AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಂಬಾಳೆ ಜತೆ ಸಿನಿಮಾ ಮಾಡಲಿದ್ದಾರೆ ಮಾಜಿ ಮಿಸ್​ ವರ್ಲ್ಡ್​ ಮಾನುಷಿ ಚಿಲ್ಲರ್​? ಕುತೂಹಲ ಮೂಡಿಸಿದ ಭೇಟಿ

ಇತ್ತೀಚೆಗೆ ಮಾನುಷಿ ಚಿಲ್ಲರ್ ನಟನೆಯ ಮೊದಲ ಸಿನಿಮಾ ‘ಸಾಮ್ರಾಟ್ ಪೃಥ್ವಿರಾಜ್​’ ತೆರೆಗೆ ಬಂತು. ಈ ಬೆನ್ನಲ್ಲೇ ಅವರು ವಿಜಯ್​ ಕಿರಗಂದೂರು ಅವರನ್ನು ಭೇಟಿ ಮಾಡಿದ್ದಾರೆ.

ಹೊಂಬಾಳೆ ಜತೆ ಸಿನಿಮಾ ಮಾಡಲಿದ್ದಾರೆ ಮಾಜಿ ಮಿಸ್​ ವರ್ಲ್ಡ್​ ಮಾನುಷಿ ಚಿಲ್ಲರ್​? ಕುತೂಹಲ ಮೂಡಿಸಿದ ಭೇಟಿ
ವಿಜಯ್​-ಮಾನುಷಿ ಚಿಲ್ಲರ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jun 24, 2022 | 8:00 PM

Share

ವಿಜಯ್ ಕಿರಗಂದೂರು (Vijay Kirgandur) ಒಡೆತನದ ‘ಹೊಂಬಾಳೆ ಫಿಲ್ಮ್ಸ್​’ (Hombale Films) ನಿರ್ಮಾಣ ಸಂಸ್ಥೆ ಬ್ಯಾಕ್​ ಟು ಬ್ಯಾಕ್ ಸಿನಿಮಾಗಳನ್ನು ಘೋಷಣೆ ಮಾಡುತ್ತಲೇ ಇದೆ. ಕೇವಲ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈ ಮೂಲಕ ಪರ ಭಾಷೆಯ ಸ್ಟಾರ್ ನಟರ ಜತೆಗೂ ಕೈ ಜೋಡಿಸುತ್ತಿದೆ. ಈ ವರೆಗೆ ಹೊಂಬಾಳೆ ಫಿಲ್ಮ್ಸ್ ಯಾವುದೇ ಬಾಲಿವುಡ್ ಸಿನಿಮಾ ಘೋಷಣೆ ಮಾಡಿಲ್ಲ. ಈ ಬಗ್ಗೆ ಅನೇಕರಲ್ಲಿ ಕುತೂಹಲ ಇದೆ. ‘ಹೊಂಬಾಳೆ ಫಿಲ್ಮ್ಸ್ ಬಾಲಿವುಡ್​ಗೆ ಕಾಲಿಡೋದು ಯಾವಾಗ’ ಎಂದು ಫ್ಯಾನ್ಸ್ ಕೇಳುತ್ತಲೇ ಇದ್ದಾರೆ. ಹೀಗಿರುವಾಗಲೇ ವಿಜಯ್ ಕಿರಗಂದೂರು ಅವರು ಬಾಲಿವುಡ್ ನಟಿ ಮಾನುಷಿ ಚಿಲ್ಲರ್ ಅವರನ್ನು ಭೇಟಿ ಮಾಡಿದ್ದಾರೆ. ಇದು ಸಾಕಷ್ಟು ಕುತೂಹಲ ಸೃಷ್ಟಿ ಮಾಡಿದೆ.

ಮಾನುಷಿ ಚಿಲ್ಲರ್ 2017ರಲ್ಲಿ ಫೆಮಿನಾ ಮಿಸ್ ಇಂಡಿಯಾ ಆದರು. ಇದಾದ ಬಳಿಕ ಅವರು ‘ಮಿಸ್​ ವರ್ಲ್ಡ್​​ 2017’ ಕಿರೀಟವನ್ನು ಮುಡಿಗೇರಿಸಿಕೊಂಡರು. ಆ ಬಳಿಕ ಅವರ ಖ್ಯಾತಿ ಹೆಚ್ಚಿತು. ವಿಶ್ವಮಟ್ಟದಲ್ಲಿ ಮಾನುಷಿ ಗುರುತಿಸಿಕೊಂಡರು. ರಾತ್ರಿ ಬೆಳಗಾಗುವುದರೊಳಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಬಿಟ್ಟರು. ಇನ್​​ಸ್ಟಾಗ್ರಾಮ್​ನಲ್ಲಿ ಲಕ್ಷಾಂತರ ಮಂದಿ ಅವರನ್ನು ಹಿಂಬಾಲಿಸೋಕೆ ಆರಂಭಿಸಿದರು. ಇತ್ತೀಚೆಗೆ ಅವರ ನಟನೆಯ ಮೊದಲ ಸಿನಿಮಾ ‘ಸಾಮ್ರಾಟ್ ಪೃಥ್ವಿರಾಜ್​’ ತೆರೆಗೆ ಬಂತು. ಈ ಬೆನ್ನಲ್ಲೇ ಅವರು ವಿಜಯ್​ ಕಿರಗಂದೂರು ಅವರನ್ನು ಭೇಟಿ ಮಾಡಿದ್ದಾರೆ.

ಇದನ್ನೂ ಓದಿ
Image
ನೂರಾರು ಕೋಟಿ ಗಳಿಸಿದರೂ ಆ ತಪ್ಪು ಮಾಡಲಿಲ್ಲ ಹೊಂಬಾಳೆ ಫಿಲ್ಮ್ಸ್​; ನಿರ್ಮಾಪಕರ​ ಜಾಣತನದ ನಡೆ
Image
Yash: ಅಬ್ಬಬ್ಬಾ.. ರಾಕಿಂಗ್ ಸ್ಟಾರ್ ಯಶ್ ತೊಟ್ಟ ಈ ಕ್ಯಾಪ್​ ಇಷ್ಟೊಂದು ದುಬಾರಿಯಾ?
Image
ಸಂಡೇ ಸ್ಪೆಷಲ್​; ಯಶ್ ಜತೆಗಿನ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್
Image
Radhika Pandit: ಕುಟುಂಬದೊಂದಿಗೆ ಜನ್ಮದಿನ ಆಚರಿಸಿದ ರಾಧಿಕಾ ಪಂಡಿತ್; ಇಲ್ಲಿವೆ ಮುದ್ದಾದ ಫೋಟೋಗಳು

ಈ ಬಗ್ಗೆ ಹೊಂಬಾಳೆ ಸೋಶಿಯಲ್ ಮೀಡಿಯಾ ಖಾತೆಯಿಂದ ಫೋಟೋ ಹಂಚಿಕೊಳ್ಳಲಾಗಿದೆ. ಬೆಂಗಳೂರು ಹೊಂಬಾಳೆ ಫಿಲ್ಮ್ಸ್ ಕಚೇರಿಯಲ್ಲಿ ಈ ಭೇಟಿ ನಡೆದಿದೆ ಎಂದು ಮಾಹಿತಿ ನೀಡಲಾಗಿದೆ. ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ​ಹೊಂಬಾಳೆ ಜತೆ ಮಾನುಷಿ ಸಿನಿಮಾ ಮಾಡುತ್ತಾರಾ ಎನ್ನುವ ಪ್ರಶ್ನೆಗಳು ಎದ್ದಿವೆ.

‘ನಿನ್ನಿಂದಲೇ’, ‘ಮಾಸ್ಟರ್​​ಪೀಸ್​’, ‘ರಾಜಕುಮಾರ’, ‘ಕೆಜಿಎಫ್: ಚಾಪ್ಟರ್ 1’, ‘ಯುವರತ್ನ’, ‘ಕೆಜಿಎಫ್: ಚಾಪ್ಟರ್​ 2’ ಚಿತ್ರಗಳನ್ನು ‘ಹೊಂಬಾಳೆ ಫಿಲ್ಮ್ಸ್​’ ಇಲ್ಲಿಯವರೆಗೆ ನಿರ್ಮಾಣ ಮಾಡಿದೆ. ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ‘ಸಲಾರ್’, ‘ಬಘೀರ’, ‘ರಿಚರ್ಡ್​ ಆ್ಯಂಟನಿ’, ‘ಟೈಸನ್​’ ಹಾಗೂ ಒಂದು ತಮಿಳು ಸಿನಿಮಾಗಳು ನಿರ್ಮಾಣ ಹಂತದಲ್ಲಿವೆ.

ಇದನ್ನೂ ಓದಿ: Tyson: ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್​ ಜತೆ ಹೊಸ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್​

ನೂರಾರು ಕೋಟಿ ಗಳಿಸಿದರೂ ಆ ತಪ್ಪು ಮಾಡಲಿಲ್ಲ ಹೊಂಬಾಳೆ ಫಿಲ್ಮ್ಸ್​; ನಿರ್ಮಾಪಕರ​ ಜಾಣತನದ ನಡೆ