ದ್ವಿಪಾತ್ರದಲ್ಲಿ ಮಿಂಚಿದ ರಣಬೀರ್ ಕಪೂರ್; ನಿರೀಕ್ಷೆ ಹೆಚ್ಚಿಸಿದ ‘ಶಂಷೇರಾ’ ಟ್ರೇಲರ್
Shamshera Trailer: ಇಡೀ ಸಿನಿಮಾದ ಕಥೆ 1800ರಲ್ಲಿ ಸಾಗಲಿದೆ. ಕಥಾ ನಾಯಕ ಶಂಷೇರಾ ಡಕಾಯಿತಿ ಮಾಡುವ ಪಂಗಡಕ್ಕೆ ಸೇರಿದವನು. ಅವನು ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಾನೆ. ಇದಿಷ್ಟು ವಿಚಾರವನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ.
ರಣಬೀರ್ ಕಪೂರ್ (Ranbir Kapoor) ಅವರು ನಾಲ್ಕು ವರ್ಷಗಳ ಬಳಿಕ ಬೆಳ್ಳಿ ಪರದೆಗೆ ಕಾಲಿಡುತ್ತಿದ್ದಾರೆ. ಅವರ ನಟನೆಯ ‘ಶಂಷೇರಾ’ ಚಿತ್ರ (Shamshera) ಜುಲೈ 22ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ರಿಲೀಸ್ಗೆ ಒಂದು ತಿಂಗಳು ಬಾಕಿ ಇರುವಾಗ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ. ಇತ್ತೀಚೆಗೆ ಬಿಡುಗಡೆ ಆಗಿದ್ದ ಪೋಸ್ಟರ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಈಗ ರಿಲೀಸ್ ಆದ ಟ್ರೇಲರ್ನಲ್ಲಿ ಈ ನಿರೀಕ್ಷೆಯನ್ನು ದ್ವಿಗುಣ ಮಾಡಿದೆ. ಈ ಚಿತ್ರದಲ್ಲಿ ರಣಬೀರ್ ಅವರು ದ್ವಿಪಾತ್ರ ಮಾಡುತ್ತಿದ್ದಾರೆ. ತಂದೆ ಹಾಗೂ ಮಗನಾಗಿ ರಣಬೀರ್ ಕಾಣಿಸಿಕೊಳ್ಳುತ್ತಿದ್ದಾರೆ.
ಇಡೀ ಸಿನಿಮಾದ ಕಥೆ 1800ರಲ್ಲಿ ಸಾಗಲಿದೆ. ಕಥಾ ನಾಯಕ ಶಂಷೇರಾ ಡಕಾಯಿತಿ ಮಾಡುವ ಪಂಗಡಕ್ಕೆ ಸೇರಿದವನು. ಅವನು ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಾನೆ. ಇದಿಷ್ಟು ವಿಚಾರವನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ಸಂಜಯ್ ದತ್ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಅವರ ಪಾತ್ರ ಟ್ರೇಲರ್ನಲ್ಲಿ ಹೈಲೈಟ್ ಆಗಿದೆ.
‘ಶಂಷೇರಾ’ ಟ್ರೇಲರ್ನಲ್ಲಿ ರಣಬೀರ್ ಅವರ ಲುಕ್ ಭಯಾನಕವಾಗಿದೆ. ರಣಬೀರ್ ಉದ್ದನೆಯ ಕೂದಲು ಬಿಟ್ಟಿದ್ದಾರೆ. ಅವರ ಗಡ್ಡ ಕೂಡ ಹೇಗೇಗೋ ಬೆಳೆದುಕೊಂಡಿದೆ. ಕೈಯಲ್ಲಿ ಕೊಡಲಿ ರೀತಿಯ ಆಯುಧ ಒಂದನ್ನು ಹಿಡಿದಿದ್ದಾರೆ. ವಾಣಿ ಕಪೂರ್ ಅವರು ಬೋಲ್ಡ್ ಲುಕ್ ಮೂಲಕ ಗಮನ ಸೆಳೆದಿದ್ದಾರೆ.
ಈ ಸಿನಿಮಾ ರಣಬೀರ್ ಕಪೂರ್ ಹಾಗೂ ನಿರ್ಮಾಪಕ ಯಶ್ ಚೋಪ್ರಾ ಇಬ್ಬರಿಗೂ ಬಹುಮುಖ್ಯವಾಗಿದೆ. 2018ರಲ್ಲಿ ತೆರೆಗೆ ಬಂದ ‘ಸಂಜು’ ಸಿನಿಮಾ ಬಳಿಕ ರಣಬೀರ್ ಸಿನಿಮಾ ಒಪ್ಪಿಕೊಳ್ಳಲು ಆತುರ ಮಾಡಲಿಲ್ಲ. ತುಂಬಾನೇ ಆಲೋಚಿಸಿ ಸಿನಿಮಾ ಒಪ್ಪಿಕೊಂಡರು. ನಾಲ್ಕು ವರ್ಷಗಳ ಗ್ಯಾಪ್ನ ನಂತರ ಬರುತ್ತಿರುವುದರಿಂದ ಅವರಿಗೆ ಗೆಲ್ಲುವ ಅನಿವಾರ್ಯತೆ ಇದೆ. ಇನ್ನು, ಈ ಚಿತ್ರಕ್ಕೆ ಯಶ್ ಚೋಪ್ರಾ ಅವರು ಬಂಡವಾಳ ಹೂಡಿದ್ದಾರೆ. ಈ ವರ್ಷ ತೆರೆಗೆ ಬಂದ ಅವರ ನಿರ್ಮಾಣದ ‘ಜಯೇಶ್ಭಾಯ್ ಜೋರ್ದಾರ್’ ಹಾಗೂ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಗಳು ಸೋತವು. ಈ ಚಿತ್ರಗಳಿಂದ ಆದಿತ್ಯ ಚೋಪ್ರಾಗೆ ದೊಡ್ಡ ನಷ್ಟ ಉಂಟಾಗಿದೆ. ‘ಶಂಷೇರಾ’ ಚಿತ್ರ 150 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಚಿತ್ರ. ಹೀಗಾಗಿ, ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡಲೇಬೇಕಾದ ಅನಿವಾರ್ಯತೆ ಇದೆ.
ಇದನ್ನೂ ಓದಿ: ಭಯ ಬೀಳಿಸುವಂತಿದೆ ರಣಬೀರ್ ಕಪೂರ್ ಹೊಸ ಲುಕ್; ಯಾವ ಸಿನಿಮಾ?
ಶೂ ಧರಿಸಿ ರಣಬೀರ್ ದೇವಸ್ಥಾನಕ್ಕೆ ಬಂದಿರಲಿಲ್ಲ; ‘ಬ್ರಹ್ಮಾಸ್ತ್ರ’ ತಂಡದಿಂದ ಬಂತು ಸ್ಪಷ್ಟನೆ