Yash: ಅಬ್ಬಬ್ಬಾ.. ರಾಕಿಂಗ್ ಸ್ಟಾರ್ ಯಶ್ ತೊಟ್ಟ ಈ ಕ್ಯಾಪ್​ ಇಷ್ಟೊಂದು ದುಬಾರಿಯಾ?

‘ಕೆಜಿಎಫ್ 2’ ಸಿನಿಮಾದಿಂದ ಯಶ್​ ಬೇಡಿಕೆ ಹೆಚ್ಚಿದೆ. ಅವರು ಮುಂದಿನ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮೊದಲು ಒಂದು ಬ್ರೇಕ್ ತೆಗೆದುಕೊಂಡು ಕುಟುಂಬದ ಜತೆ ಸುತ್ತಾಟ ನಡೆಸುತ್ತಿದ್ದಾರೆ.

Yash: ಅಬ್ಬಬ್ಬಾ.. ರಾಕಿಂಗ್ ಸ್ಟಾರ್ ಯಶ್ ತೊಟ್ಟ ಈ ಕ್ಯಾಪ್​ ಇಷ್ಟೊಂದು ದುಬಾರಿಯಾ?
ರಾಧಿಕಾ-ಯಶ್
TV9kannada Web Team

| Edited By: Rajesh Duggumane

Jun 11, 2022 | 7:00 AM

‘ಕೆಜಿಎಫ್ 2’ (KGF Chapter 2) ಗೆದ್ದ ನಂತರದಲ್ಲಿ ಯಶ್ ಅವರಿಗೆ (Yash) ಇದ್ದ ಬೇಡಿಕೆ ದುಪ್ಪಟ್ಟಾಗಿದೆ. ಅವರ ಕಾಲ್​ಶೀಟ್​ಗಾಗಿ ಪರಭಾಷೆಯ ನಿರ್ಮಾಪಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ, ಯಶ್ ಕನ್ನಡ ಚಿತ್ರಗಳನ್ನು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡುವ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇನ್ನು, ‘ಕೆಜಿಎಫ್ 2’ನಿಂದ ಯಶ್ ಅವರಿಗೆ ದೊಡ್ಡ ಮಟ್ಟದಲ್ಲಿ ಹಣ ಹರಿದು ಬಂದಿದೆ. ಅವರು ಈ ಚಿತ್ರಕ್ಕಾಗಿ ದೊಡ್ಡ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ, ಯಶ್ ಅವರು ಧರಿಸಿದ ಕ್ಯಾಪ್​ ಫೋಟೋ ಎಲ್ಲರ ಗಮನ ಸೆಳೆದಿದೆ. ಇದರ ಬೆಲೆ ಕೇಳಿ ಫ್ಯಾನ್ಸ್ ಅಚ್ಚರಿ ಹೊರ ಹಾಕಿದ್ದಾರೆ. ಅವರು ಧರಿಸಿದ ಟೋಪಿಯ ಬೆಲೆ ಇಷ್ಟೊಂದಾ ಎಂದು ಮೂಗಿನ ಮೇಲೆ ಬೆರಳು ಇರಿಸಿದ್ದಾರೆ.

‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದು 2 ತಿಂಗಳು ಪೂರ್ಣಗೊಳ್ಳುತ್ತಾ ಬಂದಿದೆ. ಈ ಚಿತ್ರ ಒಟಿಟಿಯಲ್ಲಿ ರಿಲೀಸ್ ಆದ ಹೊರತಾಗಿಯೂ ಹಲವು ಚಿತ್ರಮಂದಿರಗಳಲ್ಲಿ ‘ಕೆಜಿಎಫ್ 2’ ಪ್ರದರ್ಶನ ಕಾಣುತ್ತಿರುವುದು ಸಿನಿಮಾದ ಹೆಚ್ಚುಗಾರಿಕೆ. ಈ ಸಿನಿಮಾದಿಂದ ಯಶ್​ ಬೇಡಿಕೆ ಹೆಚ್ಚಿದೆ. ಅವರು ಮುಂದಿನ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮೊದಲು ಒಂದು ಬ್ರೇಕ್ ತೆಗೆದುಕೊಂಡು ಕುಟುಂಬದ ಜತೆ ಸುತ್ತಾಟ ನಡೆಸುತ್ತಿದ್ದಾರೆ.

ಪತ್ನಿ ರಾಧಿಕಾ ಪಂಡಿತ್ ಮಕ್ಕಳಾದ ಆಯ್ರಾ ಹಾಗೂ ಯಥರ್ವ್​ ಜತೆ ಯಶ್ ಅವರು ಪಿಕ್​ನಿಕ್ ತೆರಳಿದ್ದರು. ಗಿಳಿಯ ಜತೆ ಸಮಯ ಕಳೆದಿದ್ದರು. ಈ ವೇಳೆ ಯಶ್ ಧರಿಸಿರುವ ಹ್ಯಾಟ್ ಎಲ್ಲರ ಗಮನ ಸೆಳೆದಿದೆ. ಈ ಹ್ಯಾಟ್​ನ ಬೆಲೆ ಅಚ್ಚರಿ ಮೂಡಿಸುವಂತಿದೆ.

ಇದನ್ನೂ ಓದಿ: ಸಂಡೇ ಸ್ಪೆಷಲ್​; ಯಶ್ ಜತೆಗಿನ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ಯಶ್ ಧರಿಸಿರುವುದು Balmain ಕ್ಯಾಪ್. ಈ ಕ್ಯಾಪ್​ಗೆ ಆನ್​ಲೈನ್​ನಲ್ಲಿ 25-32 ಸಾವಿರ ರೂಪಾಯಿ ಇದೆ. ಯಶ್ ಅವರು ಧರಿಸಿರುವ ಕ್ಯಾಪ್​ನ ಬೆಲೆ ಕೇಳಿ ಎಲ್ಲರೂ ನಿಜಕ್ಕೂ ಅಚ್ಚರಿ ಹೊರ ಹಾಕಿದ್ದಾರೆ. ಇತ್ತೀಚೆಗೆ ಯಶ್ ಅವರು ಫ್ಯಾಮಿಲಿ ಜತೆಗಿನ ವಿಡಿಯೋ ಹಂಚಿಕೊಂಡಿದ್ದರು. ಈ ವೇಳೆ ಅವರ ಶೂ ಕಲೆಕ್ಷನ್ ಎಲ್ಲರ ಗಮನ ಸೆಳೆದಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada