‘ಕೆಜಿಎಫ್ 2’ ದಾಖಲೆಗೆ ಕುತ್ತು? ಬಾಕ್ಸ್ ಆಫೀಸ್ ಕಲೆಕ್ಷನ್​ ಹಿಂದಿಕ್ಕಲು ‘ಆರ್​ಆರ್​ಆರ್​’ ತಂಡ ಮಾಡಿತು ಹೊಸ ಪ್ಲ್ಯಾನ್

‘ಆರ್​ಆರ್​ಆರ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 1144 ಕೋಟಿ ಗಳಿಕೆ ಮಾಡಿದೆ. ‘ಕೆಜಿಎಫ್ 2’ ಚಿತ್ರ 1250 ಕೋಟಿ ರೂಪಾಯಿ ಬಾಚಿಕೊಂಡಿದೆ. ಎರಡೂ ಚಿತ್ರಗಳ ಮಧ್ಯೆ 100 ಕೋಟಿ ರೂಪಾಯಿಗೂ ಹೆಚ್ಚಿನ ಅಂತರವಿದೆ.

‘ಕೆಜಿಎಫ್ 2’ ದಾಖಲೆಗೆ ಕುತ್ತು? ಬಾಕ್ಸ್ ಆಫೀಸ್ ಕಲೆಕ್ಷನ್​ ಹಿಂದಿಕ್ಕಲು ‘ಆರ್​ಆರ್​ಆರ್​’ ತಂಡ ಮಾಡಿತು ಹೊಸ ಪ್ಲ್ಯಾನ್
ಆರ್​ಆರ್​ಆರ್​-ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 23, 2022 | 10:23 AM

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಸಿನಿಮಾ (RRR Movie) ಹಾಗೂ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ ‘ಕೆಜಿಎಫ್ 2’ ಸಿನಿಮಾ 20 ದಿನಗಳ ಅಂತರದಲ್ಲಿ ತೆರೆಗೆ ಬಂತು. ‘ಆರ್​ಆರ್​ಆರ್​’ ಕಲೆಕ್ಷನ್ ಮೇಲೆ ಯಶ್ ಸಿನಿಮಾ ಪ್ರಭಾವ ಬೀರಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಎರಡೂ ಚಿತ್ರಗಳಲ್ಲಿ ಯಾವುದು ಅತಿ ಹೆಚ್ಚು ಕಲೆಕ್ಷನ್ ಮಾಡುತ್ತದೆ ಎಂಬ ಕುತೂಹಲ ಇತ್ತು. ಬಾಕ್ಸ್ ಆಫೀಸ್​ನಲ್ಲಿ ಅಂತಿಮವಾಗಿ ‘ಕೆಜಿಎಫ್ 2’ ಚಿತ್ರ ‘ಆರ್​ಆರ್​ಆರ್’ ಚಿತ್ರವನ್ನು ಹಿಂದಿಕ್ಕಿತು. ಆದರೆ, ಸ್ಪರ್ಧೆ ಇಲ್ಲಿಗೆ ಮುಗಿದಿಲ್ಲ. ‘ಕೆಜಿಎಫ್ 2’ (KGF: Chapter 2) ಚಿತ್ರದ ಕಲೆಕ್ಷನ್ ಹಿಂದಿಕ್ಕಲು ರಾಜಮೌಳಿ ತಂಡ ಹೊಸ ಪ್ಲ್ಯಾನ್ ಮಾಡಿದೆ.

‘ಆರ್​ಆರ್​ಆರ್​’ ಸಿನಿಮಾ ವಿಶ್ವಾದ್ಯಂತ ತೆರೆಗೆ ಬಂದ ಹೊರತಾಗಿಯೂ ಅನೇಕ ದೇಶಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿಲ್ಲ. ಅಕ್ಟೋಬರ್ 21ಕ್ಕೆ ಈ ಸಿನಿಮಾ ಜಪಾನ್​ನಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಜಪಾನ್​ ಭಾಷೆಗೆ ಡಬ್ ಮಾಡಿ ‘ಆರ್​ಆರ್​ಆರ್’ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಈಗಾಗಲೇ ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಸಿನಿಮಾ ಜಪಾನ್​ನಲ್ಲಿ ರಿಲೀಸ್ ಆಗಿದೆ. ಈ ಕಾರಣಕ್ಕೆ ‘ಆರ್​ಆರ್​ಆರ್’ ಚಿತ್ರವನ್ನು ಅಲ್ಲಿನ ಸಿನಿ ಪ್ರಿಯರು ವೀಕ್ಷಿಸಬಹುದು.

‘ಆರ್​ಆರ್​ಆರ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 1144 ಕೋಟಿ ಗಳಿಕೆ ಮಾಡಿದೆ. ‘ಕೆಜಿಎಫ್ 2’ ಚಿತ್ರ 1250 ಕೋಟಿ ರೂಪಾಯಿ ಬಾಚಿಕೊಂಡಿದೆ. ಎರಡೂ ಚಿತ್ರಗಳ ಮಧ್ಯೆ 100 ಕೋಟಿ ರೂಪಾಯಿಗೂ ಹೆಚ್ಚಿನ ಅಂತರವಿದೆ. ಒಂದೊಮ್ಮೆ ‘ಆರ್​ಆರ್​ಆರ್’ ಚಿತ್ರವನ್ನು ಜಪಾನ್ ಮಂದಿ ಮೆಚ್ಚಿಕೊಂಡರೆ ಪ್ರಶಾಂತ್ ನೀಲ್ ಚಿತ್ರ ಮಾಡಿದ ದಾಖಲೆಗೆ ಕುತ್ತು ಬರಲಿದೆ.

ಇದನ್ನೂ ಓದಿ
Image
KGF Chapter 2: ಟಿವಿಯಲ್ಲಿ ಬರೋಕೆ ರೆಡಿ ಆಯ್ತು ‘ಕೆಜಿಎಫ್ 2’; ಹೊಸ ಅಪ್ಡೇಟ್ ನೀಡಿದ ಜೀ ಕನ್ನಡ
Image
ಮಧ್ಯರಾತ್ರಿ ಸಿನಿಮಾ ವೀಕ್ಷಿಸಿದ ಶ್ರೀನಿಧಿ ಶೆಟ್ಟಿ, ಗರುಡ, ವಿನಯ್ ರಾಜ್​ಕುಮಾರ್..; ಚಿತ್ರ ನೋಡಿ ಆಶಾ ಭಟ್ ಹೇಳಿದ್ದೇನು?
Image
Srinidhi Shetty: ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ ಕ್ಯೂಟ್ ಫೋಟೋ ಗ್ಯಾಲರಿ
Image
‘ಕೆಜಿಎಫ್​ 2’ ಪ್ರಚಾರಕ್ಕಾಗಿ ದೆಹಲಿಗೆ ತೆರಳಿದ ಯಶ್, ಶ್ರೀನಿಧಿ ಶೆಟ್ಟಿ

ಇದನ್ನೂ ಓದಿ: 100 ದಿನ ಪೂರೈಸಿದ ‘ಕೆಜಿಎಫ್​: ಚಾಪ್ಟರ್​ 2’; ಪ್ರೇಕ್ಷಕರಿಗೆ ‘ಹೊಂಬಾಳೆ ಫಿಲ್ಮ್ಸ್​’ ಧನ್ಯವಾದ

ಯಶ್ ಸಿನಿಮಾ ಮಾಡಿರುವ ದಾಖಲೆಯನ್ನು ಮುರಿಯುವುದು ಅಷ್ಟು ಸುಲಭವಿಲ್ಲ ಎನ್ನುತ್ತಾರೆ ಬಾಕ್ಸ್ ಆಫೀಸ್ ಪಂಡಿತರು. ‘ಬಾಹುಬಲಿ 2’ ಸಿನಿಮಾ ಜಪಾನ್​ನಲ್ಲಿ ದೊಡ್ಡ ಕಲೆಕ್ಷನ್ ಮಾಡಿಲ್ಲ. ಹೀಗಾಗಿ, ಅಲ್ಲಿ ‘ಆರ್​ಆರ್​ಆರ್’ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡೋದು ಅನುಮಾನ ಎನ್ನಲಾಗುತ್ತಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ