆದುಕೊಂಡಿವೆ.

ಸಿನಿ ಶೆಟ್ಟಿ ಅವರು ಡ್ಯಾನ್ಸ್​ನಲ್ಲಿ ಪರಿಣತಿ ಹೊಂದಿದ್ದಾರೆ. ಬಾಲಿವುಡ್​ನ ಅನೇಕ ಹಾಡುಗಳಿಗೆ ಅವರು ರೀಲ್ಸ್​ ಮಾಡಿದ್ದಾರೆ. ಅವರು ಹೆಜ್ಜೆ ಹಾಕುವ ಪರಿ ಕಂಡು ಫ್ಯಾನ್ಸ್​ ಬೆರಗಾಗಿದ್ದಾರೆ. ನೃತ್ಯಪ್ರಧಾನ ಸಿನಿಮಾದ ಮೂಲಕವೇ ಅವರು ಬಾಲಿವುಡ್​ಗೆ ಎಂಟ್ರಿ ನೀಡಿದರೆ ಉತ್ತಮ ಎಂದು ಕೂಡ ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಷ್ಟರಮಟ್ಟಿಗೆ ಅವರ ಡ್ಯಾನ್ಸ್​ ಕಣ್ಮನ ಸೆಳೆಯುತ್ತಿದೆ.

ಇದನ್ನೂ ಓದಿ
Image
Miss India: ಮಿಸ್​ ಇಂಡಿಯಾ ಗೆದ್ದ ಸಿನಿ ಶೆಟ್ಟಿಗೆ ಸಿಗುತ್ತೆ ದೊಡ್ಡ​​ ಚಾನ್ಸ್​; ಹೀಗೆ ಬಾಲಿವುಡ್ ಟಿಕೆಟ್​ ಪಡೆದವರ ಲಿಸ್ಟ್​ ಇಲ್ಲಿದೆ..
Image
ಹೊಂಬಾಳೆ ಜತೆ ಸಿನಿಮಾ ಮಾಡಲಿದ್ದಾರೆ ಮಾಜಿ ಮಿಸ್​ ವರ್ಲ್ಡ್​ ಮಾನುಷಿ ಚಿಲ್ಲರ್​? ಕುತೂಹಲ ಮೂಡಿಸಿದ ಭೇಟಿ
Image
ಮಿಸ್​ ವರ್ಲ್ಡ್​​ ಆಗಿ ಈಗ ಚಿತ್ರರಂಗಕ್ಕೆ ಕಾಲಿಡುತ್ತಿರುವ ಮಾನುಷಿ ಚಿಲ್ಲರ್​ಗೆ ಬರ್ತ್​ಡೇ ಸಂಭ್ರಮ
Image
2021ರ ವಿಶ್ವ ಸುಂದರಿ ಪಟ್ಟ ಗೆದ್ದ ಹರ್ನಾಜ್​ ಸಂಧು ಯಾರು ಗೊತ್ತಾ? ತೀರ್ಪುಗಾರರು ಮನಸೋತಿದ್ದು ಹರ್ನಾಜ್ ಅವರ ಈ ಉತ್ತರಕ್ಕೆ- ಇಲ್ಲಿದೆ ಸ್ಟೋರಿ

ದೀಪಿಕಾ ಪಡುಕೋಣೆ ಮತ್ತು ಶಾಹಿದ್​ ಕಪೂರ್​ ಜೊತೆಯಾಗಿ ಕಾಣಿಸಿಕೊಂಡ ‘ಪದ್ಮಾವತ್​’ ಸಿನಿಮಾದ ಹಾಡುಗಳೆಲ್ಲವೂ ಸೂಪರ್​ ಹಿಟ್​. ಅದರಲ್ಲೂ ‘ನೈನೋವಾಲೇ ನೇ..’ ಸಾಂಗ್ ಎಲ್ಲರಿಗೂ ಇಷ್ಟ. ಆ ಗೀತೆಗೆ ಸಿನಿ ಶೆಟ್ಟಿ ರೀಲ್ಸ್​ ಮಾಡಿದ್ದಾರೆ. ಸ್ನೇಹಿತೆಯ ಜೊತೆಗೂಡಿ ಅವರು ಭರ್ಜರಿಯಾಗಿ ಸ್ಟೆಪ್ಸ್​ ಹಾಕಿದ್ದಾರೆ. ಈವರೆಗೂ ಈ ವಿಡಿಯೋವನ್ನು 7.7 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಿಸಲಾಗಿದೆ. ಕಮೆಂಟ್​ಗಳ ಮೂಲಕ ಸಾವಿರಾರು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.

View this post on Instagram

A post shared by Sini Shetty (@sinishettyy)

ಸಿನಿ ಶೆಟ್ಟಿ ಅವರ ಇನ್ನಿತರೆ ರೀಲ್ಸ್​ ಕೂಡ ಮಿಲಿಯನ್​ಗಟ್ಟಲೆ ವೀವ್ಸ್​ ಪಡೆದುಕೊಂಡಿವೆ. ಸದ್ಯಕ್ಕೆ ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 1.43 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ. ‘ಮಿಸ್​ ಇಂಡಿಯಾ 2022’ ಕಿರೀಟ ತೊಟ್ಟಿರುವ ಅವರನ್ನು ಮುಂಬೈನಲ್ಲಿ ಭರ್ಜರಿಯಾಗಿ ಸ್ವಾಗತಿಸಲಾಗಿದೆ. ಕೆಲವೇ ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದ ಅವರಿಗೆ ಆರತಿ ಬೆಳಗಿ ಅದ್ದೂರಿ ಸ್ವಾಗತ ನೀಡಲಾಗಿತ್ತು. ಆದಷ್ಟು ಬೇಗ ಅವರು ಸಿನಿಮಾ ರಂಗಕ್ಕೆ ಕಾಲಿಡಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ.

Published On - 8:15 am, Tue, 19 July 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!