‘ಇದು ಒಂಭತ್ತನೇ ಸೀಸನ್ ಅಲ್ಲ, ಒಂದನೇ ಸೀಸನ್’; ‘ಬಿಗ್ ಬಾಸ್ ಒಟಿಟಿ’ ಪ್ರೀಮಿಯರ್ ದಿನಾಂಕ ಪ್ರಕಟ
Kannada Bigg Boss OTT: ಮೊದಲು ‘ಬಿಗ್ ಬಾಸ್ ಒಟಿಟಿ’ ಪ್ರಸಾರ ಕಂಡಿದ್ದು ಹಿಂದಿಯಲ್ಲಿ. ಅಲ್ಲಿ ಇದಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಈ ಕಾರಣಕ್ಕೆ ಈ ಪ್ರಯೋಗವನ್ನು ಈಗ ಕನ್ನಡದಲ್ಲೂ ಮಾಡಲಾಗುತ್ತಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 9’ (Bigg Boss Kannada) ಯಾವಾಗ ಆರಂಭ ಆಗಲಿದೆ ಎಂದು ವೀಕ್ಷಕರು ಕಾದು ಕೂತಿದ್ದರು. ಆದರೆ, ಈಗ ಕಲರ್ಸ್ ಕನ್ನಡ ವಾಹಿನಿ ಇದಕ್ಕೆ ಟ್ವಿಸ್ಟ್ ನೀಡಿದೆ. ‘ಬಿಗ್ ಬಾಸ್ ಒಟಿಟಿ’ಯ (Bigg Boss OTT) ಮೊದಲ ಸೀಸನ್ ಆರಂಭಿಸುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಆಗಸ್ಟ್ 6 ಹಾಗೂ 7ರಂದು ಈ ಶೋ ಪ್ರೀಮಿಯರ್ ಆಗಲಿದೆ. ಒಟಿಟಿಯಲ್ಲಿ ಮಾತ್ರ ಈ ಶೋ ಪ್ರಸಾರ ಕಾಣಲಿದೆ.
ಇದನ್ನೂ ಓದಿ
ನೀವು ಬಿಗ್ ಬಾಸ್ ಆಕಾಂಕ್ಷಿಗಳೇ?; ಹಾಗಿದ್ದರೆ ಕಲರ್ಸ್ ಕನ್ನಡ ನೀಡಿದೆ ವಿಶೇಷ ಸೂಚನೆ
ಹಿಂದಿಗೆ ಡಬ್, ಮರಾಠಿಗೆ ರಿಮೇಕ್ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
‘ಬಡ್ಡೀಸ್’ ಚಿತ್ರದಲ್ಲಿ ಆ್ಯಕ್ಷನ್ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್ ರಾಜ್; ಜೂನ್ 24ಕ್ಕೆ ರಿಲೀಸ್
ಮೊದಲು ‘ಬಿಗ್ ಬಾಸ್ ಒಟಿಟಿ’ ಪ್ರಸಾರ ಕಂಡಿದ್ದು ಹಿಂದಿಯಲ್ಲಿ. ಅಲ್ಲಿ ಇದಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಈ ಕಾರಣಕ್ಕೆ ಈ ಪ್ರಯೋಗವನ್ನು ಈಗ ಕನ್ನಡದಲ್ಲೂ ಮಾಡಲಾಗುತ್ತಿದೆ. ವೂಟ್ ಮೂಲಕ ಈ ಶೋ ಪ್ರಸಾರ ಕಾಣಲಿದೆ ಅನ್ನೋದು ವಿಶೇಷ. ಇಂದು (ಜುಲೈ 23) ‘ಬಿಗ್ ಬಾಸ್ ಒಟಿಟಿ’ ಪ್ರೋಮೋ ರಿಲೀಸ್ ಮಾಡಲಾಗಿದೆ.
ಎಲ್ಲರೂ ಸುದೀಪ್ಗಾಗಿ ಕಾಯುತ್ತಾ ಇರುತ್ತಾರೆ. ಸುದೀಪ್ ಆಗಮಿಸುತ್ತಿದ್ದಂತೆ ‘9ನೇ ಸೀಸನ್ಗೆ ಆಲ್ ದಿ ಬೆಸ್ಟ್’ ಎನ್ನುತ್ತಾರೆ. ‘ಇದು ಒಂಭತ್ತಲ್ಲ, ಒಂದು’ ಎನ್ನುತ್ತಾರೆ ಕಿಚ್ಚ. ಆಗ ಎಲ್ಲರೂ ಒಮ್ಮೆ ಕನ್ಫ್ಯೂಸ್ ಆಗುತ್ತಾರೆ. ‘ಒಟಿಟಿಯಲ್ಲಿ ಮಾತ್ರ ಈ ಶೋ ಪ್ರಸಾರ ಕಾಣಲಿದೆ’ ಎಂದು ಗೊಂದಲ ಬಗೆಹರಿಸುತ್ತಾರೆ ಸುದೀಪ್. ಅದ್ದೂರಿಯಾಗಿ ಮೂಡಿ ಬಂದ ಈ ಪ್ರೋಮೋ ಸಾಕಷ್ಟು ವೈರಲ್ ಆಗುತ್ತಿದೆ. ‘ಫಸ್ಟ್ ಟೈಮ್ ಟಿವಿಗೆ ಮೊದಲು ಒಂದು ಒಟಿಟಿ ಸೀಸನ್! ವಾರ ಆರು, ಮಜಾ ನೂರಕ್ಕೆ ನೂರು. ಗ್ರ್ಯಾಂಡ್ ಪ್ರೀಮಿಯರ್ ಆಗಸ್ಟ್ 6, ಸಂಜೆ 7’ ಎಂದು ಕಲರ್ಸ್ ಕನ್ನಡ ವಾಹಿನಿ ಪ್ರೋಮೋಗೆ ಕ್ಯಾಪ್ಶನ್ ನೀಡಿದೆ.
ಕಿಚ್ಚ ಸುದೀಪ್ ಅವರು ‘ವಿಕ್ರಾಂತ್ ರೋಣ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ನಾನಾ ಕಡೆಗಳಲ್ಲಿ ತೆರಳಿ ಈ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಈ ಸಿನಿಮಾ ಜುಲೈ 28ರಂದು ತೆರೆಗೆ ಬರುತ್ತಿದೆ. ಆ ಬಳಿಕ ಅವರು ಕಿರುತೆರೆಯಲ್ಲಿ ಬ್ಯುಸಿ ಆಗಲಿದ್ದಾರೆ. ಒಟಿಟಿ ಸೀಸನ್ ಮುಗಿದ ಬಳಿಕ ‘ಕನ್ನಡ ಬಿಗ್ ಬಾಸ್ ಸೀಸನ್ 9’ ಆರಂಭ ಆಗಲಿದೆ.