AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF Chapter 2: 100 ದಿನ ಪೂರೈಸಿದ ‘ಕೆಜಿಎಫ್​: ಚಾಪ್ಟರ್​ 2’; ಪ್ರೇಕ್ಷಕರಿಗೆ ‘ಹೊಂಬಾಳೆ ಫಿಲ್ಮ್ಸ್​’ ಧನ್ಯವಾದ

KGF 2 Movie 100 Days: ‘ಕೆಜಿಎಫ್​ 2’ ಸಿನಿಮಾ ಬಿಡುಗಡೆಯಾಗಿ 100 ದಿನ ಕಳೆದಿದೆ. ನಟ ಯಶ್​ ಮಾತ್ರವಲ್ಲದೇ ಈ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರ ವೃತ್ತಿ ಜೀವನಕ್ಕೂ ಭರ್ಜರಿ ಮೈಲೇಜ್​ ಸಿಕ್ಕಿದೆ.

KGF Chapter 2: 100 ದಿನ ಪೂರೈಸಿದ ‘ಕೆಜಿಎಫ್​: ಚಾಪ್ಟರ್​ 2’; ಪ್ರೇಕ್ಷಕರಿಗೆ ‘ಹೊಂಬಾಳೆ ಫಿಲ್ಮ್ಸ್​’ ಧನ್ಯವಾದ
ಕೆಜಿಎಫ್: ಚಾಪ್ಟರ್ 2
TV9 Web
| Updated By: ಮದನ್​ ಕುಮಾರ್​|

Updated on:Jul 22, 2022 | 2:50 PM

Share

ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದ ಸಿನಿಮಾ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಭಾರತೀಯ ಚಿತ್ರರಂಗ ಮಾತ್ರವಲ್ಲದೇ ಇಡೀ ವಿಶ್ವವೇ ಸ್ಯಾಂಡಲ್​ವುಡ್​ ಕಡೆಗೆ ತಿರುಗಿ ನೋಡುವಂತೆ ಮಾಡಿದ ಖ್ಯಾತ ಈ ಚಿತ್ರಕ್ಕೆ ಸಲ್ಲುತ್ತದೆ. ಯಶ್​ (Yash) ವೃತ್ತಿಜೀವನದ ಅತಿ ದೊಡ್ಡ ಸಿನಿಮಾ ಇದು. ಈ ಚಿತ್ರ ಬಿಡುಗಡೆಯಾಗಿ 100 ದಿನಗಳನ್ನು ಪೂರೈಸಿದೆ. ಈ ಖುಷಿಯನ್ನು ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್​’ (Hombale Films) ಸಂಭ್ರಮಿಸಿದೆ. ಇಷ್ಟು ದೊಡ್ಡ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಲಾಗಿದೆ. ‘ಕೆಜಿಎಫ್​ 2’ ಚಿತ್ರದ ಪ್ರಮುಖ ತುಣುಕುಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ 100 ದಿನಗಳ ಯಶಸ್ವಿ ಪ್ರಯಾಣವನ್ನು ಸಂಭ್ರಮಿಸಲಾಗಿದೆ. ಇಂಥ ಅಭೂತಪೂರ್ವ ಗೆಲುವಿಗೆ ಕಾರಣರಾದ ನಿರ್ದೇಶಕ ಪ್ರಶಾಂತ್​ ನೀಲ್​ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಏಪ್ರಿಲ್​ 14ರಂದು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಬಿಡುಗಡೆ ಆಯಿತು. ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆಕಂಡ ಈ ಚಿತ್ರಕ್ಕೆ ಎಲ್ಲ ರಾಜ್ಯದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಈ ವರ್ಷ ಬಹುದೊಡ್ಡ ಓಪನಿಂಗ್​ ಪಡೆದುಕೊಂಡ ಸಿನಿಮಾ ಎಂಬ ಖ್ಯಾತಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ್ದು. ಈ ಚಿತ್ರದ ಗೆಲುವಿನ ಬಳಿಕ ಯಶ್​ ಅಭಿಮಾನಿಗಳ ಸಂಖ್ಯೆ ಹೇರಳವಾಗಿ ಹೆಚ್ಚಿದೆ.

ಇದನ್ನೂ ಓದಿ
Image
Pushpa 2 Story: ರಾಕಿ ಭಾಯ್​ ರೀತಿ ವಿದೇಶಕ್ಕೆ ಹೋಗ್ತಾನಾ ಪುಷ್ಪರಾಜ್​? ‘ಕೆಜಿಎಫ್​ 2’ ಚಿತ್ರಕ್ಕೆ ‘ಪುಷ್ಪ 2’ ಕಥೆ ಹೋಲಿಕೆ
Image
‘ನಾವು ‘ಕೆಜಿಎಫ್​’ ರೀತಿಯ ಸಿನಿಮಾ ಮಾಡಿದ್ರೆ ಕಟು ಟೀಕೆ ವ್ಯಕ್ತವಾಗುತ್ತಿತ್ತು’: ಕರಣ್​ ಜೋಹರ್​ ಆರೋಪ
Image
‘ಕೆಜಿಎಫ್​’ ಆದ್ಮೇಲೆ 30 ಸಿನಿಮಾದಲ್ಲಿ ನಟಿಸಿದ ಕೃಷ್ಣ ರಾವ್; ‘ಮುದುಕನ ಲವ್​​ಸ್ಟೋರಿ’ ಚಿತ್ರದಲ್ಲಿ ಹೀರೋ ಪಾತ್ರ
Image
‘ಕೆಜಿಎಫ್​ 3’ ಸದ್ಯಕ್ಕಿಲ್ಲ: ಸ್ಪಷ್ಟನೆ ನೀಡಿದ ಹೊಂಬಾಳೆ ಫಿಲ್ಮ್ಸ್​ನ ಕಾರ್ತಿಕ್​ ಗೌಡ; ಅಂತೆ-ಕಂತೆಗಳಿಗೆ ಬ್ರೇಕ್​

ಬಾಕ್ಸ್​ ಆಫೀಸ್​ನಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ವಿಶ್ವ ಮಾರುಕಟ್ಟೆಯಲ್ಲಿ ಈ ಚಿತ್ರಕ್ಕೆ 1250 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಕೇವಲ ಹಿಂದಿ ವರ್ಷನ್​ನಿಂದಲೇ 434 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಇದು ಬಾಲಿವುಡ್​ ಮಂದಿಯನ್ನೂ ನಿಬ್ಬೆರಗಾಗಿಸಿದ ಸಾಧನೆ. ನಿರ್ಮಾಪಕ ವಿಜಯ್​ ಕಿರಗಂದೂರು ಅವರಿಗೆ ಈ ಸಿನಿಮಾದಿಂದ ಅತಿ ದೊಡ್ಡ ಗೆಲುವು ಸಿಕ್ಕಿದೆ.

‘ಕೆಜಿಎಫ್​ 2’ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರ ವೃತ್ತಿ ಜೀವನದ ಮೈಲೇಜ್​ ಹೆಚ್ಚಿದೆ. ನಟ ಯಶ್​ ಅವರು ನ್ಯಾಷನಲ್​ ಸ್ಟಾರ್ ಆಗಿದ್ದಾರೆ. ಅವರ ಮುಂದಿನ ಸಿನಿಮಾ ಯಾವುದು ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದಾರೆ. ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಸಿಕ್ಕಾಪಟ್ಟೆ ಆಫರ್​ ಬರುತ್ತಿದೆ. ನಿರ್ದೇಶಕ ಪ್ರಶಾಂತ್​ ನೀಲ್​ ಜೊತೆ ಸಿನಿಮಾ ಮಾಡಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಮುಂದೆ ಬಂದಿವೆ. ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್​ ಅವರು ಸಖತ್​ ಬ್ಯುಸಿ ಆಗಿದ್ದಾರೆ.

Published On - 12:27 pm, Fri, 22 July 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ